ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸೇತುಬಂಧನದ ಕಥ 119 ಕಪಿನಾಯಕರ ಬಲಸಾಹಸಾದಿಗಳ ಆಧಿಕ್ಯವು ಇಷ್ಟೇ ಎಂದು ನಿರ್ಣಯಿಸಿ ಹೇಳಬಲ್ಲವರಾರುಂಟು ? ಅನಂತರದಲ್ಲಿ ಬ್ರಹ್ಮನ ಮಗನಾದ ಜಾಂಬವಂತನ ಬಲವು ಸರ್ವಕಪೀಶ್ವರರ ಅದ್ಭುತಬಲವನ್ನೂ ಮರೆಯಿಸಿತು. ಈತನು ಹಿಮಾಚಲಕ್ಕೆ ಹಾರಿ ಕಣ್ಣುಗಳ ಮೇಲಿರುವ ಜೋಲು ಕೂದಲುಗಳನ್ನು ಮೇಲಕ್ಕೆ ನೆಗಹಿ ಹಿಡಿದು ನೋಡಿಓಹೋ ! ನಾವು ಮುದುಕರು; ಶರೀರದಲ್ಲಿ ಬಲವಿಲ್ಲದವರು. ಇದಕ್ಕಿಂತಲೂ ದೊಡ್ಡ ದಾದ ಗಿರಿಯನ್ನು ಹೊರಲಾರೆವು. ಆದುದರಿಂದ ನಮಗೆ ಈ ಬಡ ಬೆಟ್ಟವೊಂದೇ ಸಾಕು ಎಂದು ಎರಡು ಸಾವಿರ ಯೋಜನೆಗಳ ಅಗಲವೂ ಎರಡು ಸಾವಿರ ಯೋಜನಗಳ ಮಟ್ಟವೂ ಐವತ್ತೆರಡು ಸಾವಿರ ಯೋಜನಗಳ ಉದ್ದವೂ ಇರುವ ಆ ಹಿಮವತ್ಪರ್ವತ ವನ್ನು ಕಿತ್ತು ಮೇಲಕ್ಕೆತ್ತಲು ; ಆ ಗಿರಿರಾಜನ ಪತ್ನಿ ಯಾದ ಮೇನಕೆಯು ದಿಗ್ಗನೆ ಎದ್ದು ಜಾಂಬವಂತನ ಬಳಿಗೆ ಬಂದು--ಎಲೈ ವೃದ್ದನೇ, ನೀನು ಕೃತ್ಯಾ ಕೃತ್ಯಗಳನ್ನು ತಿಳಿದ ವಿವೇಕಶಾಲಿಯಾಗಿ ಈ ಪರ್ವತವನ್ನು ಕೇಳುವುದಕ್ಕೆ ಉಜ್ಜುಗಿಸಬಹುದೇ ? ನೀನು ಪರಾತ್ಪರನಾದ ಶಿವನ ಭಕ್ತನು. ಆ ಶಿವನ ಪಟ್ಟಮಹಿಷಿಯಾದ ಪಾರ್ವತಿ ಯು ನನ್ನ ಮಗಳು, ಸಕಲವನ್ನೂ ತಿಳಿದು ಪ್ರೌಢನಾಗಿರುವ ನಿನಗೆ ನಾನು ವಿಶೇ ಷವಾಗಿ ಹೇಳತಕ್ಕುದೇನಿದೆ ? ಎನ್ನಲು ; ಆಗ ಜಾಂಬವಂತನು--ನಾವು ಇದನ್ನು ಕೀಳುವುದರಿಂದ ಶಂಕರನ ಚಿತ್ರಕ್ಕೆ ವಿರೋಧವನ್ನುಂಟುಮಾಡಿದಂತಾಗುವುದು. ಅದು ಕಾರಣ ಈ ಕಾರ್ಯವು ಅನುಚಿತವಾದುದೆಂದೆಣಿಸಿ ಆ ಗಿರಿಯನ್ನು ಅಲ್ಲೇ ಬಿಟ್ಟು ಮೇನಾದೇವಿಯನ್ನು ಕುರಿತು-ನೀವು ಮಹಾದೇವನಿಗೆ ನಿಮ್ಮ ಮಗಳನ್ನು ಕೊಟ್ಟು ಮದುವೆಮಾಡಿದ ಮಹಾತ್ಮರಾದುದರಿಂದ ಈ ದಿವಸ ನಿಮ್ಮ ದರ್ಶನದಿಂದ ನಾನು ಕೃತಾರ್ಥನಾದೆನು ಎಂದು ಕೈ ಮುಗಿದು--ನೀವು ತೆರಳಬಹುದೆಂದು ಆಕೆಯನ್ನು ಕಳುಹಿಸಿ ಅದರ ಸುತ್ತಣ ಗಿರಿಗಳನ್ನು ಕಿತ್ತು ತಲೆಯ ಮೇಲೆ ಎಂಟು ಗಿರಿಗಳನ್ನೂ ಒಂದೊಂದು ಭುಜದಲ್ಲಿ ನಾಲ್ಕರಂತೆ ಎರಡು ಭುಜಗಳಲ್ಲೂ ಎಂಟು ಬೆಟ್ಟ ಗಳನ್ನೂ ಎರಡು ಕಂಕುಳುಗಳಲ್ಲೂ ಎರಡೆರಡು ಪರ್ವತಗಳನ್ನೂ ಎರಡಂಗೈಗಳಲ್ಲೂ ಒಂದೊಂದು ಗಿರಿಯನ್ನೂ ಧರಿಸಿಕೊಂಡು ಎರಡು ಕಾಲುಗಳಿಂದಲೂ ಒಂದೊಂದು ಗಿರಿಯನ್ನು ಉರುಳಿಸಿಕೊಂಡು ಹೊರಟು ಬರುತ್ತಿದ್ದನು. ಆಗ ಸುರರು ಆಶ್ಚರ್ಯದಿಂದ ಸ್ತಂಭೀ ಭೂತರಾಗಿ ನೋಡುತ್ತ ನಿಂತರು, ಶ್ರೀರಾಮನು ವಿಸ್ಮಿತನಾಗಿ ನೋಡುತ್ತಿದ್ದನು. ಈ ಮಹಾದ್ಭುತಕೃತ್ಯವನ್ನು ನಳನು ದೂರದಿಂದಲೇ ನೋಡಿ ಓಡಿ ಜಾಂಬವಂತನೆದುರಿಗೆ ಬಂದು ಆತನು ತಂದ ಗಿರಿಗಳನ್ನು ಅತಿಭಯಭಕ್ತಿಯಿಂದ ತೆಗೆದು ಕೊಂಡು ಹೊತ್ತು ಕೊಂಡು ಹೋಗಿ ಅವುಗಳನ್ನೆಲ್ಲಾ ಕಡಲಿನಲ್ಲಿ ಹುದುಗಿಸಿ ಸಂದುಸಂದುಗಳಿಗೆ ಚಿಕ್ಕ ಬೆಟ್ಟಗಳನ್ನು ಹವಣಿಸಿ ನೀರ್ಕೆರೆಯದಂತೆ ಇದಿರ್ಗಲ್ಲುಗಳ ಬೆಣೆಗಳನ್ನು ಹಾಕಿ ಹತ್ತು ಯೋಜನಗಳ ವರೆಗೂ ಸೇತುವನ್ನು ಕಟ್ಟಿ ದನು. ಅನಂತರದಲ್ಲಿ ಗವಯ ದಧಿಮುಖ ಕುಮುದ ಮೈಂಧಾದಿ ಕಪೀಶ್ವರರು ತೆಗೆದುಕೊಂಡು ಬಂದು ಹಾಕಿದ ಪರ್ವತಗಳಿಂದ ಸೇತುವು ಮವತ್ತು ಯೋಜನಗಳ ಪರ್ಯ೦ತರವೂ ಸಾಗಿತು. ಇಲ್ಲಿಗೆ ಅರವತ್ತು ಯೋಜನಗಳ ವರೆಗೂ ಸೇತುವು ಕಟ್ಟಲ್ಪಟ್ಟು ಸಂಚಾರಕ್ಕೆ ಸಿದ್ದ ವಾಯಿತು. ಲಂಕಾಪ