ರಾವಣನ ಮರಣವು 173 ಮೆಯನ್ನು ಯಾರಲ್ಲಿ ನಡಿಸಬೇಕೆಂದು ಯೋಚಿಸಿರುವಿ ? ನಿಲ್ಲು ನಿಲ್ಲು ! ನಾನು ಯಾರು ನೋಡು ! ನಿನ್ನ ಅಭಿಮುಖವಾಗಿ ನಿಂತಿದ್ದರೂ ನೋಡಿ ಭಯಪಡದೆ ಹುಚ್ಚ ನಂತೆ ಹೋಗುತ್ತಿರುವ ನಾನು ನಿನಗೆ ಕಾಲಮೃತ್ಯು ಪ್ರಾಯನಾದ ನೀಲನಲ್ಲವೋ? ಸುಮ್ಮನೆ ನಿಂತು ನನ್ನೊಡನೆ ಯುದ್ಧವನ್ನು ಮಾಡು, ಹಾಗೆ ಮಾಡದೆ ಮುಂದೆ ಸಾಗು ವುದಕ್ಕೆ ಯತ್ನಿಸಿದಿಯಾದರೆ ನಿನ್ನ ತಲೆಗಳೆಲ್ಲಾ ಉದುರುವಂತೆ ಹೊಯ್ಕೆನು ಅಂದನು. ಆ ಮಾತುಗಳನ್ನು ಕೇಳಿ ರಾವಣನು-ಅಹುದಹುದು ! ನಾವು ಬಲ್ಲೆವು. ನೀನು ಕೋತಿಗಳ ದಂಡಿನಲ್ಲಿ ಘೋರಪರಾಕ್ರಮಿಯು, ನಾನು ನಿನಗೆ ಹೆದರುವೆನು. ನೀನು ನನಗೆ ಉಬ್ಬಸವನ್ನುಂಟು ಮಾಡದೆ ಬಿಡುವ ಭಟನಲ್ಲ, ಎಲಾ, ಬಡ ಮುದಿ ಗೋಡಗನೇ ! ಮದಿಸಿರುವ ಮಹಾಜಗದ ಕುಂಭಸ್ಥಳವನ್ನು ಭೇದಿಸುತ್ತಿರುವ ಮೃಗ ರಾಜನನ್ನು ಗುಳ್ಳೆನರಿಯು ಹೆದರಿಸಿ ಜೀವಿಸಿದುದುಂಟೇ ? ವಿಷಗ್ರೀವನಿಗೆ ಸಮಬಲ ನಾದ ಸುಗ್ರೀವನನ್ನು ತಿಂದು ಮುಂದೆ ಬರುತ್ತಿರುವ ನನಗೆ ಅಲ್ಪನಾದ ನೀನೆದುರೇ ? ದೇವಾಸುರನರೋರಗರಲ್ಲಿ ನನ್ನ ಸಂಗಡ ವಿರೋಧ ಭಾವದಿಂದ ನಿಂತು ಬದುಕಿದವರು ಈ ವರೆಗೂ ಯಾರೂ ಇಲ್ಲ, ಮಿಕ್ಕ ಹುಲ್ಕಿಗಮಾನಿಸರು ನನಗೆ ಗಣ್ಯವೇ ? ದಾರಿ ಯನ್ನು ಬಿಟ್ಟು ಉಸಿರುಳಿಸಿಕೋ ಎಂದನು. ಆಗ ನೀಲನು--ಎಲಾ, ಶುಂಠನೇ ! ಕಳ್ಳರ ಮಾತು ತಳವಾರರ ಕೇರಿಯಲ್ಲಿ ನಡೆವುದಲ್ಲದೆ ಪ್ರಸಿದ್ದ ಸಭಾಮಧ್ಯದಲ್ಲಿ ಮೆರೆಯಬಲ್ಲುದೇ ? ಇಲ್ಲವಷ್ಟೆ, ಹಾಗೆ ವೀರರಾದ ನಮ್ಮಲ್ಲಿ ಈ ನಿನ್ನ ಆತ್ಮಸ್ತುತಿಯು ಶೋಭಿಸುವುದೇ ? ಏಕೆ ಸುಮ್ಮನೆ ಜಳ್ಳು ನುಡಿಗಳನ್ನು ಹರಟುತ್ತಿರುವಿ ? ಶ್ರೀರಾಮನ ದೂತರಿಗೆ ಲೋಕತ್ರಯದಲ್ಲೂ ಎಲ್ಲಾ ದರೂ ಎಂದಿಗಾದರೂ ಭಯವುಂಟಾಗುವುದೇ ? ನಿನ್ನ ಬಾಯಿಬಡುಕತನದ ಮಾತು ಗಳನ್ನು ನಿನ್ನೂರಿನ ಬಡ ರಕ್ಕಸರೊಡನೆ ಹರಟು, ವೀರರಾದ ನಮ್ಮೊಡನೆ ಹರಟಿದರೆ ನಿನ್ನ ಹತ್ತು ತಲೆಗಳನ್ನೂ ಕಿತ್ತು ಚಂಡಾಡಿಬಿಡುವೆನು, ನಮ್ಮ ಯಜಮಾನನಾದ ರಾಘವನಿಂದ ನಿನ್ನ ಪ್ರಾಣಗಳ ಮೇಲಣ ಅಧಿಕಾರವನ್ನು ಹೊಂದಿ ಬಂದಿದ್ದೇನೆ. ನಿನ್ನಂಥ ನೂರು ಜನ ರಾವಣರು ಬಂದಾಗ ನಾನು ಲಕ್ಷ್ಯಮಾಡುವುದಿಲ್ಲ. ಲೋಕದಲ್ಲಿ ಕೆಲವು ಕಳ್ಳತನಗಳು ದಕ್ಕಿದರೂ ದಕ್ಕಬಹುದು, ಕಡೆಯಲ್ಲಿ ಕಳ್ಳರಿಗೆ ಕಳ್ಳತ ನಗಳೇ ಮೃತ್ಯುವಾಗಿ ಪರಿಣಮಿಸುತ್ತವೆ. ಹಾಗೆ ದೈವಬಲಹೀನನಾದ ನೀನು ಒಂದು ವೇಳೆ ಮಾಯೆಯಿಂದ ಕೆಲವರನ್ನು ಜಯಿಸಿದ ಮಾತ್ರಕ್ಕೆ ಈಗಲೂ ಅಂಥ ಜಯವು ಉಂಟಾಗುವುದೆಂದು ಬಗೆದು ಬಂದಿಯಾ ? ಇದರಿಂದ ನಿನ್ನಂಥ ಉನ್ಮತ್ರನು ಭೂಮಂಡಲದಲ್ಲಿ ಎಲ್ಲೂ ಇಲ್ಲ ವೆಂದು ಯೋಚಿಸಬೇಕಾಗುತ್ತಿದೆ. ನಾನು ನಿನ್ನನ್ನು ವಿಧ್ವಂಸಮಾಡಿಬಿಡುವುದಕ್ಕೆ ಸಿದ್ಧನಾಗಿ ನಿಂತಿದ್ದೇನೆ ನೋಡು ಎಂದು ಹೇಳಿದನು. " ಆಗ ರಾವಣನು ನಸುನಗುತ್ತ -ಎಲೈ ಮುದಿಗೋಡಗವೇ ? ನೀನು ಕಪಿಯು. ನಿನ್ನ ಸ್ವಭಾವವು ಚಪಲವುಳ್ಳುದು. ಕಪಿಗಳು ಸ್ವಭಾವವಾಗಿ ಮಾಡುವ ಚೇಷ್ಟೆಗಳೆಲ್ಲಾ ಹಾಸ್ಯಕ್ಕೆ ಗುರಿಯಾಗುವುವು. ಈಗ ಪ್ರಯತ್ನಪೂರ್ವಕವಾಗಿ ಮಾಡುತ್ತಿರುವ ನಿನ್ನ ಚೇಷ್ಟೆ ಯನ್ನು ಕುರಿತು ಹೇಳತಕ್ಕುದೇನು ? ಬರಿಯ ಎದೆಗೆಚ್ಚಿನ ಜಳ್ಳಾತುಗಳಿಂದ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೩
ಗೋಚರ