60 KANARESE SELECTIONS-PART I ನಿಮಗೆ ಉಪಕಾರವನ್ನು ಮಾಡಲಾರೆವೇ ? ಎಂದು ಹೇಳಿತು. ನರರಾಜನು ಇಲಿರಾ ಯನ ವಾಕ್ಯವನ್ನು ಕೇಳಿ ಇದರ ಮಾತು ನಿಜವೆಂದು ನಿಶ್ಚಯಿಸಿ-ಎಲೋ ಇಲಿ ರಾಯ ! ಇನ್ನು ಮೇಲೆ ನಿನ್ನ ಕುಲಸ್ಥರನ್ನು ಕೊಲ್ಲಿ ಸುವುದಿಲ್ಲ ಎಂದು ಅಭಯವನ್ನು ಕೊಟ್ಟು ಕಳುಹಿಸಿ ಮಷಕಹಿಂಸಮಾಡದ ಹಾಗೆ ಪ್ರಜೆಗಳಿಗೆ ಕಟ್ಟು ಮಾಡಿಸಿ ಸುಖ ದಿಂದಿದ್ದನು. ಕೆಲವು ದಿನಗಳ ಮೇಲೆ ಪರರಾಜನ ದಂಡು ಬಂದು ಪಟ್ಟಣದ ಸುತ್ತಲೂ ಜೇನುಮುತ್ತಿಗೆಯನ್ನು ಹಾಕಿ ಬಹಳ ಉಪದ್ರವ ಪಡಿಸಲು ಆ ರಾಯನು ನಿರ್ವಹಿಸ ಲಾರದೆ ಚಿಂತಾಕ್ರಾಂತನಾಗಿ ಆಲೋಚನೆಯನ್ನು ಮಾಡಿ ಮಷಕವಾಕ್ಯವನ್ನು ನೆನೆದು, ಮನಸ್ಸಿನಲ್ಲಿ ಇಲಿರಾಯನನ್ನು ಸ್ಮರಿಸಿದನು. ಆ ಮಷಕರಾಜನು ತನ್ನ ಸಮಹದೊಡನೆ ಬಂದು ರಾಯನ ಮನೋಗತವನ್ನು ತಿಳಿದು ಆತನಿಗೆ--ಹೆದರ ಬೇಡವೆಂದು ನಂಬಿಕೆಯನ್ನು ಕೊಟ್ಟು ಹೋಗಿ ತಮ್ಮ ಕುಲಕ್ಕೆ ತಿಳಿಸಲು ಅವುಗ ಳೆಲ್ಲಾ ಕೂಡಿ ಆ ರಾತ್ರಿಯಲ್ಲಿ ದಂಡಿನ ಪಾಳೆಯವನ್ನು ಹೊಕ್ಕು ಭೇರಿಗಳ ಚರ್ಮಗ ಳನ್ನೆಲ್ಲಾ ಕತ್ತರಿಸಿ ಆಯುಧಗಳ ಒರೆಗಳೆಲ್ಲವನ್ನೂ ಪುಡಿಪುಡಿಮಾಡಿ ನಾನಾವಿಧ ಚಿತ್ರವಿಚಿತ್ರ ವಸ್ತ್ರಗಳನ್ನೆಲ್ಲಾ ಶತಸಹಸ್ರಛಿದ್ರಗಳಂ ಮಾಡಿ ದಂಡಿಗೆ ತಂದು ಇದ್ದ ಸಾಮಗ್ರಿಗಳನ್ನೆಲ್ಲಾ ಭಕ್ಷಿಸಿ ಕುದುರೆಗಳಿಗೆ ಕಟ್ಟಿದ ಆಗಾಡಿ ಪಿಛಾಡಿಗಳನ್ನೆಲ್ಲಾ ಹರಿಗಡಿದು ಇನ್ನೂ ಬಹು ಪ್ರಕಾರವಾಗಿ ನಷ್ಟಪಡಿಸಿ ಈ ವಿವರವನ್ನು ರಾಯನಿಗೆ ಹೇಳಿ ತಮ್ಮ ತಮ್ಮ ನಿವಾಸಗಳಿಗೆ ಹೋದವು ಆ ದಂಡಿನವರು ನಿದ್ದೆ ತಿಳಿದೆದ್ದು ಈ ದಿನ ಕೋಟೆ ಹಲ್ಲಾ ಮಾಡಬೇಕೆಂದು ಪ್ರಯತ್ನ ವನ್ನು ಮಾಡಿದ್ದ ಪ್ರಾತಃಕಾಲದಲ್ಲಿ ಒಡೆದ ಭೇರಿಗಳನ್ನೂ ಶತಛಿದ್ರಗಳಾದ ವಸ್ತ್ರಗಳನ್ನೂ ನಲಿನಲಿಯಾದ ಹಲ್ಲಣಗಳನ್ನೂ ಪುಡಿಪುಡಿಯಾದ ಹೆದೆಗಳನ್ನೂ ಖಂಡಿತವಾದ ಸಕಲ ಪದಾರ್ಧಗಳನ್ನೂ ನೋಡಿ ಆಶ್ವ ರ್ಯಪಟ್ಟು ಎಲ್ಲರೂ ಪಲಾಯನವನ್ನು ಮಾಡಿದರು ಎಂದು ಈ ಕಥೆಯನ್ನು ಹೇಳಿತು ಆ ಬ್ರಾಹ್ಮಣನು ಸಂತೋಷಪಟ್ಟು ಆ ಮಂಡೂಕವನ್ನು ತನ್ನ ಕಮಂಡಲದಲ್ಲಿ ಇಟ್ಟು ಕೊಂಡು ಹೊರಟು ಬರುತ್ತಿದ್ದನು. ಆ ಮೇಲೆ ಅವನು ಒಂದು ದಿನ ಬಿಸಿಲಲ್ಲಿ ಅರಣ್ಯ ದಲ್ಲಿ ಬರುತ್ತಾ ಅಲ್ಲಲ್ಲಿ ಒಂದು ವೃಕ್ಷದ ನೆರಳಿನಲ್ಲಿ ಕುಳಿತುಕೊಂಡನು, ಆ ವೃಕ್ಷದ ಮಹತ್ತು ಏನಂದರೆ ಯಾರಾದರೂ ಅದರ ಕೆಳಗೆ ಕೂತುಕೊಂಡರೆ ನಿದ್ದೆ ಬರುವುದು, ಆ ಮರದ ಮೇಲೆ ಕಾಷ ಮುಖ ನೆಂಬ ಒಂದು ವಾಯಸವು ಗೂಡು ಮಾಡಿಕೊಂಡಿರುವುದು, ಹಾಗೆ ನಿದ್ರೆ ಹೋಗು ವವನನ್ನು ಕಂಡು ಅದು ಧ್ವನಿಮಾಡುವುದು. ಆಗಲೇ ಅದೇ ಮರದಲ್ಲಿ ವಾಸವಾ ಗಿರುವ ಕರ್ಕೊಟಕವೆಂಬ ಸರ್ಪವು ಬಂದು ಕಚ್ಚಿ ಹೋಗುವುದು. ತರುವಾಯ ಆ ವಾಯಸವು ತನ್ನ ಕುಲಕೋಟಿಯೊಡನೆ ಬಂದು ಭಕ್ಷಿಸುವುದು, ಈ ಪ್ರಕಾರ ಬಹು ದಿವಸದಿಂದ ಆ ವಾಯಸವೂ ಸರ್ಪವೂ ಸ್ನೇಹದಿಂದ ಇರುತ್ತಿದ್ದವು, ಆ ಮೇಲೆ ಆ ವೃಕ್ಷದ ಕೆಳಗೆ ಈ ಬ್ರಾಹ್ಮಣನು ಮೈಮರೆತು ನಿದ್ದೆ ಹೋದನು. ಆಗ ಆ ವೃಕ್ಷದ ಮೇಲಿದ್ದ ವಾಯಸವು ಕೂಗಲು ಕರ್ಕೊಟಕನೆಂಬ ಸರ್ಪವು ಬಂದು ಈ ಬ್ರಾಹ್ಮಣ
ಪುಟ:ಕಥಾಸಂಗ್ರಹ ಸಂಪುಟ ೧.djvu/೭೨
ಗೋಚರ