108 ಕಥಾಸಂಗ್ರಹ-೪ ನೆಯ ಭಾಗ ನೆಂದು ಯೋಚಿಸಿ ಚಾವಡಿಯ ಸಮೀಪವಾಗಿ ಆಕಾಶದಲ್ಲಿ ನಿಲ್ಲಲು ; ರಾವಣನು ಅದನ್ನು ಕಂಡು ಇಲ್ಲಿ ನಿಲ್ಲದೆ ಬೇಗ ಹೋಗಹೇಳು, ಅವನೇಕೆ ತಿರಿಗಿಲ್ಲಿಗೆ ಬಂದನು ? ಮಹಾ ದ್ರೋಹಿಯನ್ನು ಬಾಗಿಲಲ್ಲಿ ಹೊಗಿಸದಿರಿ ಎಂದು ಆಜ್ಞಾಪಿಸಲು ; ಕೂಡಲೆ ಕೈಗುದಿಗೆಗಳ ಖಳರು ಬಂದು ವಿಭೀಷಣನನ್ನು ತರುಬಲು; ಅವನು ತನ್ನ ಗದೆಯಿಂದ ಬಡಿದು ಅವರ ಪ್ರಾಣಗಳನ್ನು ತೆಗೆದು ಅಣ್ಣನನ್ನು ಕುರಿತು-ಸಾಯುವ ರೋಗಿಗೆ ಮದ್ದು ಸೊಗಸದೆಂಬ ಗಾದೆಯು ಸುಳ್ಳಲ್ಲ. ಲೋಕದಲ್ಲಿ ಆಗದವರು ಮುಂಗಡ ಯಲ್ಲಿ ಸವಿನುಡಿಗಳನ್ನಾಡುವರು, ಹಿಂಗೆಡೆಯಲ್ಲಿ ಹೀಯಾಳಿಸುವರು. ಮೊದಲು ಕ್ರೂರವ ಕೀಗಿದ್ದಾಗ್ಯೂ ಆ ಮೇಲೆ ಹಿತವಾಗುವಂಥ ಮಾತುಗಳನ್ನಾಡುವವರು ಅಪೂರ್ವರು, ಅಂಥ ಮಾತುಗಳನ್ನು ಕೇಳಿ ತಿಳಿದು ನಡೆವವರೂ ದುರ್ಲಭರು. ಇಂಥವರಿಗೆ ವಿಪತ್ತು ಗಳು ಒದಗಲಾರವು. ಈಗ ನಾನು ನಿರಪರಾಧಿಯಾಗುವು ದಕ್ಕೋಸ್ಕರ ಸಾರಿ ಹೇಳುತ್ತೇನೆ ಬೀದಿಯಲ್ಲಿ ಹೋಗುವ ಮಾರಿಯನ್ನು ಕೂಗಿ ಮನೆಗೆ ಕರೆದು ಕೊಳ್ಳುವುದು ಯುಕ್ತವಲ್ಲ, ನೀನು ಬುದ್ಧಿಶಾಲಿಯಾದರೆ ಶೀಘ್ರವಾಗಿ ಸೀತೆಯೆಂಬ ಕಾಂತೆಯನ್ನು ಬಿಟ್ಟು ಕೀರ್ತಿಯೆಂಬ ಕಾಂತೆಯ ಕೈ ಹಿಡಿದು ಬದುಕುವುದು ಒಳ್ಳೆಯದು, ನಾನಾಡುವ ಹಿತದ ಮಾತುಗಳು ಈಗ ನಿನಗೆ ಒಡಂಬಡುವುದಿಲ್ಲ, ಏಕೆಂದರೆ ಮೃತ್ಯುವು ನಿನ್ನ ಹೆಗ್ಗತ್ತಿನ ಮೇಲೇರಿ ಕುಳಿ ತಿರುವುದು, ಕಪಿಬಲವು ಬಂದ, ರಾಕ್ಷಸರನ್ನೆಲ್ಲಾ ಕೊಂದು ಶ್ರೀರಾಮನು ನಿನ್ನ ತಲೆಗಳನ್ನು ಕತ್ತರಿಸುವಾಗ ನನ್ನ ಮಾತುಗಳನ್ನು ನೆನಸಿಕೊ ಎಂದು ಹೇಳಿ ವಿಭೀಷಣನು ತನ್ನ ಭಾತೃಸಂಗದ ಕೋಟಲೆಯನ್ನೂ ಲಂಕಾನಗರದ ಕೋಟೆ ಯನ್ನೂ ದಾಟಿ ರಾಕ್ಷಸ ಜನ್ಮದಿಂದುಂಟಾದ ಪಾಪವೆಂಬ ಕಡಲನ್ನೂ ಶತಯೋಜನ ವಿಸ್ತಾರವಾದ ಸಮುದ್ರವನ್ನೂ ಹಾರಿ ಬರುತ್ತಿರುವಲ್ಲಿ ಆ ವಿಭೀಷಣನ ಕಣ್ಣುಗಳಿಗೆ ಕಪಿಬಲವು ಪಾಲ್ಲ ಡಲಂತೆಯ ರಾಮನು ಲಕ್ಷ್ಮಿಪತಿಯಂತೆಯ ತೋಳ್ಳಿರಿಯು ಶ್ರೀದೇವಿಯಂತೆಯ ಲಕ್ಷಣನು ಮಹಾ ಶೇಷನಂತೆಯೂ ಹನುಮಂತನು ಗರುಡ ನಂತೆಯ ಕಾಣಿಸಿದರು. 'ಸದ್ಯೋಜಾತ ವಾಮದೇವ ತತ್ಪುರುಷ ಅಘೋರಗಳೆಂಬ ನಾಲ್ಕು ಮೊಗಗಳ ನಡುವೆ ಪ್ರಕಾಶಿಸುವ ಈಶಾನವೆಂಬ ಈಶ್ವರನ ಐದನೆಯ ಮುಖ ದಂತ ಚತುರ್ದಿಕ್ಕುಗಳಲ್ಲಿಯ ಮೈಗಾವಲುಗಾರರಾಗಿರುವ ನಾಲ್ವರು ಮಂತ್ರಿಗಳ ಮಧ್ಯದಲ್ಲಿ ಬರುತ್ತಿರುವ ವಿಭೀಷಣನನ್ನು ನೋಡಿ ಪಾಳಯದ ಮು೦ಗಡೆಯಲ್ಲಿದ್ದ ಕೋತಿಗಳ ಗುಂಪು ಖೋಯೆಂದೋಡಿ ಒಂದು ವಿಭೀಷಣನ ರಥವನ್ನು ಮುತ್ತಿ ಕೊಂಡಿತು. ಆಗ ವಿಭೀಷಣನು ಸರ್ವಜ್ಞನೇ, ಸರ್ವಾಂತರ್ಯಾಮಿಯೇ, ಶರಣಾಗತ ಸುರಧೇನುವೇ, ಪೂರ್ಣದಯಾರಸಭರಿತನೇ, ಕಾನುಭವದಿಂದ ಕಂಗೆಟ್ಟ ಜನರನ್ನು ಕಾಪಾಡುವವನೇ, ಶ್ರುತಿಸತೀ ಚಡಾಮಣಿಯೇ, ಸಕಲ ದೇವತೆಗಳ ಕಿರೀಟ ತಟ ಘಟಿತ ರತ್ನ ರುಚಿ ನೀರಾಜಿತ ಚರಣ ಕಮಲಗಳುಳ್ಳವನೇ, ರಕ್ಷಿಸು ರಕ್ಷಿಸೆಂದು ಮೊರೆಯಿಡುತ್ತಿದ್ದನು. ಆಗ ಸರ್ವ ವೇದಗಳ ಹೊಗಳಿಕೆಗೂ ತೃಪ್ತನಾಗದ ಶ್ರೀರಾ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೮
ಗೋಚರ