ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೪

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


144 ಕಥಾಸಂಗ್ರಹ-೪ ನೆಯ ಭಾಗ ವನ್ನು ತೆಗೆದು ಕೊಂಡು ಬೊಬ್ಬಿರಿಯುತ್ತ ರಾಮನ ಮೇಲೆ ಬಿದ್ದು ಹೊಡೆಯುವುದಕ್ಕೆ ಬರುತ್ತಿರಲು ; ಆತನು ಶೀಘ್ರದಿಂದ ದಿವ್ಯಾಸ್ತ್ರವನ್ನು ತೊಟ್ಟು ಪ್ರಯೋಗಿಸಿ ಅವನೆ ಹಸ್ಯವನ್ನು ಛೇದಿಸಿದನು, ಆ ಮೇಲೆ ಕುಂಭಕರ್ಣನು ತನ್ನ ಉಕ್ಕಿನ ರಥದ ಗಾಲಿ ಯನ್ನು ಕಳಚಿಕೊಂಡು ಮೋಟು ಕೈಗೆ ಸಿಕ್ಕಿಸಿಕೊಂಡು ತಿರುವಿ ರಾಮನನ್ನು ಹೊಡೆ ಯುವುದಕ್ಕೆ ಉದ್ಯುಕ್ತನಾಗಲು ; ರಾಮನು ದಿವ್ಯಾಸ್ತ್ರಪ್ರಯೋಗದಿಂದ ಅವನ ತೋಳನ್ನು ಕತ್ತರಿಸಿ ಹಾರಿಸಿ ಅದು ಸಮುದ್ರದಲ್ಲಿ ಬೀಳುವಂತೆ ಮಾಡಿದನು. ಆಹಾ ! ರಾವಣ ಸಹೋದರನ ಎದೆಗೆಚ್ಚನ್ನು ಬಣ್ಣಿಸುವವರಾರು ? ಅವನು ಅದರಿಂದ ಲೂ ಧೈರ್ಯಹೀನನಾಗದೆ ಎಡದೋಳಿನಿಂದ ರಾಮನನ್ನು ಅಪ್ಪಳಿಸಿ ಕೆಡಹುವೆನೆಂದು ಓಡಿಬರುತ್ತಿರಲು ; ಶ್ರೀರಾಮನು ಅಸ್ತ್ರ ಪ್ರಯೋಗದಿಂದ ಅದನ್ನೂ ಕಡಿದು ಸಮುದ್ರ ದಲ್ಲಿ ಹಾಕಿಸಿದನು, ಪುನಃ ಖಳನು ಒಗೆಗುಂದದೆ ರಾಮನ ಮೇಲೆ ಬಿದ್ದು ಕೊಲ್ಲು ವೆನೆಂದು ಮುಂದೈತರುತ್ತಿರಲು ; ಕೌಸಲ್ಯಾ ತನಯನು ವೈಷ್ಣ ವಾಸ್ತ್ರವನ್ನು ಪ್ರಯೋ ಗಿಸಿ ಅವನ ತಲೆಯನ್ನು ಕೆಡಹಿದನು. ಆ ಕೂಡಲೆ ದೇವತೆಗಳೆಲ್ಲಾ ಜಯ ಜಯ ವೆಂದು ಶ್ರೀರಾಮನನ್ನು ಹೊಗಳಿದರು. ದೇವದುಂದುಭಿಗಳನ್ನು ಬಾರಿಸಿದರು. ಶ್ರೀರಾಮನ ಮೇಲೆ ಹೂಮಳೆಗರೆದರು. ಅಪ್ಪರಸ್ತ್ರೀಯರು ನರ್ತಿಸಿ ಹಾಡುಗಳಿಂದ ಶ್ರೀರಾಮನ ಕೀರ್ತಿಯನ್ನು ಸ್ತುತಿಸಿದರು. ಜಗತ್ತಿನ ಪಾಪವು ಬೆಚ್ಚಿತು. ಅನ್ಯಾ ಯವು ಕಂಪಿಸಿತು, ದುರ್ನೀತಿಯು ನಡುಗಿತು, ಪರಹಿಂಸೆಯು ತಲೆಬೊಗ್ಗಿಸಿತು. ಲೋಕದ ಭೀತಿಯು ಜಡವಾಯಿತು, ಸುಳ್ಳನದೊಂದು ಕಣ್ಣು ಹೋಯಿತು, ಚೌರ್ಯ ದ ಕಾಲು ಮುರಿದಿತು. ಆಸುರಕರ್ಮಕ್ಕೆ ಎದೆನಡುಗು ಹುಟ್ಟಿತು. ತಮೋಗುಣದ ಕಿರೀಟವು ಕಳಚಿಬಿದ್ದಿತು ದುರ್ಗವ್ರದ ರತ್ನ ಸಿಂಹಾಸನವು ತಲೆಕೆಳಗಾಯಿತು, ಯಜ ವಿಚ್ಛತೆಗೆ ಮೇಲುಸಿರು ಕಂಡಿತು. ತಪೋಭಂಗದ ಲಲಾಟಲಿಪಿಯು ಅಳಿಸಲ್ಪಟ್ಟಿತು. ಹೇಳುವುದೇನು ! ರಾಕ್ಷಸಕುಲದ ಪರಿತಾಪಬೀಜವು ಮೊಳೆತುದು, ರಾಕ್ಷಸಕಟಕದಲ್ಲಿ ದುಃಖಧ್ವನಿಯೆದ್ದಿತು, ನಮ್ಮನ್ನು ನುಂಗಿಬಿಡುವುದಕ್ಕೆ ಬಂದಿದ್ದ ಒಂದು ಮಹಾಮ್ಮ ತ್ಯುವಿನ ನಾಮವು ನಿರ್ನಾಮವಾಯಿತೆಂದು ಸಂತೋಷದಿಂದ ಕಪಿಕಟಕವು ಮೈಯ್ಯು ಬ್ರಿ ಮೊರೆದಿತು, ನೀತಿಲತಾ ಕ೦ದನಾದ ರಘುನಂದನನು ಲೋಕಕಂಟಕನಾದ ಕುಂಭಕ ರ್ಣನ ಮರಣದಿಂದ ಜಗಜ್ಜ ನರ ಅರ್ಧಭಯವು ನಿವಾರಿತವಾಯಿತೆಂದು ಸಂತೋಷಯು ಕನಾಗಿ ರಣಾಂಗಣದಿಂದ ಹಿಂದಿರುಗಿ ಸುಗ್ರೀವ ವಿಭೀಷಣಾದಿಗಳಿಂದ ಸ್ತುತಿಸಲ್ಪಡು ತಿರುವವನಾಗಿ ತನ್ನ ಬೀಡಾರವನ್ನು ಕುರಿತು ತೆರಳಿದನು. ಇತ್ತ ಲಕ್ಷ್ಮಣಾಂಜನೇ ಯರು ಎದುರಾದ ರಾಕ್ಷಸ ಸೇನೆಗಳನ್ನೆಲ್ಲಾ ಸಂಹರಿಸಿ ರಾಮನ ಬಳಿಗೆ ಬಂದು ನಮಸ್ಕ ರಿಸಲು ; ಶ್ರೀರಾಮನು ಅವರನ್ನು ನೋಡಿ ಸಂತೋಷಸಾಗರದಲ್ಲಿ ಮುಳುಗಿ ಅವರಿಬ್ಬ ರನ್ನೂ ಬರಸೆಳೆದು ತೆಗೆದು ಆಲಿಂಗಿಸಿ ಮುದ್ದಿಸಿದನು, ಆ ಮೇಲೆ ಕಪಿವೀರರನ್ನೆಲ್ಲಾ ಸನ್ಮಾನಿಸಿ ಸಭಾಮಧ್ಯದಲ್ಲಿ ಕುಳಿತು ಪ್ರಮುಖರೊಡನೆ ಮುಂದಣ ಕಾರ್ಯಾಲೋಚ ನೆಯನ್ನು ಮಾಡುತ್ತಿದ್ದನು.