ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಆಂಜನೇಯನು ಸೀತೆಯನ್ನು ಕಂಡು ಲಂಕಾಪಟ್ಟಣವನ್ನು ಸುಟ್ಟು ದು 99 ಆದಾಗ್ಯೂ ಸ್ವಲ್ಪವೂ ಸುಡುವುದಿಲ್ಲ, ಪನ್ನೀರನ್ನು ಸುರಿದಂತೆ ಶೀತಲವಾಗಿದೆ. ಸೀತೆಯ ಪಾತಿವ್ರತ್ಯ ಧರ್ಮದಿಂದ ಶ್ರೀರಾಮನ ಸತ್ಯ ಪ್ರಭಾವದಿಂದಲೂ ನನ್ನ ತಂದೆ ಯಾದ ವಾಯುದೇವನ ಕರುಣದಿಂದಲೂ ಈ ಅಗ್ನಿ ಯ ಉಷ್ಣತೆಯು ನನ್ನನ್ನು ಮುಟ್ಟಲಾರದು ಎಂದು ನಿಶ್ಚಯಿಸಿ ಸಂತೋಷವುಳ್ಳವನಾಗಿ ಅತ್ಯುನ್ನ ತರೂಪವನ್ನು ಧರಿಸಿ ರಾಕ್ಷಸರು ತನ್ನ ನಡುವಿಗೆ ಕಟ್ಟಿದ್ದ ಹಗ್ಗಗಳನ್ನು ತುಂಡು ತುಂಡಾಗುವಂತೆ ಕಿತ್ತು ಬಿಸುಟು ನೆಗೆಯುತ್ತ ಬಂದು ಊರುಬಾಗಿಲ ಕಬ್ಬಿಣದ ಲಾಳ್ಳುಂಡಿಗೆಯನ್ನು ತೆಗೆದು ಕೊಂಡು ತನ್ನ ಜತೆಯಲ್ಲಿ ಸಾರುತ್ತ ಬರುತ್ತಿದ್ದ ರಕ್ಕಸರನ್ನೆಲ್ಲಾ ಎಡಿದುರುಳಿಸಿ ಕುಪ್ಪಳಿಸಿ ಊರುಬಾಗಿಲ ಉಪ್ಪರಿಗೆಯ ಮೇಲೆ ಕುಳಿತುಕೊಂಡು ಇನ್ನು ಮೇಲೆ ನಾನು ಮಾಡತಕ್ಕ ಕೆಲಸವಾವದಿರುವುದು? ವನವನ್ನು ಮುರಿದೆನು; ಶ್ರೇಷ್ಟರಾದ ರಾಕ್ಷ ಸರನ್ನು ಕೊಂದೆನು. ಇಲ್ಲಿರುವ ಚತುರಂಗಬಲದಲ್ಲಿ ಕಾಲು ಪಾಲನ್ನು ಸದೆದೆನು. ಇನ್ನು ಈ ಲಂಕಾದುರ್ಗವನ್ನು ಸುಟ್ಟು ಹಾಳುಮಾಡುವುದೊಂದೇ ಕೆಲಸ ಉಳಿದಿರು ವುದು. ಈಗ ನನಗೆ ಸ್ವಲ್ಪವಾದರೂ ನೋವನ್ನು ಕೂಡದೆ ನನ್ನ ಬಾಲದಲ್ಲಿ ಉರಿಯು ತಿರುವ ಅಗ್ನಿ ದೇವತೆಗೆ ಪ್ರತ್ಯುಪಕಾರವಾಗಿ ಈ ನಗರವನ್ನು ಆಹುತಿಕೊಡುವುದು ಕೃತಜ್ಞತೆಯಾಗಿರುವದು ಎಂದು ಯೋಚಿಸಿಕೊಂಡು ಅಲ್ಲಿಂದ ಹೊರಟು ಮನೆಯಿಂದ ಮನೆಗೆ ನೆಗೆಯುತ್ತ ಅವುಗಳಿಗೆಲ್ಲಾ ಬೆಂಕಿಯನ್ನು ಹೊತ್ತಿಸುತ್ತ ಪಲ್ಲಿ ರಿದಣಕಿಸಿ ಅಬ್ಬರಿ ಸುತ್ತ ನಿರ್ಭಯದಿಂದ ಸಂಚರಿಸುತ್ತೆ ಅಲ್ಲಿಂದ ಪ್ರಹಸ್ತನ ಮನೆಯ ಮೇಲಕ್ಕೆ ಹಾರಿ ಅದಕ್ಕೂ ಬೆಂಕಿಯನ್ನು ಹೊತ್ತಿಸಿ ವಿಭೀಷಣನ ಮನೆಯೊಂದು ಹೊರತು ಮಹಾ ಪಾರ್ಶ್ವಾದಿ ಸಮಸ್ತ ರಾಕ್ಷಸರ ಮನೆಗಳಿಗೆಲ್ಲಾ ಬೆಂಕಿಯನ್ನು ಹೊತ್ತಿಸಿ ಕಡೆಗೆ ರಾವ ಣನ ಮನೆಗೂ ಅಗ್ನಿ ಯನ್ನ ಂಟಿಸಿ ಸಂತೋಷದಿಂದ ನೋಡುತ್ತಿರಲು; ಅಗ್ನಿ ಯು ವ್ಯಾಪಿಸಿಕೊಂಡು ಲ೦ಕಾಪಟ್ಟಣವನ್ನೆಲ್ಲಾ ದಹಿಸುತ್ತಿದ್ದಿತು. ಆಗ ಪುಣ್ಯನಾಶದಲ್ಲಿ ಸ್ವರ್ಗದಿಂದ ಭೂಮಿಗುರುಳುವ ವಿಮಾನಗಳಂತೆ ನವರತ್ನ ಖಚಿತಗಳಾದ ಮಹಾ ಸೌಧಗಳೂ ಸಪ್ತಭೂಮಿಕಾ ಗೃಹಗಳೂ ಮುರಿದು ಮುರಿದು ಭೂಮಿಯಲ್ಲಿ ಬೀಳು ತಿದ್ದುವು. ಆಗ ಲಂಕಾ ಪಟ್ಟಣದ ಸ್ಥಿತಿಯು ಪರಿತಾಪಕರವಾಗಿದ್ದಿತು. ಆಗ ರಾಕ್ಷಸರೆಲ್ಲರೂ ತಮ್ಮ ತಮ್ಮ ಮನೆಗಳ ಪದಾರ್ಥಗಳನ್ನು ಕಾಪಾಡು ವುದರಲಿ ಆಶೆಯನು ತೊರೆದು ತಮೆ ತಮ, ಪಾಣರಕ ಣೆಯಲೆ ಉದುಕರಾಗಿ ದಿಕ್ಕು ದಿಕ್ಕಿಗೆ ಓಡುತ್ತಿದ್ದರು. ಅವರಲ್ಲಿ ಕೆಲರು-ಅಯ್ಯೋ ! ಇದು ನಿಜವಾಗಿಯೂ ಕೋಡಗನಲ್ಲ, ಸತ್ಯವಾಗಿ ಕಪಿರೂಪನ್ನು ಧರಿಸಿ ಬಂದ ಅಗ್ನಿಯೇ ಸರಿ, ಆಯ್ಯೋ ! ಈ ಲ೦ಕಾನಗರಕ್ಕೆ ಪ್ರಳಯಾಗ್ನಿ ಯು ಹೊಕ್ಕು ಪಟ್ಟಣವನ್ನೇ ನಿರ್ಮಲಮಾಡುತ್ತಿರು ವುದಲ್ಲಾ ! ಎಂದು ಕೂಗಿ ದುಃಖಿಸುತ್ತ ಓಡಿದರು, ಕೆಲರು ಅಗ್ನಿ ಜ್ವಾಲೆಯು ತಮ್ಮನ್ನು ಸುಡುವುದಕ್ಕೆ ಬಂದುದನ್ನು ಕಂಡುಹಾ ! ಕೆಟ್ಟೆವಲ್ಲಾ ! ಗತಿಯೇನು ? ಎಂದು ಮೊರೆಯಿಡುತ್ತ ಹಸುಗೂಸುಗಳನ್ನೆತ್ತಿ ಕೊಂಡು ಓಡಿಹೋದರು. ಆಗ ರಾಕ್ಷಸಿ ಯರು ಮೈಮೇಲಿನಿಂದ ಜಾರಿ ಬೀಳುತ್ತಿರುವ ವಸ್ತ್ರವನ್ನೆತ್ತಿ ಕಟ್ಟದೆ ಬಿಚ್ಚಿ ಕೆದರಿ ಹೋದ ತಲೆಗೂದಲುಳ್ಳವರಾಗಿ ತೋರಿದ ಕಡೆಗೋಡಿದರು. ಲಂಕಾನಗರದಲ್ಲಿ ಎಲ್ಲಿ