ಕಥಾಸಂಗ್ರಹ-೧ನೆಯ ಭಾಗ 59 ಲಕ್ಷ್ಯವಿಲ್ಲದೆ ಯಾರಿಗೂ ಉಪಕಾರವನ್ನು ಮಾಡಲಿಲ್ಲ, ಆದರೆ ಒಂದು ದಿನ ಮಾತ್ರ ಇಲಿಗಳಿಗೆ ಉಪಕಾರ ಮಾಡಿ ಇದ್ದೇನೆ, ಅದು ಹೇಗಂದರೆ- ಕಳಿಂಗ ದೇಶದೊಳಗೆ ಇಲಿಗಳು ಹೆಚ್ಚಾಗಿ ಉಪದ್ರವವನ್ನು ಮಾಡಲು ಸಕಲ ಪ್ರಜೆಗಳೂ ಆ ಇಲಿಗಳನ್ನು ಹಿಡಿದು ಭಾಂಡಗಳಲ್ಲಿ ತುಂಬಿ ಬಾಯಿ ಕಟ್ಟಿ ಅರಣ್ಯದಲ್ಲಿ ಇಟ್ಟು ಹೋದರು, ನಾನು ಆಮಾರ್ಗದಲ್ಲಿ ಬರುವುದನ್ನು ಇಲಿಗಳು ಕಂಡು ನನ್ನ ನ್ನು ಪ್ರಾರ್ಥಿಸಿ ಕರೆದು-ಎ ಗಜರಾಜಾ ! ನಮ್ಮ ಬಂಧನವನ್ನು ಬಿಡಿಸಲಾರೆಯಾ ? ನಾವೂ ನಿನಗೆ ಒಂದು ಕಾಲ ದಲ್ಲಿ ಉಪಕಾರವನ್ನು ಮಾಡುವೆವು ಎನ್ನಲು ನೀವು ಮಾಡುವಂಧಾ ಉಪಕಾರವೇನು ? ಎಂದು ನನ್ನಲ್ಲಿ ಅಂದುಕೊಂಡು ಆ ಗಡಿಗೆಗಳನ್ನೆಲ್ಲಾ ಒಡೆಯಬಡಿಯಲು ಅದರೊಳ ಗಿದ್ದ ಸಮಸ್ತ ಮೂಷಕಗಳೂ ಹೊರಗೆ ಬಂದು ನನ್ನನ್ನು ಕೊಂಡಾಡಿ-ಆಪತ್ಕಾಲ ದಲ್ಲಿ ನಮ್ಮನ್ನು ನೆನಸು ಎಂದು ಹೇಳಿ, ಹೋದವು ಎನ್ನ ಲು ಈ ಬ್ರಾಹ್ಮಣನು-ಆ ಮಷಿಕಗಳನ್ನು ನೆನೆ ಎಂದು ಹೇಳಿ ಹೋದನು, ಆ ಮೇಲೆ ಈ ಗಜರಾಜನು ಆ ಇಲಿಗಳನ್ನು ನೆನೆಯಲು ಆ ಮಷಕಗಳು ತಮ್ಮ ಕುಲಕೋಟಿಯನ್ನು ಕೂಡಿಕೊಂಡು ಅತಿವೇಗದಿಂದ ಬಂದು ವಾದದಲ್ಲಿ ಬಿದ್ದಿದ್ದ ಆನೆಯನ್ನು ನೋಡಿ-ಎಲೋ ಗಜ ರಾಜಾ ! ಧೈಯ್ಯಂ ಸರ್ವತ್ರ ಸಾಧನಂ ಎಂಬ ನೀತಿ ಇರುವುದರಿಂದ ನೀನು ಧೈರವನ್ನು ಬಿಡಬೇಡವೆಂದು ಹೇಳಿ ಇಲಿಗಳೆಲ್ಲಾ ಕೂಡಿ ಮಣ್ಣು ತೋಡಿ ಆ ವಾದವನ್ನು ಹೂಳಿ ಆನೆಯನ್ನು ಹೊರಡಿಸಲು ಆ ಗಜರಾಜನು ಮೂಷಕಗಳನ್ನು ಕೊಂಡಾಡುತ್ತಾ ತನ್ನ ನಿವಾಸಕ್ಕೆ ಹೋಯಿತು. ಮರುದಿವಸ ವೇದಪಾಲನೆಂಬ ರಾಯನು ಆನೆಯನ್ನು ತನ್ನ ಪಟ್ಟಣಕ್ಕೆ ತರ ಬೇಕೆಂದು ಸಕಲ ಸನ್ನಾಹದಿಂದ ಅರಣ್ಯಕ್ಕೆ ಒಂದು ವಾದದಲ್ಲಿ ಆನೆ ಇಲ್ಲದುದನ್ನು ನೋಡಿ ವ್ಯಸನಪಡುತ್ತಿರಲು ಆತನ ಮಂತ್ರಿಯು ರಾಯನನ್ನು ನೋಡಿ-ಅಯಾ ಮಹಾರಾಜನೇ ! ಆ ಆನೆಯನ್ನು ಮೂಷಕಗಳು ತಮ್ಮ ಸಹಾಯದಿಂದ ಹೊರಡಿಸಿ ಕೊಂಡು ಹೋದುವು ಎಂದು ಹೇಳಿದನು. ಆಗ ರಾಯನು ಕೋಪರೂಢನಾಗಿ ತನ್ನ ದೇಶದಲ್ಲಿ ಇರುವ ಪ್ರಜೆಗಳೆಲ್ಲರನ್ನು ಕರಿಸಿ ಮೂಷಕಗಳನ್ನು ಸಂಹರಿಸಿರೆಂದು ನೇಮಿಸಿ ಕಳುಹಿಸಲು ಸರ್ವಪ್ರಜೆಗಳೂ ಬೋನುಗಳಿಂದಲೂ ಮಂತ್ರತಂತ್ರಗಳಿಂದಲೂ ವಿಷಪ್ರ ಯೋಗಗಳಿಂದಲೂ ಮೂಷಕನಿಗ್ರಹವನ್ನು ಮಾಡುತ್ತಾ ಇದ್ದರು. ಸಮಸ್ತ ಮಷ ಕಸಮೂಹವೂ ತಮಗೆ ಯಜಮಾನನಾದ ಬುದಿ ವಂತನೆಂಬ ಮೂಷಕದ ಬಳಿಗೆ ಬಂದು ತಮಗೆ ಬಂದಿರುವ ವಿಪತ್ತನ್ನು ಹೇಳಿಕೊಳ್ಳಲು ಆ ಮಷಕರಾಜನು ಅವು ಗಳನ್ನು ಸಂತೈಸಿ ನಿಮ್ಮ ವಿಪತ್ತನ್ನು ಪರಿಹರಿಸುವೆನೆಂದು ಅವುಗಳಿಗೆ ಅಭಯವನ್ನು ಕೊಟ್ಟು ಆ ರಾತ್ರಿಯಲ್ಲಿ ರಾಯನ ಮೇಲುಮಾಳಿಗೆಯಲ್ಲಿ ಅಡಗಿದ್ದು ರಾಯನು ಮಜ್ಜನಭೋಜನಾದಿಗಳನ್ನು ತೀರಿಸಿಕೊಂಡು ಕೇಳಿ ಕಾರಾಗೃಹಕ್ಕೆ ಬಂದು ಮಣಿಮಂ ಚದ ಮೇಲೆ ಮಲಗಿರುವ ಸಮಯದಲ್ಲಿ ಆ ದೊರೆಯ ಸವಿಾಪಕ್ಕೆ ಬಂದು-ಎಲೋ ರಾಯಾ ! ಮಷಕನಿಗ್ರಹವನ್ನು ಮಾಡಿದುದರಿಂದ ನಿನಗೆ ಬರುವ ಆದಾಯವೇನು ? ನೀನು ಅವಿವೇಕಿಯು, ಹೇಗಂದರೆ ಆನೆಗೆ ಉಪಕಾರವನ್ನು ಮಾಡಿದಂಥಾ ನಾವು
ಪುಟ:ಕಥಾಸಂಗ್ರಹ ಸಂಪುಟ ೧.djvu/೭೧
ಗೋಚರ