ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕುಂಭಕರ್ಣಸಂಹಾರ 143 ಈ ಮಹಾ ಶಕ್ತಿಯು ಹರಿಹರ ಬ್ರಹ್ಮಾದಿ ಪ್ರಚಂಡವೀರರ ಎದೆಗಳನ್ನು ಗಡಗಡನೆ ನಡುಗಿಸುವಂಥದು. ಇದರ ಮಹಾ ಘಾತದಲ್ಲಿ ನೀನು ಸಾಯದೆ ಉಳಿಯುವಿಯಾ ದರೆ ದಶವದನನು ತಂದ ಹೆಣ್ಣಿನ ಮುಂದಣ ಮದುವೆಯು ನಿನಗೆ, ಮತ್ತು ತ್ರಿಲೋಕ ಗಳಲ್ಲೂ ನಿನ್ನನ್ನು ಹೋಲುವ ಸುಭಟರಿಲ್ಲ ಎಂದನು. ಆಗ ವಿಭೀಷಣನು ಮನಸ್ಸಿ ನಲ್ಲಿ-ಆಹಾ ! ರಾಮಚಂದ್ರನ ಕೀರ್ತಿಲತೆಯ ಕೀಳಲ್ಪಡುವದೇ ! ಪಾಪವೆಂಬ ಮುಳ್ಳುಗಿಡವು ಬೆಳೆಯುವುದಕ್ಕೆ ಅವಕಾಶವುಂಟಾಗಿರುವುದೇ ? ಮುಂದೇನು ಗತಿ ? ಈ ಪ್ರಳಯ ಮಹಾ ಶಕ್ತಿಯನ್ನು ತಡೆಯುವವರಾರು ? ಎಂದು ಯೋಚಿಸಿ ಗಡಗ ಡನೆ ನಡುಗುತ್ತ ಶ್ರೀರಾಮನ ಬಳಿಗೆ ಓಡಿಬರುತ್ತಿರಲು; ರಾಮನು ವಿಭೀಷಣನೈತರು ವುದಕ್ಕೆ ಕಾರಣವನ್ನು ತಿಳಿದು ಕಡಲೆ ಮನಸ್ಸಿನಲ್ಲಿ ಬ್ರಹ್ಮನನ್ನು ಧ್ಯಾನಿಸುತ್ತ ಅತಿ ಶೀಘ್ರದಿಂದ ಒತ್ತಳಿಕೆಯಲ್ಲಿದ್ದ ವಾಯವ್ಯಾಸ್ತ್ರವನ್ನು ತೆಗೆದು ಬಲ್ಲಿನಲ್ಲಿ ಹೂಡಿ ಕುಂಭಕ ರ್ಣನ ಕೈಯಲ್ಲಿರುವ ಶಕ್ತಾಯುಧದ ಮೇಲೆ ಪ್ರಯೋಗಿಸಲು ; ಅದು ನಿರ್ಭರ ಗಮ ನದಿಂದ ಹೋಗಿ ಆ ದನು ಜನ ಶಕ್ತಾಯುಧದ ಮೇಲೆ ಬಿದ್ದು ತಾಗಿ ಅದನ್ನು ಆಕಾ ಶಮಾರ್ಗಕ್ಕೆ ಹಾರಿಸಿತು. ಆ ಶಕ್ತಿಯು ಆ ಮುಗತಿಯಿಂದ ಹೋಗಿ ಆಕಾಶಗಂಗೆಯ ನೀರುಗಳನ್ನೆಲ್ಲಾ ಹೀರಿ ಅಲ್ಲಿಂದ ಹೊರಟು ಇಂದ್ರನೇ ಮೊದಲಾದ ಮಹಾ ದೇವತೆಗಳ ನೈಲ್ಲಾ ಮಹಾಚ್ಯಾಲೆಯಿಂದ ಸುಟ್ಟು ಕಳವಳಪಡಿಸಿ ಬಾಯ್ಕೆಡಿಸಿ ಮುಂದೆ ಹೊರಟು ಮಹಾ ವೇಗದಿಂದ ಬರುತ್ತ ಸತ್ಯಲೋಕವನ್ನು ಪ್ರವೇಶಿಸಿ ಬ್ರಹ್ಮನ ಮಡಿಗೆಯನ್ನು ಹೊಕ್ಕು ಅಲ್ಲಿ ನಿಂತಿತು. ಆಗ ಕುಂಭಕರ್ಣನು ಆ ಬಲೆದು ಕೈಮಿಾರಿಹೋದುದನ್ನು ಕಂಡು ಮನಸ್ಸಿನಲ್ಲಿ ರಾಮನ ಸುಕೃತವನ್ನು ಹೊಗಳಿ ತಾನು ಸ್ವಲ್ಪವಾದರೂ ಕಂಗೆ ಡದೆ ಪರಿಘಾಯುಧವನ್ನು ತೆಗೆದು ಕೊಂಡು ಅದರಿಂದ ರಾಮನನ್ನು ಹೊಡೆಯಲು ; ಆತನು ಹರಿತವುಳ್ಳ ಐದಂಬುಗಳನ್ನು ಪ್ರಯೋಗಿಸಿ ಅದನ್ನು ಕತ್ತರಿಸಿ ಕೆಡಹಿ ದನು, ಮತ್ತೆ ಕುಂಭಕರ್ಣನು ಕ್ರುದ್ಧನಾಗಿ ಮೇರು ಪರ್ವತದಂತೆ ತೋರವಾದ ಗದಾ ಯುಧವನ್ನು ತೆಗೆದು ಕೊಂಡು ಬೀಸಿ ರಾಮನ ಮೇಲೆ ಹಾಕಲು ; ಅದು ಲೋಕಗಳ ನೆಲ್ಲಾ ಬೆದರಿಸುತ್ತ ಬರುತ್ತಿರುವುದನ್ನು ನೋಡಿ ಬಿಲ್ಲಾಳುಗಳ ಕಲ್ಲಾಯ್ತನಾದ ಶ್ರೀರಾ ಮನು--ಈ ಮಹಾಗದೆಯು ಈ ನಮ್ಮ ಯುದ್ಧಭೂಮಿಯಲ್ಲಿ ಬಿದ್ದರೆ ಕಪಿಕಟಕ ಕೈಲ್ಲಾ ಸಂಪೂರ್ಣ ಹಾನಿಯುಂಟಾಗುವುದೆಂದು ಭಾವಿಸಿ ವಿರಾಮವಿಲ್ಲದೆ ಐವತ್ತು ಬಾಣಗಳನ್ನು ಪ್ರಯೋಗಿಸಿ ಅದನ್ನು ಕಡಿದು ಹಾರಿಸಿ ಲಂಕೆಯಲ್ಲಿ ಬೀಳುವಂತೆ ಮಾಡಲು; ಆ ತುಂಡುಗಳು ಮಹಾ ತ್ವರಿತಗತಿಯಿಂದ ಹೋಗಿ ಲಂಕಾದುರ್ಗ ಮಧ್ಯ ದಲ್ಲಿ ಬಿದ್ದು ರಾಕ್ಷಸರ ಹಸ್ಯಶ್ವರಥಪದಾತಿರೂಪವಾದ ಚತುರಂಗಬಲವನ್ನು ಬಹಳ ವಾಗಿ ಕೊಂದು ಹಾಹಾಕಾರವನ್ನುಂಟುಮಾಡಿದುವು. ಅನಂತರದಲ್ಲಿ ಮೊಬ್ಬಿಗರೊಡೆಯನ ತಮ್ಮನಾದ ಕುಂಭಕರ್ಣನು ರಾಮನ ಸಮಿಾಪಕ್ಕೆ ತನ್ನ ತೇರನ್ನು ನೂಕಲು ; ಶ್ರೀರಾಮನು ಕುಪಿತನಾಗಿ ಬಾಣಪ್ರಯೋಗ ವನ್ನು ಮಾಡಿ ಆ ತೇರನ್ನೆಳೆಯುವ ಮದಗಜಗಳನ್ನೆಲ್ಲಾ ಸವರಿ ಸಾರಥಿಯ ತಲೆಗಡಿ ದನು, ಅಷ್ಟಾದಾಗ ಖಳನು ಸ್ವಲ್ಪವಾದರೂ ಕಂಗೆಡದೆ ಕೈಯಲ್ಲಿ ಖಡ್ಡಾಯುಧ