ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

150 ಕಥಾಸಂಗ್ರಹ-೪ ನೆಯ ಭಾಗ ಅನಂತರದಲ್ಲಿ ರಾವಣಾತ್ಮಜನಾದ ಇಂದ್ರಜಿತ್ತು ಅಮೋಘವಾದ ಬ್ರಹ್ಮಾಸ್ತವ ನ್ನು ಪ್ರಯೋಗಿಸಿ ಹನುಮಂತನನ್ನು ಕಟ್ಟಿದನು. ಚಾಂಬವಂತನನ್ನು ಬಿಗಿದನು, ಸುಗ್ರೀವ ನನ್ನು ಸುತ್ತಿ ಕೆಡಹಿದನು. ಉಳಿದ ಸಮಸ್ತ ಕಪಿಸೇನಾಪತಿಗಳನ್ನು ಹೊಡೆದು ಭೂಮಿಯಲ್ಲಿ ಮಲಗಿಸಿದನು, ಆ ಬಳಿಕ ರಾಮಲಕ್ಷ್ಮಣರ ಬಳಿಗೆ ಬಂದು--ಹೆಂಡ ತಿಯನ್ನು ಕಳೆದುಕೊಂಡ ಅಳಲಿನಿಂದ ಮರುಳಾಗಿ ತಮ್ಮನೊಡನೆ ಕಪಿಗಳ ಬಳಗ ವನ್ನು ಕೊಲ್ಲಿಸಿದ ಕಲಿಯು ನೀನೆಯೋ ? ಎಂದು ನೆಲನದುರುವಂತ ಸಿಂಹಗರ್ಜನೆ ಯನ್ನು ಮಾಡಿ ಅಸ್ತ್ರಗಳನ್ನು ಪ್ರಯೋಗಿಸಿ ರಾಮಲಕ್ಷ್ಮಣರನ್ನು ನೆಲದಲ್ಲಿ ಒರಗಿಸಿ ಜಯಭೇರಿಯನ್ನು ಹೊಡಿಬತ್ತ ಉಳಿದ ರಾಕ್ಷಸ ಸೇನಾಸಮೇತನಾಗಿ ಹೊರಟು ಲಂಕಾನಗರಕ್ಕೆ ಬರುತ ಮುಂಚಿತವಾಗಿ ತಂದೆಗೆ ಒಸಗೆಯನು ಹೇಳಿಕಳುಹಿಸೇಲ ; ರಾವಣನು ಆ ಮಾತುಗಳನ್ನು ಕೇಳಿ ಸಂತೋಷದಿಂದ ಹಿಗ್ಗಿದವನಾಗಿ ಮಂತ್ರಿ ಸೇನಾಪತಿ ಪುರೋಹಿತ ಪರಿಜನ ಪುರಜನರೊಡನೆ ಕೂಡಿ ಸಕಲವಾದ್ಯಗಳ ಜಯಧ್ವನಿಯನ್ನು ಮಾಡಿಸುತ್ತ ಅರಮನೆಯಿಂದ ಹೊರಟು ಮಗನೆದುರಿಗೆ ಬಂದು ಅವನನ್ನು ಬಾಚಿ ತಬ್ಬಿ ಕೊಂಡು--ಎಲೈ ಮಗನೇ, ನನ್ನ ಕುಲರತ್ನ ವೇ, ರಾಕ್ಷಸ ಕುಲಾಂಬುಜ ಮಿತ್ರನೇ, ಅಸುರವೈರಿವ್ರಾತಜಲದ ಜಂಝಾಮಾರುತನೇ ಎಂದು ಆನಂದಬಾಷ್ಪವನ್ನು ಸುರಿಸಿ ದನು, ಮತ್ತು ಮಗನ ಮೈದಡವಿ-ಎಲೈ ಕುಮಾರನೇ, ನೀನು ಮೊದಲು ನನ್ನೊ ಡನೆ ಆಡಿದ ಪ್ರತಿಜ್ಯೋಕ್ಕಿಗಳನ್ನು ಮರೆಯದೆ ವಿರೋಧಿ ವೀರರ ತಲೆಗಳನ್ನು ಚಂಡಾಡಿ ವಿಜಯಶೀಲನಾಗಿ ಬಂದೆಯಾ ? ಎಂದು ಪರಮಾನಂದಭರಿತನಾಗಿ ಮಗನೊಡನೆ ಕೂಡಿ ಪುರಪ್ರವೇಶವನ್ನು ಮಾಡಲು ; ಆಗ ಇಂದ್ರಜಿತ್ತಿನ ಮೇಲೆ ಪುರನಾರಿಯರು ಪೂಮಳೆ ಗರೆದರು. ಬತ್ತದ ಅರಳುಗಳು ಎರಚಲ್ಪಟ್ಟು ವು. ಅರಮನೆಯ ಬಾಗಿಲಲ್ಲಿ ದೈತ್ಯ ಸು ಮಂಗಲೆಯರು ಮುಕ್ವಾರತ್ನಗಳ ಆರತಿಗಳನ್ನು ತಂದು ನೀರಾಜಿಸಿದರು. ಅನಂತರ ದಲ್ಲಿ ರಾವಣನು ತನ್ನ ಮಗನಿಗೆ ದಿವ್ಯತೈಲಾಭ್ಯಂಗವನ್ನು ಮಾಡಿಸಿ ಪರಿಮಳೋದಕ ದಿಂದ ಸ್ವಾನಂಗಯೀ ಆಮಲ್ಯಾಂಬರಾಭರಣಗಳನ್ನು ಧರಿಸಿ ಅವನೊಡನೆ ಮೃಷ್ಟಾನ್ನ ಭೋಜನವನ್ನು ಮಾಡಿ ಗಂಧ ಪುಷ್ಟ ತಾಂಬೂಲಗಳನ್ನು ಕೊಡಿಸಿ ಮನ್ನಿಸಿ ಅವನನ್ನು ಮನೆಗೆ ಕಳುಹಿಸಿ ತಾನು ತನ್ನ ಅಂತಃಪುರವನ್ನು ಪ್ರವೇಶಿಸಿ ಪಟ್ಟ ದರಿಸಿಯಾದ ಮಂಡೋ ದರಿಯೊಡನೆ ಮಗನ ವಿಜಯವಾರ್ತಾಪ್ರಸಂಗವನ್ನು ಮಾಡಿ ಸಂತೋಷಿಸಿ ಆ ರಾತ್ರಿ ಯಲ್ಲಿ ಸುಖದಿಂದ ನಿದ್ರಿಸಿದನು. ಇತ್ತ ರಣಭೂಮಿಯೆಲ್ಲವೂ ನಿಶ್ಯಬ್ದವಾಗಿರುವುದನ್ನು ಕಂಡು ವಿಭೀಷಣನು .ದಾರುಣವ್ಯಥಾಪರಿತಪ್ತನಾಗಿ ಕಣ್ಣೀರುಗಳನ್ನು ಸುರಿಸುತ್ತ ಪಾಪಿಯ ಮಾಯಾ ಯುದ್ಧ ದಲ್ಲಿ ರಾಘವೇಶ್ವರನ ಕಪಿಬಲಾಂಬುಧಿಯು ಬತ್ತಿ ತಲ್ಲಾ! ಸುಗ್ರೀವ ನೀಲಜಾ೦ ಬವತ್ತು ಷೇಣ ನಳ ಹನುಮದಾದಿಗಳು ಏನಾಗಿರುವರೋ ? ರಾಮಲಕ್ಷ್ಮಣರು ಹೇಗಿರುವರೋ ? ಎಂದು ಹೊರಟು ರಣರಂಗದಲ್ಲಿ ಹುಡುಕುತ್ತ ಬರುತ್ತಿರಲು; ಅಲ್ಲಿ ಹೆಣಗಳನ್ನು ತಿಂದು ನೊರೆ ನೆತ್ತರಗಳನ್ನು ಕುಡಿದು ಕುಣಿಯುತ್ತಿರುವ ಪಿಶಾಚಾದಿ ಗಳನ್ನು ನೋಡಿದನು, ಅವುಗಳಲ್ಲಿ ಕೆಲವು ಪಿಶಾಚಗಳು ಆನೆಯ ಕುಂಭಸ್ಥಳಗಳೆಂಬ