ಇಂದ್ರಜಿತ್ಸಂಹಾರ 157 ಶತ್ರುಘಾ ದ್ಯರಿಗೂ ಪುರಜನರಿಗೂ ನಾನು ಹೇಳತಕ್ಕ ಮಾತಾವುದು ? ರಾಕ್ಷಸರಣ ದೇವತೆಗೆ ನಿನ್ನನ್ನು ಒಪ್ಪಿಸಿ ನಿರ್ಭಾಗ್ಯನಾದೆನೆಂದು ಹೇಳಲೇ ? ಇನ್ನು ಮೇಲೆ ನಾನು ಮಾಡಬೇಕಾದ ಯೋಚನೆ ಯಾವುದು ? ಇನ್ನು ಮೇಲೆ ನಾನು ಈ ಹಗೆಗಳನ್ನು ಕೊ೦ದು ಫಲವೇನು ? ಈ ಕಪಿವೀರರನ್ನು ಏಕೆ ವೃಥಾ ದಣಿಸಬೇಕು ? ಅರ್ಧಾಂಗಿ ಯಾದ ನೀನು ಸತ್ತ ಮೇಲೆ ಈ ನನ್ನ ಕೆಟ್ಟಬಾಳಿನಿಂದ ಏನೂ ಗುಣವಿಲ್ಲ, ಸೇವೆ ಯಲ್ಲಿ ದಾಸಿಯಂತೆಯ ಆಲೋಚನೆಯಲ್ಲಿ ಮಂತ್ರಿಯಂತೆಯೂ ನನ್ನ ದೇಹಪೋಷಣೆ ಯಲ್ಲಿ ತಾಯಂತೆಯ ಕ್ಷಮೆಯಲ್ಲಿ ಭೂಮಿಯಂತೆಯ ಇದ್ದ ನಿನ್ನನ್ನು ತೀರಿಸಿ ಕೊಂಡು ನಿನ್ನ ಸಚ್ಚರಿತ್ರೆಯನ್ನೆಲ್ಲಾ ಮರೆತು ಕೃಪಣನಾಗಿ ನಾನು ಬಾಳುವುದಕ್ಕಿಂ ತಲೂ ಅಪಹಾಸ್ಯಕರವಾದ ಸ್ಥಿತಿಯು ಯಾವುದೂ ಇಲ್ಲವು ಎಂದು ವಿವಿಧವಾಗಿ ಹೇಳಿ ಕೊಳ್ಳುತ್ತ ಹಂಬಲಿಸುತ್ತಿರಲು ; ಆ ಸಮಯದಲ್ಲಿ ಗದಾದಂಡವನ್ನು ಧರಿಸಿಕೊಂಡು ವಿಭೀಷಣನು ಯುದ್ಧ ಭೂಮಿಯಿಂದ ಬಂದು ಆ ಸ್ಥಿತಿಯನ್ನು ನೋಡಿ ಸಾಂಗೋಪಾಂಗವಾಗಿ ತಿಳಿದು ಶ್ರೀರಾಮನನ್ನು ಕುರಿತು-ಎಲೈ ದೇವನೇ, ನೀನು ಲೋಕದವರಂತೆ ನರನೇ ? ಸೀತಾ ದೇವಿಯು ಜಗತ್ತಿನ ಹೆಣ್ಣುಗಳಂತೆ ಮಾನವಿಯೇ ? ಇಂಥ ಮಾಯಾ ವಿಲಾಸಕ್ಕೆ ಮನಸ್ಸನ್ನು ಮಾರಿ ಮರುಗುವುದುಚಿತವೇ ? ಜನಕಜೆಯು ಲೋಕಮಾತೃವಾದ ಲಕ್ಷ್ಮಿದೇವಿಯಲ್ಲವೇ ? ಸುರಾಸುರನರೋರಗರೊಳಗೆ ಆಕೆಯ ಮೈ ಮೇಲೆ ಕೈಯಿಟ್ಟು ಬದುಕುವವರುಂಟೇ ?” ಆಕೆಯು ಕುಪಿತಳಾಗಿ ಶಪಿಸಿದರೆ ಕ್ಷಣಕಾಲದಲ್ಲಿ ಲೋಕವೆ ಲ್ಲವೂ ಭಗೀಕೃತವಾಗದಿರುವುದೇ ? ಈ ಅಲ್ಪ ಚೀನಿಯಾದ ರಾವಣಾತ್ಮಜನು ಆಕೆಯನ್ನು ಕೊಲ್ಲು ವುದುಂಟೇ ? ಎಂದಿಗೂ ಇಲ್ಲ ವ, ಸರ್ವಜ ನ ಸರ್ವಾ೦ತ ರ್ಯಾಮಿಯ ಆದ ನಿನಗೆ ಅಲ್ಪಜ್ಞನಾದ ನಾನು ವಿಶೇಷವಾಗಿ ವಿಜ್ಞಾಪಿಸತಕ್ಕು ದೇನಿದೆ ? ಇದೆಲ್ಲವೂ ಮಾಯಾವಿಯಾದ ಇಂದ್ರಜಿತ್ತಿನ ಕಾಪಟ್ಟವು. ಅವನು ಅಪಜ ಯಶಂಕಿತನಾಗಿ ನಿನಗೂ ನಿನ್ನ ವೀರಪರಿವಾರಕ್ಕೂ ದುಃಖವನ್ನು ಹುಟ್ಟಿಸಬೇಕೆಂಬ ಯೋಚನೆಯಿಂದ ಮಾಡಿದ ಕುಕೃತ್ಯವು, ಇದು ನಿಜವಲ್ಲ, ಇದಕ್ಕಾಗಿ ಅಣುಮಾತ್ರ ವಾದರೂ ಚಿಂತಿಸಬೇಡ. ಈಗಲೇ ಈ ಮಾರುತಾತ್ಮಜನನ್ನು ಕಳುಹಿಸು, ಆತನ ಸಂಗಡ ನನ್ನ ಮಂತ್ರಿಗಳಲ್ಲಿ ಒಬ್ಬನನ್ನು ಕಳುಹಿಸುವೆನು. ಅಲ್ಲಿ ಸೀತಾದೇವಿಯು ಇಲ್ಲದಿದ್ದರೆ ಸತ್ಯವಾಗಿ ನಾನು ನಿನ್ನ ಡಿಗಳ ಸೇವಕನಲ್ಲ ಎಂದು ಹೇಳಲು ; ರಾಮನು ಆ ಮಾತುಗಳನ್ನು ಕೇಳಿ ಆಶ್ಚರ್ಯಮನಸ್ಕನಾಗಿ ಕರಸಂಜ್ಞೆಯಿಂದ ಆ೦ಜನೇಯನಿಗೆ ಅಪ್ಪಣೆಯನ್ನು ಕೊಡಲು; ಆಗ ಅಂಜನೆಯ ಮಗನು ಅಲ್ಲಿಂದ ಲ೦ಘಿಸಿ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಅಶೋಕವನಕ್ಕೆ ಹೋಗಿ ಪೂರ್ವದಂತೆ ರಾಮಧ್ಯಾನಪರಾ ಯಣಳಾಗಿರುವ ಸೀತೆಯನ್ನು ಕಂಡು ಸಂತುಷ್ಟ ಚಿತ್ತನಾಗಿ ತಿರಿಗಿ ಬಂದು ರಾಮನ ಸನ್ನಿಧಿಯಲ್ಲಿ ದೇವಾ, ನಿನ್ನರಸಿಯಾದ ಸೀತೆಯು ನಿನ್ನ ಡಿದಾವರೆಗಳ ನೆನಪೆಂಬ ಅಮೃತವನ್ನು ಪಾನಮಾಡುತ್ತ ಸುಖವಾಗಿರುವಳು ಎಂದು ಹೇಳಲು ; ಆಗ ಶ್ರೀರಾ ಮನ ಹೃದಯದಲ್ಲಿ ಉತ್ಪನ್ನ ವಾದ ಸಂತೋಷಕ್ಕೆ ಉಪಮಾನವೇ ಇಲ್ಲ. ಜಾಂಬವ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೭
ಗೋಚರ