ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

106 ಕಥಾಸಂಗ್ರಹ-೪ ನೆಯ ಭಾಗ ತಿಂದು ಜೀವಿಸುವ ಕೋಡಗಗಳು ನಮಗೆ ಗಣ್ಯವೇ ? ಯಮನ ತಲೆಯನ್ನು ತರಹೇಳು. ಸ್ವರ್ಗದಮರಾವತಿಯನ್ನು ಕಿತ್ತು ತಂದು ಪಾತಾಳದಲ್ಲಿ ಬಿಸುಡಹೇಳು, ಅಷ್ಟದಿಕ್ಷಾ ಲಕರ ಮಗುಗಳನ್ನು ಕೊಯ್ಯು ತರುವುದಕ್ಕೆ ಆಜ್ಞಾಪಿಸು, ಹಾವುಗಳೊಡೆಯನ ಹೊಳಲನ್ನು ತಂದು ಸ್ವರ್ಗದಲ್ಲಿಳಿಸಹೇಳು. ಎಲೆ ತಂದೆಯೇ, ಕೇಳು, ಯಮಾದಿಗ ೪೦ದಲೂ ಕೂಡ ನೋಡಲಮ್ಮದ ಕಲ್ಪಾಂತ ರುದ್ರನ ಹಣೆಗಣ್ಣಿನ ಕೇಸುರಿಗಂಜದ ನಮ್ಮಂಥ ವೀರಾಗ್ರೇಸರರೊಡನೆ ತೃಣಪ್ರಾಯರಾದ ಮನುಜ ಕಪಿಗಳ ರಣದ ರಾಜ ಕಾರ್ಯದ ಗೌರವವನ್ನು ಹೇಳಬಹುದೇ ? ಇಷ್ಟು ಮಾತ್ರಕ್ಕೆ ಈ ಮಹಾಭಟರ ಪರ್ಯ೦ ತರವೂ ಯೋಚಿಸಬೇಕೇ ? ಈ ನಿನ್ನ ಚಾಮರಧಾರಿಗಳಿಂದಲೇ ಆ ಕೋಡಗಗಳ ತಂಡ ನನ್ನೂ ಅಲ್ಪರಾದ ಮನುಷ್ಯರನ್ನೂ ಬೀಳಬಡಿಸುವೆನು, ಈ ಮಾತು ಹಾಗಿರಲಿ. ಸೀತೆಯು ಶೀಘ್ರವಾಗಿ ನಿನಗೆ ಒಲಿಯುವ ಉಪಾಯದ ಮಾತುಗಳನ್ನಾಡು, ಈ ಮಹಾ ಸಭಾಸ್ಥಾನದಲ್ಲಿ ಕಪಿಬಲದ ವರ್ತಮಾನವನ್ನಾಡುವುದು ಲಜ್ಜಾಸ್ಪದವೆಂದು ಹೇಳಿದನು. ಆಗ ವಿಭೀಷಣನು ಇಂದ್ರಜಿತ್ತಿನ ಗರ್ವೋಕ್ತಿಗಳು ಕಿವಿಯಲ್ಲಿ ಬಿದ್ದ ಕೂಡಲೆ ಮುಖದಲ್ಲಿ ಕೋಪಾಗ್ನಿ ಯು ಭುಗಿಲೆನ್ನಲು ; ಗಹಗಹಿಸಿ ನಗುತ್ತ ತಲೆಯನ್ನು ತೂಗಿ ಮೈಯನ್ನು ಒಲಿದೊಲೆದು ಇಂದ್ರಜಿತ್ತನ್ನು ನೋಡಿ-ಎಲೈ ಶೂರನೇ, ನೀನು ಹೇಳಿದ ಮಾತುಗಳಿಂದ ನನಗೆ ಅತಿ ಸಂಶಯಾಶ್ಚರ್ಯಭಾವಗಳುಂಟಾಗಿವೆ. ಇನ್ನೊಂದುಸಾರಿ ಚೆನ್ನಾಗಿ ತಿಳಿಯ ಹೇಳು, ನೀನು ಮಹಾ ಪರಾಕ್ರಮಶಾಲಿಯಷ್ಟೆ, ಈಗ ನಾವು ನಿನ್ನು ಬಾಳುತನವನ್ನು ಹೊಸದಾಗಿ ತಿಳಿಯಬೇಕೇ ? ಸತ್ತಿಗೆಯವರಿಂದ ಕೊಡಗಗ ಇನ್ನೂ ಮನುಜರನ್ನೂ ಹೊಯ್ಲಿ ಬಿಡುವಿಯೋ ? ಇಂಥ ಸಾಮರ್ಥ್ಯದ ಮಹಿಮೆಯು ನಿನ್ನ ತಮ್ಮನಾದ ಅಕ್ಷಾದ್ಯಸಂಖ್ಯಾತ ರಾಕ್ಷಸವೀರರ ಹೊಟ್ಟೆ ಗಳನ್ನು ಬಗೆದು ಪ್ರಾಣಗ ಳನ್ನು ಹಾರಿಸಿ ಈ ನಮ್ಮ ಲಿಂಕಾನಗರವನ್ನು ಅಗ್ನಿಗೆ ಆಹುತಿಮಾಡಿದ ಒಂದು ಕೋಡಗದ ಮುಂದೇಕೆ ನಡೆಯದೆಹೋಯಿತು ? ಆ ವೇಳೆಯಲ್ಲಿ ಈ ಕುಂಭ ನಿಕುಂಭ ದೇವಾಂತಕ ನರಾಂತಕಾದಿ ಶೂರರೆಲ್ಲರೂ ಎಲ್ಲಡಗಿದ್ದರು ? ಎಲೇ ಅಣ್ಣಾ, ಕೇಳು, ಇವರುಗಳ ಬನ್ನಣೆಯ ಬಿಂಕದ ಮಾತುಗಳು ಹಾಗಿರಲಿ, ಭೂಮಿಯ ಭಾರವನ್ನು ಇಳಿಸುವುದ ಕ್ರೋಸ್ಕರ ಶ್ರೀ ಮಹಾ ವಿಷ್ಣುವು ನರರೂಪವನ್ನು ಧರಿಸಿ ಬಂದಿರುವನು. ಈ ಹೆಣ್ಣಿನ ನೆಪದಿಂದ ನಮ್ಮನ್ನು ಮಣ್ಣು ಪಾಲು ಮಾಡದೆ ಬಿಡನು. ಹೀಗಿರುವುದನ್ನು ತಿಳಿದೂ ಅಶಕ್ತರಾದ ನಾವು ಆತನೊಡನೆ ವಿರೋಧವನ್ನು ಸಂಪಾದಿಸಿಕೊಂಡು ವ್ಯರ್ಥವಾಗಿ ಉಣ್ಣದೆ ಉಡದೆ ಉರಿದುಹೋಗಬೇಕಾಗುವುದು. ಆ ರಾಮನು ಸತ್ಯವಾಗಿ ಮನುಜ ನಲ್ಲ, ಆ ಕೊಡಗಗಳು ಮೃಗಗಳಲ್ಲ, ಲೋಕಕಂಟಕರಾದ ದುಷ್ಟರೆಂಬ ಕೂರ ಮೃಗಗಳನ್ನು ಕೆಡಹಿ ಕೊಲ್ಲುವುದಕ್ಕೋಸ್ಕರ ಒಡ್ಡಿದ ಬಲೆಗಳೆಂದು ತಿಳಿಯುವವ ನಾಗು. ಜನಕನ ಪಟ್ಟಣದಲ್ಲಿ ನಿನ್ನನ್ನು ಕೆಡಹಿ ಮೇಲೆ ಬಿದ್ದು ಒದೆದಾಡಿಸಿದ ಶಿವನ ಬಿಲ್ಲನ್ನು ಮುರಿದವನು ಯಾರು ? ನಿನ್ನ ತಮ್ಮನಾದ ಖರಾಸುರನು ಸಾಮಾನ್ಯನೇ ? ದೂಷಣಾಸುರನು ಕೈಯಲ್ಲಿ ಹರಿಯದವನೇ ? ಲೋಕವಿಖ್ಯಾತರಾದ ಶೂರರಲ್ಲವೇ?