ಪುಟ:ಕಥಾ ಸಂಗ್ರಹ - ಭಾಗ ೨.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ಡಿಗ್ನಿಜಯವು ಕೊಟ್ಟಿದ್ದ ವಿಮಾನವನ್ನೇರಿ ಹೊರಟು ಆ ಲಂಕಾನಗರವನ್ನು ಸೇರಿ ಅಲ್ಲಿ ಪ್ರಭುತ್ವ ವನ್ನು ಮಾಡಿಕೊಂಡು ಸುಖದಿಂದಿರುತ್ತಿದ್ದನು.

  • ಹೀಗಿರಲು ಮೊದಲು ಹೋಗಿ ರಸಾತಲದಲ್ಲಿ ಅವಿತುಕೊಂಡಿದ್ದ ಮಾಲಿ ಸುಮಾಳಿ ಮಾಲ್ಯವಂತರೆಂಬ ಮರು ಮಂದಿ ರಕ್ಕಸರಲ್ಲಿ ಒಬ್ಬನಾದ ಸುಮಾಲಿ ಎಂಬವನು ಭೂಲೋಕದಲ್ಲಿ ಸಂಚರಿಸಬೇಕೆಂಬ ಅಭಿಪ್ರಾಯದಿಂದ ತನ್ನ ಮಗಳಾದ ಕೈಕಸೆಯನ್ನು ಕರೆದುಕೊಂಡು ರಸಾತಲದಿಂದ ಹೊರಟು ಬಂದು ಭೂಲೋಕದಲ್ಲಿ ಸಂಚರಿಸುತ್ತಿರಲು; ಒಂದಾನೊಂದು ದಿನ ವೈಶ್ರವಣನು ಪಿತೃ ದರ್ಶನಾಸಕ್ತನಾಗಿ ವಿಮಾನದಲ್ಲಿ ಕುಳಿತು ಹೊರಟು ಗಗನಮಾರ್ಗದಲ್ಲಿ ದ್ವಿತೀಯಸೂರ್ಯನಂತೆ ಪ್ರಕಾಶಿಸುತ್ತ ತಂದೆಯ ಬಳಿಗೆ ಬಂದು ಆತನಿಗೆ ವಂದಿಸಿ ತಿರಿಗಿ ಲಂಕಾಪಟ್ಟಣವನ್ನು ಕುರಿತು ತೆರಳಿದುದನ್ನು ನೋಡಿ ಅಸೂಯಾಭರಿತನಾಗಿ--ನಮ್ಮ ಲಂಕಾನಗರವನ್ನು ಇವನಿಂದ ಕಿತ್ತುಕೊಂಡು ನಮ್ಮ ನಿವಾಸಯೋಗ್ಯವಾಗಿ ಮಾಡಿಕೊಳ್ಳುವುದಕ್ಕೆ ಏನು ಉಪಾಯವನ್ನು ಮಾಡಬೇಕೆಂದು ಸ್ವಲ್ಪ ಕಾಲದ ವರೆಗೂ ಯೋಚಿಸಿ ಸಮಿಾಪವರ್ತಿನಿಯಾಗಿರುವ ತನ್ನ ಮಗಳಾದ ಕೈಕಸೆಯನ್ನು ನೋಡಿ-ಎಲೈ ಪುತ್ರಿಯೇ, ನೀನು ಈ ಆಶ್ರಮದಲ್ಲಿರುವ ವಿಶ್ರವಸ್ಸೆಂಬ ಮಹಾಮುನಿಯ ಬಳಿಗೆ ಹೋಗಿ ಆತನನ್ನು ವರಿಸಿ ಆ ಮಹಾತ್ಮನಿಂದ ಮಕ್ಕಳನ್ನು ಪಡೆ ದರೆ ಆ ಮಕ್ಕಳ ಸಹಾಯದಿಂದ ನಾವು ಲಂಕಾಪಟ್ಟಣವನ್ನು ಪುನಃ ಹೊಂದಬಹುದು ಎಂದು ಹೇಳಿ ಆಕೆಯನ್ನು ಆ ಮುನಿಯ ಬಳಿಗೆ ಕಳುಹಿಸಿದನು.

ಆಗ ಸರ್ವಾಂಗಸುಂದರಿಯ ಕೋಮಲೆಯ ಆದ ಆ ಕೈಕಸೆಯು ಸಾಯಂಸಂಧ್ಯಾ ಸಮಯದಲ್ಲಿ ಆ ಮುನಿಪತಿಯ ಸವಿಾಪವನ್ನೆಯ್ಕೆ ನಮಾನನೆ ಯಾಗಿ ನಿಂತು ತನ್ನ ಪಾದಾಂಗುಷ್ಠ ದಿಂದ ಭೂಮಿಯನ್ನು ಗೀರುತ್ತ ಇರಲು; ಆತನು ತನ್ನ ಜ್ಞಾನದೃಷ್ಟಿಯಿಂದ ಈಕೆಯ ಮನೋಗತವನ್ನು ತಿಳಿದು ಈಕೆಯನ್ನು ಕುರಿತು-- ಎಲೈ ಕಾಂತಾಮಣಿಯೇ, ನೀನು ಬಂದುದಕ್ಕೆ ಕಾರಣವು ತಿಳಿಯಿತು. ರಾಕ್ಷಸ ಸಂಚಾರಕ್ಕೆ ಯೋಗ್ಯವಾದ ಈ ಮುಚ್ಚ೦ದೆಯ ಹೊತ್ತಿನಲ್ಲಿ ನೀನು ಪುತ್ರಾ ಪೇಕ್ಷಿಣಿ ಯಾಗಿ ನನ್ನ ಬಳಿಗೆ ಬಂದುದರಿಂದ ಲೋಕಕಂಟಕರೂ ಭಯಂಕರಾಕಾರರೂ ಆದ ಇಬ್ಬರು ಮಕ್ಕಳೂ ಒಬ್ಬಳು ಮಗಳೂ ನಿನ್ನ ಗರ್ಭದಲ್ಲಿ ಹುಟ್ಟುವರು ಎಂದು ಹೇಳಲು ; ಆಕೆಯು ಅಪಾರದುಃಖದಿಂದ ಆ ಮುನಿಯನ್ನು ನೋಡಿ~ ಧಾರಾರೂಪ ವಾಗಿ ಕಣ್ಣೀರನ್ನು ಸುರಿಸಲು; ಆಗಲಾ ಯತಿಯು ಡಯಾವಂತನಾಗಿ-ಎಲೈ ಸುಂದ ರಿಯೇ, ಧರ್ಮಿಷ್ಠನಾಗಿಯೂ ನಮ್ಮ ಕುಲಕ್ಕೆ ಭೂಷಣನಾಗಿಯೂ ಮತ್ತು ಸಜ್ಜನ ನಾಗಿಯೂ ಇರುವ ಇನ್ನೊಬ್ಬ ಮಗನು ಹುಟ್ಟುವನು, ಹೋಗು ಎಂದು ತಿರಿಗಿ ಅಪ್ಪಣೆಯನ್ನು ಕೊಟ್ಟು ದರಿಂದ ಆ ಕೈಕಸೆಯು ಆತನಿಗೆ ನಮಸ್ಕಾರವನ್ನು ಮಾಡಿ ಹಿಂದಿರುಗಿ ತಂದೆಯ ಬಳಿಗೆ ಬಂದು ನಡೆದ ವರ್ತಮಾನವನ್ನೆಲ್ಲಾ ಹೇಳಿದಳು. ಆಗ ಸುಮಾಲಿಯು ಸಂತೋಷಿಸಿ ಮೊಮ್ಮಕ್ಕಳ ಉದಯವನ್ನು ನಿರೀಕ್ಷಿಸುತ್ತ ಆ ಮುನಿ ವನದಲ್ಲಿಯೇ ಇರುತ್ತಿದ್ದನು. ಅನಂತರದಲ್ಲಿ ಕೆಲವು ದಿನಗಳು ಕಳೆದುಹೋದ ಮೇಲೆ ಕೈಕಸೆಯು ಹತ್ತು ತಲೆಗಳೂ ಇಪ್ಪತ್ತು ತೋಳುಗಳೂ ಉಳ್ಳ ಒಂದು ಪುರುಷಶಿಶುವನ್ನು ಪಡೆದಳು.