ಪುಟ:ಕಥಾ ಸಂಗ್ರಹ - ಭಾಗ ೨.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಥಾಸಂಗ್ರಹ-೪ ನೆಯ ಭಾಗ ಕೃತ್ಯನಾದೆನು. ಯಾವ ವಿಧವಾದ ಆಪತ್ತು ಬಂದರೂ ಧರ್ಮಕ್ಕೆ ಚ್ಯುತಿಯಿಲ್ಲದಂತೆ ಕಾಪಾಡಿಕೊಳ್ಳುವುದಕ್ಕೆ ಯೋಗ್ಯವಾದ ವರವನ್ನು ನನಗೆ ದಯಪಾಲಿಸು ಮತ್ತು ಅಭ್ಯಾಸವನ್ನು ಮಾಡದೆ ನಿನ್ನ ಅಸ್ತ್ರವೇ ಮೊದಲಾದ ಸಕಲದೇವತಾಮಂತ್ರಾಸ್ತ್ರಗಳ ಸಂಧಾನವನ್ನೂ ಉಪಸಂಹಾರವನ್ನೂ ಮಾಡುವ ವಿದ್ಯೆಯು ನನಗೆ ಲಭಿಸುವ ಹಾಗೆ ವರವನ್ನು ಕರುಣಿಸಬೇಕು ಎಂದು ಬೇಡಿಕೊಂಡನು. ಆಗ ಕಮಲಸಂಭವನು ಅವನು ಪ್ರಾರ್ಥಿಸಿಕೊಂಡ ಎರಡು ವರಗಳನ್ನೂ ಕೊಟ್ಟು, ಚಿರಜೀವಿಯಾಗಿರು ಎಂದು ತಾನಾಗಿ ಮತ್ತೊಂದು ವರವನ್ನು ದಯಪಾಲಿಸಿ ಆಶೀರ್ವದಿಸಿದನು. ಅನಂತರದಲ್ಲಿ ಹಿರಣ್ಯಗರ್ಭನು ಕುಂಭಕರ್ಣನಿಗೆ ವರವನ್ನು ಕೊಡಬೇಕೆಂದು ಆತನಿರುವ ತಪೋವನಾಭಿಮುಖನಾಗಿ ಬರುತ್ತಿರಲು ; ಆಗ ಇಂದ್ರಾದಿ ದೇವತೆಗಳೆ ಲ್ಲರೂ ಬಂದು ಸರಸ್ವತೀಪತಿಯನ್ನು ಕುರಿತು-ದೇವನೇ, ನೀನು ಕುಂಭಕರ್ಣನಿಗೆ ವರವನ್ನು ಕೊಡುವುದು ಉಚಿತವಲ್ಲ, ಇವನು ಈಗಲೇ ತ್ರಿಜಗಜ್ಜನರನ್ನೆಲ್ಲಾ ಹಿಡಿದು ಹಿಂಸಿಸುತ್ತ ಭಕ್ಷಿಸುತ್ತ ಇರುವನು. ಇಂಥ ದುಸ್ಸಭಾವವುಳ್ಳವನಿಗೆ ನೀನು ಹೋಗಿ ವರವನ್ನೂ ಕೊಟ್ಟರೆ ಎಲ್ಲಾ ಲೋಕಗಳೂ ಒಂದೇ ದಿವಸದಲ್ಲಿ ವಿನಾಶವಾಗುವುವು ಎಂದು ಕೈಮುಗಿದು ಬಹುವಿಧವಾಗಿ ಬೇಡಿಕೊಳ್ಳಲು; ಆಗ ಬ್ರಹ್ಮನು ಸರಸ್ವತಿಯನ್ನು ಬರಮಾಡಿ-ಎಲೈ ವಾಣಿಯೇ, ಈ ಕುಂಭಕರ್ಣನು ವರವನ್ನು ಕೇಳಿಕೊಳ್ಳುವ ಸಮ ಯದಲ್ಲಿ ನೀನು ಇವನ ಹೃದಯದಲ್ಲಿ ಸೇರಿಕೊಂಡಿದ್ದು ದೇವತೆಗಳಿಗೆ ಹಿತವಾಗುವು ದಕ್ಕೆ ಯೋಗ್ಯವಾದ ಮಾತುಗಳನ್ನು ಇವನ ಬಾಯಿಂದ ಹೊರಡಿಸು ಎಂದು ಮೊ ದಲೇ ಹೇಳಿಕಳುಹಿಸಲು ; ಆಕೆಯು ಅದರಂತೆ ಹೋಗಿ ಅವನ ಹೃದಯವನ್ನು ಪ್ರವೇ ಶಿಸಿ ಸ್ವಾನುಕೂಲ ವಿಷಯದಲ್ಲಿ ಅವನಿಗೆ ವಿಕಲ್ಪವಾದ ಬುದ್ದಿಯನ್ನು ಂಟುಮಾಡಿದಳು. ಆ ಸಮಯದಲ್ಲಿ ಬ್ರಹ್ಮನು ಕುಂಭಕರ್ಣನ ಬಳಿಗೈತಂದು ಎಲೈ ಖಳಶಿರೋಮಣಿ ಯಾದ ಕುಂಭಕರ್ಣನೇ, ನಾನು ನಿನ್ನ ತಪಸ್ಸಿಗೆ ಮೆಚ್ಚಿದೆನು. ವರಗಳನ್ನು ಬೇಡು, ಕೊಡುವೆನು ಎನ್ನಲು ; ಆಗ ಆ ಕುಂಭಕರ್ಣನು-ಎಲೈ ಅಬ್ಬಸಂಭವನೇ, ಬಹು ಕಾಲ ನಿದ್ರೆಯನ್ನು ಅನುಭವಿಸುತ್ತಿರುವ ಹಾಗೆ ನನಗೆ ವರವನ್ನು ಕರುಣಿಸೆನಲು ; ಚತುರಾನನನು ಹಾಗೇ ಆಗಲಿ ಎಂದು ಹರಸಿ ಸರಸ್ವತೀ ಸಮೇತನಾಗಿ ಹೊರಟು ಸತ್ಯ ಲೋಕವನ್ನು ಕುರಿತು ತೆರಳಿದನು. ಅನಂತರದಲ್ಲಿ ಸರಸ್ವತಿಯಿಂದ ಬಿಡಲ್ಪಟ್ಟ ಕುಂಭ ಕರ್ಣನು--ದೇವತೆಗಳ ಮೋಸಕೃತ್ಯದಿಂದ ತನಗೆ ಈ ವಿಧವಾದ ಅವಿಚಾರಮತಿ ಯುಂಟಾಯಿತೆಂದು ತನ್ನ ಅಕೃತ್ಯವನ್ನು ನಿಂದಿಸಿ ವ್ಯಸನಪಟ್ಟನು. ಅನಂತರದಲ್ಲಿ ಸಹೋದರರಾದ ಆ ಮೂರು ಮಂದಿಯ ಬ್ರಹ್ಮದೇವನಿಂದ ವರಗಳನ್ನು ಪಡೆದು ಕೊಂಡು ಬಂದು ಇನ್ನು ಮೇಲೆ ನಾವು ಮಾಡತಕ್ಕೆ ಕಾರ್ಯವಾವುದು ಎಂದು ಯೋಚಿಸುತ್ತ ಶ್ಲೇಷ್ಠಾತಕವೆಂಬ ಮನದಲ್ಲಿರುತ್ತಿದ್ದರು." - ಅನಂತರದಲ್ಲಿ ಸುಮಾಲಿಯು ತನ್ನ ಮಗಳ ಮಕ್ಕಳು ತಪಸ್ಸು ಮಾಡಿ ಬ್ರಹ್ಮ, ನಿಂದ ವರಗಳನ್ನು ಪಡೆದ ವರ್ತಮಾನವನ್ನು ಕೇಳಿ ಬಹಳವಾಗಿ ಸಂತೋಷಿಸಿದವನಾಗಿ ಮಹೋದರ ವಜ್ರದಂಷ್ಟ್ರ ಸುಪಾರ್ಶ್ವ ಮಾರೀಚ ಪ್ರಹಸ್ತ ಅಕಂಪ ಧೂಮ್ರಾಕ್ಷ