90 ಕಥಾಸಂಗ್ರಹ-೪ ನೆಯ ಭಾಗ ನೀನು ಇಂಥಾ ಸೌಭಾಗ್ಯವನ್ನನುಭವಿಸದೆ ವ್ಯರ್ಥವಾಗಿ ಮನುಷ್ಯನನ್ನು ಧ್ಯಾನಿಸು ವುದು ಯೋಗ್ಯವಲ್ಲ, ನರಾಧಮನನ್ನು ಪರಿಭಾವಿಸುವ ಮರುಳುತನವು ನಿನಗೆಲ್ಲಿ೦ದ ಬಂದಿತು ? ಈ ಅವಿವೇಕವನ್ನು ಬಿಡು ! ಅರಮನೆಗೆ ನಡೆ ! ನನಗೆ ಅರಸಿಯಾಗು ಎಂದು ಹೇಳಲು ; ಸೀತೆಯು ಮಹಾ ಕೋಪದಿಂದ ಕೂಡಿ ಕಣ್ಣುಗಳಿಂದ ಕಿಡಿಗ ಳನ್ನು ಗುಳುತ್ತ ಕೈಯಲ್ಲಿ ಒಂದು ತೃಣವನ್ನು ಹಿಡಿದು ಕೊಂಡು ಅದರ ಸಂಗಡ ಮಾತಾ ಡುವ ಹಾಗೆ--ಎಲೋ ಬಣಗು ರಕ್ಕಸನೇ, ಎಲೋ ದುಷ್ಟಚೋರನೇ, ಪಾಪಿಷ್ಠ ನಾದ ನಿನ್ನ ಐಶ್ವರ್ಯವನ್ನು ಸುಡಬೇಕು, ಎಲೋ ಹಂದಿಯೇ, ನಾಯಿಯೇ, ಬಹು ವಿಕಾರವಾದ ಮಾತುಗಳನ್ನಾಡಬೇಡ, ಶ್ರೀರಾಮನು ಬಂದ್ರಾದಿಗಳಿಂದ ಪೂಜೆ ಯನ್ನು ತೆಗೆದು ಕೊಳ್ಳುವಂಥ ಮಹಾತ್ಮನು, ನೀಚನಾದ ನೀನು ಯಾರಿಂದ ಪೂಜೆ ಯನ್ನು ಹೊಂದುವಿ ?” ಎಲಾ ಪಾಪಕರ್ಮಿಯೇ, ಮರ್ಖಾಧಮನೇ, ಶ್ರೀರಾಮ ನನ್ನು ಸಾಮಾನ್ಯನೆಂದು ತಿಳಿದೆಯಾ ? ಪತಿವ್ರತೆಯರನ್ನು ಹಿಂಸೆಪಡಿಸುವುದುಂದುಂ ಟಾದ ಮಹಾಪಾಪವೆಂಬ ಸಮುದ್ರದಲ್ಲಿ ಮುಳುಗಿರುವ ನಿನ್ನ ಎದೆಯನ್ನಿರಿದು ಪ್ರಾ ಣಗಳನ್ನು ತೆಗೆದು ಕೊಂಡು ಹೋಗುವ ಅಂತಕನಲ್ಲವೇ? ನೀನು ಈ ಮಾತನ್ನು ಚೆನ್ನಾಗಿ ಜ್ಞಾಪಕದಲ್ಲಿಟ್ಟು ಕೊಂಡಿರು, ನಿನ್ನ ಪತ್ನಿ ಯನ್ನು ಮತ್ತೊಬ್ಬನು ಅಪೇಕ್ಷಿಸಿದರೆ ನೀನು ಯಾ ? ನೀನು ನಿನ್ನ ಪತ್ನಿಯೊಡನೆ ಸುಖವಾಗಿ ಬದುಕಬೇಕೆಂಬ ಅಪೇಕ್ಷೆಯಿದ್ದರೆ ಈಗಲೇ ನನ್ನನ್ನು ಕರೆದು ಕೊಂಡು ಹೋಗಿ ನನ್ನ ಪತಿಯಾದ ಶ್ರೀರಾ ಮನಿಗೆ ಒಪ್ಪಿಸಿ ಶರಣಾಗತನಾಗು. ಹಾಗೆ ಮಾಡದಿದ್ದರೆ ನೀಚನಾದ ನಿನ್ನೊಬ್ಬನ ಅಪರಾಧದಿಂದ ನೀನೂ ನಿನ್ನ ಮಕ್ಕಳೂ ನೆಂಟರೂ ಇಷ್ಟ ರೂ ನಿನ್ನ ಸಕಲೈಶ್ವರ್ಯವೂ ನಿನ್ನ ಪಟ್ಟಣವೂ ನಿನ್ನ ರಾಷ್ಟ್ರವೂ ಹಾಳಾಗುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ ವು. ನಾನು ಶ್ರೀರಾಮಚಂದ್ರನಿಗೆ ಧರ್ಮಪತ್ನಿ ಯಾಗಿರುವೆನು ನೀನು ಆತನಿಲ್ಲದ ಕಾಲದಲ್ಲಿ ಬಂದು ನನ್ನನ್ನು ಅಪಹರಿಸಿಕೊಂಡು ಬಂದೆ. ನೀನು ಆತನ ಮುಂದೆ ನನ್ನನ್ನು ಎತ್ತಿ ಕೊಂಡು ಬಂದಿದ್ದರೆ ಈ ನಿನ್ನ ಪಾದೇಹವು ನಾಯಿನರಿಗಳ ಪಾಲಾಗುತ್ತಿದ್ದಿತು. ಹುಲಿಯ ಎದುರಿನಲ್ಲಿ ನಾಯಿಗೂ ಸಿಂಹದ ಎದುರಿನಲ್ಲಿ ಮೊಲಕ್ಕೂ ಹೇಗೆ ನಿಲ್ಲುವ ಸಾಮರ್ಥವಿಲ್ಲ ವೋ ಹಾಗೆ ಮಹಾತ್ಯ ನಾದ ನನ್ನ ಪತಿಯ ಎದುರಿನಲ್ಲಿ ನೀಚನಾದ ನಿನಗೆ ನಿಲ್ಲುವ ಸಾಮರ್ಥವಿಲ್ಲ. ಕಳ್ಳನಾದ ನೀನು ನಿನ್ನ ತಾಯಿಯ ಹೊಟ್ಟೆಯನ್ನು ಬಗೆದು ಹೊಕ್ಕು ಮರೆಸಿಕೊಂಡಾಗ ರಾಮನ ಬಾಣವು ಬಂದು ನಿನ್ನನ್ನು ಕೊಂ ದುಹಾಕುವುದು, ಈ ಮಾತಿನಲ್ಲಿ ಏನೂ ಸಂದೇಹವಿಲ್ಲ. ಹೀಗೆ ನಿಶ್ಚಿತವಾದ ಮನಸ್ಸು ೬ ನನ್ನೆ ದುರಿಗೆ ಇಂಥ ಕೆಟ್ಟ ಮಾತುಗಳನ್ನು ಬೊಗಳುತ್ತಿರುವ ನಿನ್ನನ್ನು ನನ್ನ ಪಾತಿವ್ರ ತ್ಯಾಗ್ನಿ ಜ್ವಾಲೆಯಿಂದ ಈಗಲೇ ಸುಟ್ಟು ಬೂದಿಮಾಡಿಬಿಡಬಲ್ಲೆನು. ಆದರೆ ನನ್ನ ಪತಿ ಯು ಬಂದು ನಿನ್ನನ್ನು ಕೊಂದುಹಾಕಲೆಂಬದಾಗಿ ಸುಮ್ಮನಿದ್ದೇನೆ ಎಂದು ಹೇಳಿ ರಾವ ಣನಿಗೆ ವಿಮುಖಳಾಗಿ ಕೂತುಕೊಳ್ಳಲು ; ಆಗ ರಾವಣನು ಕೋಪಾಕ್ರಾಂತನಾಗಿ ಇಂಥಾ ಬಾಯಿಬಡಿಕ ಹೆಂಗಸನ್ನು ಈಗಲೇ ಸಂಹರಿಸಿಬಿಡುತ್ತೇನೆಂದು ಕತ್ತಿಯನ್ನು ಎತ್ತಲು ; ಮಂಡೋದರಿಯು--ಹಾ ! ಹಾ ! ರಾಕ್ಷ ಸಚಕ್ರವರ್ತಿಯೇ, ನಿಲ್ಲು !
ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೦
ಗೋಚರ