ಪುಟ:ಕಥಾ ಸಂಗ್ರಹ - ಭಾಗ ೨.djvu/೧೨

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ಕಥಾಸಂಗ್ರಹ-೪ ನೆಯ ಭಾಗ ರುುನಿ ಸುವುದಿಲ್ಲವು, ಆದರೆ ಭೂಲೋಕದಲ್ಲಿ ನೀವು ಏಳು ಜನ್ಮಗಳೆನ್ನೆತ್ತಿ ನನಗೆ ಸ್ನೇಹಿತರಾ ಗಿಯೇ ಇದ್ದು ತಿರಿಗಿ ನನ್ನ ಸನ್ನಿಧಾನಕ್ಕೆ ಬರುವುದು ನಿಮಗೆ ಇಷ್ಟವೋ ? ಅಥವಾ ಮೂರು ಜನ್ಮಗಳನ್ನೆತ್ತಿ ನನಗೆ ವಿರೋಧಿಗಳಾಗಿದ್ದು ಆ ಮೇಲೆ ನನ್ನ ಸನ್ನಿಧಿಗೆ ಬರು ವಿರೋ ? ಈ ಎರಡು ವಿಧಗಳಲ್ಲಿ ನಿಮಗೆ ಸಮ್ಮತವಾದುದನ್ನು ಹೇಳಿರಿ ಎಂದನು. ಆಗ ಅವರು--ಸ್ವಾಮಿಾ, ಸಪ್ತ ಜನ್ಮಗಳಾಗುವ ವರೆಗೂ ನಾವು ನಿನ್ನ ಸನ್ನಿಧಿಯನ್ನು ಬಿಟ್ಟಿರ ಲಾರೆವು, ನಾವು ನಿನಗೆ ವಿರೋಧಿಗಳಾದಾಗ ಚಿಂತೆಯಿಲ್ಲ. ಜನ್ಮತ್ರಯದಲ್ಲಿಯೇ ತಿರಿಗಿ ನಿನ್ನ ಸನ್ನಿಧಿಯನ್ನು ಹೊಂದುವ ಹಾಗೆ ಅನುಗ್ರಹಿಸಬೇಕೆಂದು ಬಹುವಾಗಿ ಬೇಡಿ ಕೊಳ್ಳಲು; ಆಗ ವಿಷ್ಣುವು ಅವರಿಗೆ ಹಾಗೇ ಆಗಲಿ ಎಂದು ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. ಅನಂತರದಲ್ಲಿ ಅವರು ಮೊದಲನೆಯ ಸಾರಿ ಕಶ್ಯಪಮುನಿಯ ಪತ್ನಿ ಯಾದ ದಿತಿ ಎಂಬವಳ ಗರ್ಭದಲ್ಲಿ ಹುಟ್ಟಿ ಹಿರಣ್ಯಾಕ್ಷ ಹಿರಣ್ಯಕಶಿಪು ಎಂಬ ಹೆಸರುಗಳನ್ನಾಂತು ವೃದ್ಧಿಯಾಗುತ್ತ ಎಷ್ಟುವಿನಲ್ಲಿ ಹಗೆತನವನ್ನು ಬೆಳೆಸುತ್ತ ಬಂದರು. ಆಗ ವಿಷ್ಣುವು ವರಾಹಾವತಾರವನ್ನು ಧರಿಸಿ ಹಿರಣ್ಯಾಕ್ಷನನ್ನೂ ನೃಸಿಂಹಾವತಾರವನ್ನು ಧರಿಸಿ ಹಿರ ಣ್ಯಕಶಿಪುವನ್ನೂ ಸಂಹರಿಸಿದನು, ಆ ಮೇಲೆ ಅವರು ಎರಡನೆಯ ಜನ್ಮವನ್ನು ಹೊಂದಿದ ಸಂಗತಿಯು ಹೇಗೆಂದರೆ_ಬಹ ನ ಮಾನಸಸ ನಸಪುತ್ರನಾದ ಸ ಯಿದ್ದನು, ಆತನಿಗೆ ವಿಶ್ರವಸ್ಸು ಎಂಬ ಕುಮಾರನುದಿಸಿದನು. ಇವನ ಧರ್ಮಪತ್ನಿಯ ಗರ್ಭದಲ್ಲಿ ಜನಿಸಿದ ಒಬ್ಬ ಮಗನು ವೈಶ್ರವಣನೆಂಬ ನಾಮವನ್ನು ಧರಿಸಿ, ಅಪಾರ ವಾದ ತಪಸ್ಸಿನಿಂದ ಕಮಲಸಂಭವನನ್ನು ಮೆಚ್ಚಿಸಿ ಆತನಿಂದ ಉತ್ತರದಿಗೀಶತ್ವವನ್ನೂ ಧನಾಧೀಶತ್ವವನ್ನೂ ಮತ್ತು ಕಾಮಗಾಮಿಯಾದ ಒಂದು ವಿಮಾನವನ್ನೂ ಪಡೆದು ಕೊಂಡು ತಂದೆಯಾದ ವಿಶ್ರವಸ್ಸಿನ ಬಳಿಗೆ ಬಂದು ನಮಸ್ಕರಿಸಿ, ತಾನು ಸಂಪಾದಿಸಿ ಕೊಂಡು ಬಂದ ವರಗಳ ವೃತ್ತಾಂತವನ್ನೆಲ್ಲಾ ಸಾಂಗವಾಗಿ ವಿವರಿಸಿ, ತನ್ನ ನಿವಾಸಕ್ಕೆ ಯೋಗ್ಯವಾದ ಒಂದು ಸ್ಥಳವನ್ನು ನಿರ್ದೇಶಿಸಿ ಅಪ್ಪಣೆಯನ್ನು ಕೊಡಿಸಬೇಕೆಂದು ಕೇಳಿಕೊಂಡುದರಿಂದ ಸಂತುಷ್ಟನಾದ ವಿಶ್ರವಸ್ಸು--ಎಲೈ ಕುಲಭೂಷಣನಾದ ಕುಮಾರನೇ, ಕೇಳು, ಒಡಹುಟ್ಟುಗಳಾದ ಮಾಲಿ ಸುಮಾಲಿ ಮಾಲ್ಯವಂತ ಎಂಬ ಈ ಮೂರು ಮಂದಿ ರಕ್ಕಸರು ಮೊದಲು ದಕ್ಷಿಣದಿಕ್ಕಿನಲ್ಲಿರುವ ಅವಣಸಮುದ್ರ ಮಧ್ಯದಲ್ಲಿ ಶತಯೋಜನವಿಸ್ತಾರವಾದ ತ್ರಿಕೂಟಾಚಲದ ನಟ್ಟನಡುವೆ ಅಮರಾವತಿ ಗಿಂತ ಅತಿಸುಂದರವಾದ ಲಂಕೆ ಎಂಬೊಂದು ನಗರವನ್ನು ಮಾಡಿ ಅಲ್ಲಿ ವಾಸಮಾಡಿ ಕೊಂಡಿದ್ದರು, ಒಂದು ಕಾಲದಲ್ಲಿ ವಿಷ್ಣುವು ದೇವತೆಗಳಿಗಾಗಿ ಅವರೊಡನೆ ಯುದ್ಧ ವನ್ನು ಮಾಡಿ ಸೋಲಿಸಿದುದರಿಂದ ಅವರು ಭಯಕಂಪಿತರಾಗಿ ಲಂಕಾನಗರವನ್ನು ಬಿಟ್ಟು ತಮ್ಮ ತಮ್ಮ ಸಂಸಾರಸಮೇತರಾಗಿ ಓಡಿಹೋಗಿ ರಸಾತಲದಲ್ಲಿ ಅವಿತು ಕೊಂ ಡಿದ್ದಾರೆ. ಅದು ಕಾರಣ ಆ ಲಂಕಾಪುರವು ನೀನಿರುವುದಕ್ಕೆ ಅನುಕೂಲಸ್ಥಾನವಾಗಿದೆ. ಅಲ್ಲಿಗೆ ಹೋಗಿ ಸುಖದಿಂದಿರು ಎಂದು ಅಪ್ಪಣೆಯನ್ನಿತ್ತನು. ಅನಂತರದಲ್ಲಿ ವೈಶ್ರವ ಣನು ಉತ್ತರದಿಕ್ಕಿನಲ್ಲಿರುವ ಯಕ್ಷ ಜನಜಾಲವನ್ನು ಕರೆದು ಕೊಂಡು ಬ್ರಹ್ಮನು