ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


174 ಕಥಾಸಂಗ್ರಹ-೪ ನೆಯ ಭಾಗ ನಮ್ಮ ನ್ನು ತೀರಿಸ್ಕರಿಸಿ ನುಡಿಯುತ್ತಿರುವಿ ? ಆಗಲಿ. ಹಾಗಾದರೆ ನಾವು ನಿನ್ನ ಪರಾಕ್ರ ಮವನ್ನು ನೋಡಬೇಕು ! ಎಂದು ಬಿಲ್ಲಿನ ತೆಬ್ಬಿನಲ್ಲಿ ಬಾಣವನ್ನು ಹೂಡಿ ಗುರಿಗಟ್ಟಿ ನೀಲನನ್ನು ಹೊಡೆದನು. ಆಗ ನೀಲನು--ಎಲಾ ಬಡಾಳೇ, ಈ ಬಾಣದಿಂದ ಶತ್ರುವು ಸಾಯುವನು, ಆ ಮೇಲೆ ನಾನು ಸುಖವಾಗಿ ಬಾಳುವೆನೆಂದು ನಿರ್ಧರಿಸಿದ್ದೀಯಾ ? ಛೇ ! ನೀಚನೇ, ಹೋಗು, ಲೋಕದಲ್ಲಿ ಒಣಸೌದೆಗಳಿಂದ ಮಹಾಗ್ನಿಗೆ ಹಾನಿ ಯುಂಟಾದೀತೇ ? ಖಡ್ಡ ಹತಿಯಿಂದ ಆಕಾಶವು ಅಂಜುವುದೇ ? ಅದರಂತೆ ನಿನ್ನ ಬಾಣ ಹತಿಯಿಂದ ನನಗೆ ಬಾಧೆಯಾಗುವುದುಂಟೇ ಎಂದು ಹೇಳಿ ಬೊಬ್ಬಿರಿದು ಬಿಡುಗಣ್ಣರ ಸಂದಣಿಯು ಮಜಭಾಪು ! ಎಂದು ಹೊಗಳುತ್ತಿರಲು ರಾವಣನನ್ನು ತಿವಿದನು. ಅನಂತರದಲ್ಲಿ ರಾವಣನು ಆ ಪೆಟ್ಟನ್ನು ಸಹಿಸಿಕೊಂಡು ಕೋಪದಿಂದ ನೀಲನನ್ನು ಹೊಡೆದನು. ಈ ರೀತಿಯಾಗಿ ಸೋಲು ಗೆಲುವುಗಳಿಲ್ಲದೆ ಪರತ್ರಯ ದಹನಾರಂಭಕಾ ಲದಲ್ಲಿ ನಂದೀಶ್ವರನೊಡನೆ ವಿದ್ಯುನ್ಮಾಲಿಗಾದಂತೆ ದಶಕಂಠನಿಗೆ ಅಗ್ನಿ ಪುತ್ರನೊಡನೆ ಯುದ್ದ ವಾಗುತ್ತಿದ್ದಿತು. ಆಗ ನೀಲನು ರಾವಣನ ಮೇಲಿಡುವ ಗಿರಿತರು ಮೊದಲಾ ದವುಗಳಿಂದಲೂ ರಾವಣನು ನೀಲನ ಮೇಲೆ ಪ್ರಯೋಗಿಸುವ ಬಾಣಪರಂಪರೆಯಿಂದಲೂ ಭೂಮ್ಯಾಕಾಶ ಪ್ರದೇಶಗಳು ನಿರವಕಾಶವಾಗಿ ಹೋದುವು. ಹೀಗೆ ಉಭಯ ವೀರ ರಿಗೂ ಯುದ್ದ ವಾಗುತ್ತಿರುವಲ್ಲಿ ಹಾಸ್ಯ ಪ್ರಿಯನಾದ ನೀಲನು ತನ್ನ ಬಾಲವನ್ನು ಉದ್ದವಾಗಿ ಬೆಳೆಸಿಕೊಂಡು ರಾವಣನ ಮೇಲೆ ನೆಗೆದು ಬಾಲದಿಂದ ಅವನನ್ನು ಸುತ್ತಿ ಅಲ್ಲಾಡದ ಹಾಗೆ ಬಿಗಿದು ತಾನು ಮೇರು ಪರ್ವತದಂತೆ ಬೆಳೆದು ರಾವಣನನ್ನು ಮೇಲೆತ್ತಿ ಕೊಂಡು-ಅಳದಿರೆನ್ನಯ ಕಂದಾ ! ಎಂದು ತೂಗುತ್ತ ಜೋಗುಳವನ್ನು ಹಾಡುತ್ತಿದ್ದನು. ಆಗ ಅಂಬರದಲ್ಲಿ ಸುರನಿತಂಬಿನಿಯರು ಕೈ ಹೊಯ್ದು ಕೊಂಡು ಗಹ ಗಹಿಸಿ ನಕ್ಕರು. ಅನಂತರದಲ್ಲಿ ನೀನು ರಾವಣನನ್ನು ಒಂದೆರಡು ಗಳಿಗೆಗಳ ವರೆಗೂ ಅಲ್ಲಾಡಿಸುತ್ತಿದ್ದು ಆ ಮೇಲೆ ಗರನೆ ತಿರುಗಿಸಿ ಅವನ ರಥದಲ್ಲಿಳಿಸಿ ತಾನು ಆ ರಥದ ಧ್ವಜಸ್ತಂಭದ ಮೇಲೆ ಕುಳಿತು ಕೊಂಡು ರಾವಣನನ್ನು ಕುರಿತು-ಎಲಾ, ನಿರ್ಲಜ್ಞ ನಾದ ರಕ್ಕಸನೇ, ನಾವು ಯುದ್ಧದಲ್ಲಿ ಅತಿಬಲರೋ, ಹೀನಬಲರೋ ? ನೀನೇ ಹೇಳು ಮೃಗಗಳೆಂದು ನಮ್ಮನ್ನು ಹೀಯಾಳಿಸಿದಿಯಲ್ಲಾ? ಎಲಾ, ನಾವು ಮರಗಳ ಮೇಲೆ ನೆಗೆದಾಡುವಂಥ ಕೋತಿಗಳೇ ? ನಿನಗೆ ಪ್ರಳಯವನ್ನು ೦ಟು ಮಾಡುವಂಥ ಕಪಿಗಳಲ್ಲವೇ ? ನೀನು ರಾಕ್ಷಸರಾಜನೋ ? ನಾಚಿಕೊಳ್ಳಬೇಡ, ಧೈರ್ಯದಿಂದ ಹೇಳು. ವಿಮಾನಸ್ಥ ರಾದ ಅಮರರೂ ಕೂಡ ಇನ್ನೂ ನಮ್ಮ ಕೆಲಸಗಳ ಹವಣನ್ನು ಕಾಣರು ಎಂಬಲ್ಲಿ ಮಥನಾದ ನೀನೇನು ಬಲ್ಲಿ! ಕಳ್ಳನಾದ ನಿನಗೆ ಲೋಕಮಾತೃವಾದ ಜಾನಕಿಯನ್ನು ಅಪಹರಿಸಿಕೊಂಡು ಬರುವಾಗ ಎಂಥ ಸಂತೋಷವಿದಿ ತು ? ತೋರಿಸು, ನೋಡುವಣ. ಛೇ ! ನಾಯಿಯೇ ! ಪರಭಾಗ್ಯಾಪಹಾರಕನೇ ! ಎಂದು ಮತ್ತೆ ರಾವಣನ ನಡುನೆತ್ತಿ ಯನ್ನು ತಿವಿದನು. ಆಗ ರಾವಣನು ಮಹಾ ಕೋಪ ಕಂಪಿತಾಧರನಾಗಿ ತನ್ನ ಚ೦ದ್ರಹಾಸದಿಂದ ನೀಲನನ್ನು ಹೊಡೆಯಲು; ನೀನು ಆ ಪೆಟ್ಟನ್ನು ತಪ್ಪಿಸಿಕೊಂಡು ಮತ್ತೆ ವಜ್ರಮುಷ್ಟಿ