ರಾವಣನ ಮರಣವು 175 ಯಿಂದ ರಾವಣನನ್ನು ಹೊಯ್ದನು. ಆಗ ಲಂಕಾ ರಾಜನು ತನ್ನ ಕರಖಡ್ಡದಿಂದ ನೀಲನನ್ನು ತಿವಿದನು. ಹೀಗೆ ಯುದ್ಧವಾಗುತ್ತಿರಲು ; ಆ ಮೇಲೆ ರೋಷಕಪಾಯಿ ತಾಕ್ಷನಾದ ನಿಶಾಚರ ರಾಜನು ಶೀಘ್ರವಾಗಿ ತನ್ನ ರಥದಿಂದಿಳಿದು ಬಂದು ಶೂರನಾದ ನೀಲನನ್ನು ಒದೆದನು. ಆ ಪೆಟ್ಟಿಗೆ ರಾಮದೂತನ ಪ್ರಾಣಗಳು ಸ್ವಸ್ಥಾನವನ್ನು ಬಿಟ್ಟು ಚಲಿಸಲು; ಅವನು ನೊಂದು ಮೆಲ್ಲನೆ ನೆಲದಲ್ಲಿ ಮಲಗಿದನು, ಆ ವೇಳೆಯಲ್ಲಿ ಧೂರ್ತನಾದ ರಾವಣನು ರಥದ ಮೇಲೆ ಹತ್ತಿ ಕೊಂಡು-ರಾಮನ ಬಳಿಗೆ ಹೋಗು ವುದಕ್ಕೆ ಪ್ರಯತ್ನಿಸುತ್ತಿರಲು; ಕೂಡಲೆ ಮಹಾ ವೀರನಾದ ನೀಲನು ಎಚ್ಚತ್ತು ತನ್ನ ಬಾಲವನ್ನು ಬೆಳಿಸಿ ರಥದ ಕುದುರೆಗಳ ಕಾಲುಗಳನ್ನೆಲ್ಲಾ ಬಿಗಿದು ಸೇದಿಕಟ್ಟಲು; ಆ ಕುದುರೆಗಳು ಮುಗ್ಗುರಿಸಿ ತಡವರಿಸಿದುವು. ಅದನ್ನು ಕಂಡು ರಾವಣನು ಸಾರಥಿಯ ಮೇಲೆ ಕೋಪಿಸಿಕೊಳ್ಳಲು ; ಅವನು ಕುದುರೆಗಳ ಕಡಿವಾಣಗಳನ್ನು ಸೇದಿ ಹಿಡಿದು ಚಾಟೆಯಿಂದ ಹೊಡೆದು ಎಷ್ಟು ವಿಧವಾಗಿ ಅಬ್ಬರಿಸಿದಾಗ ಕುದುರೆಗಳು ಕಾಲುಗ ಳನ್ನು ಕಿತ್ತು ಮುಂದಕ್ಕೆ ಇಡಲಾರದಿರಲು ; ಕೂಡಲೆ ರಾವಣನು ಕೆಳಕ್ಕೆ ಬೊಗ್ಗಿ ನೋಡಿ ದುಷ್ಟ ಕಪಿಯು ಬಾಲದಿಂದ ಕಟ್ಟಿ ರುವುದನ್ನು ಕಂಡು--ಈ ಕೊಡಗು ಮಹಾ ದುಸ್ಸೇಷ್ಟೆಯುಳ್ಳುದೆಂದು ತನ್ನ ಕೈಯಲ್ಲಿದ್ದ ಕತ್ತಿಯಿಂದ ನೀಲನನ್ನು ಹೊಡೆ ದನು. ನೀನು ಆ ಪೆಟ್ಟನ್ನು ತಪ್ಪಿಸಿಕೊಂಡು ಆ ರಾವಣನ ಹೆಗಲಿನ ಮೇಲಕ್ಕೆ ನೆಗೆದು ಅವನ ಎಲ್ಲಾ ತಲೆಗಳ ಕಿರೀಟಗಳನ್ನು ಒಂದೊಂದನ್ನಾಗಿ ತೆಗೆದು ತೆಗೆದು ನೆಲಕ್ಕೆ ಬೀಸಾಡಿ ರಥದ ಮೂಕಿಯ ಮರದ ಮೇಲಕ್ಕೆ ಹಾರಿ ತುದಿಗೆ ಹೋಗಿ ನೊಗ ದಲ್ಲಿ ಕಟ್ಟಿದ್ದ ಕುದುರೆಗಳ ಜತ್ತಿಗೆಗಳನ್ನು ಬಿಚ್ಚಿ ಹಾಕಿ ಕಿರೆಂದು ಕೂಗಿ ಕುದುರೆಗ ಇನ್ನೋಡಿಸಿ ಕೆನ್ನೆಗೆ ಹೊಡೆದು ಕಾಲಿನಿಂದೊದೆದು ಸಾರಥಿಯನ್ನು ಭೂಮಿಗೆ ಕೆಡಹಿ ಅಲ್ಲಿಂದ ರಾವಣನ ಬೆನ್ನಿಗೆ ಬಂದು ಅಮೋಘಾಸ್ಯ ಸಮಹಪೂರಿತವಾದ ಬತ್ತಳಿಕೆ ಯನ್ನು ತೆಗೆದು ಬಿಸುಟು ಅವನ ಕೈಯಲ್ಲಿದ್ದ ಶಸ್ತ್ರವನ್ನು ಕಿತ್ತು ದೂರವಾಗಿ ಎಸೆದು ರಥ ಚಕ್ರಗಳನ್ನು ಕಳೆದು ದೂರವಾಗಿ ಹೋಗುವಂತೆ ಉರುಳಿಸಿ ಅಚ್ಚುಗಳನ್ನು ಮುರಿದು ರಾವಣನ ಮುಡುಹು ಮುಸುಡು ಎದೆ ಕೊರಳು ಕಂಕುಳು ಮೊದಲಾದ ಸ್ಥಳಗಳಲ್ಲಿ ಹಾರಿಯಾಡುತ್ತ ಅವನನ್ನು ಕುರಿತು-ಎಲಾ, ನೀನು ರಾಘವೇಂದ್ರನೊಡನೆ ಕಾದುವ ಪಟುಭಟನೇ ? ಛೇ ! Mಳರ ಕುಲಗುರುವೇ, ಹೋಗೆಂದು ತನ್ನ ದೀರ್ಘ ವಾದ ತೋಳನ್ನೆ ತಿ ವುಷ್ಟಿಯಿಂದ ರಾವಣನ ತಲೆಯ ಮೇಲೆ ಹೊಡೆದು ಮುಖದೆ ದುರಿಗೆ ಬಂದು ಬಾಯ್ತಿ ಸಿದಣಕಿಸಿದನು. ವಾಯುಮಾರ್ಗದಲ್ಲಿ ವಿಮಾನಾರೂಢರಾಗಿದ್ದು ಕೊಂಡು ನೋಡುತ್ತಿದ್ದ ದೇವ ವಾರಾಂಗನೆಯರು ಈ ನೀಲನ ಬಲು ಚೆಲ್ಲಾಟವನ್ನು ಕಂಡು ಘೋಳ್ಳೆಂದು ಬಲ್ಬ ಗೆಯ ಕಡಲಲ್ಲಿ ಬಿದ್ದು ಕಪಿವೀರನಾದ ನೀಲನ ಕೆಲಸವು ಲೇಸು ಲೇಸು ಎಂದು ಕೈದೋರಿ ಕೊಂಡಾಡಿದರು, ಮತ್ತೆ ನೀಲನು ಅಳಿಲುಗಳು ಕೋಟಿ ತೆನೆಗಳ ಮೇಲೆ ಓಡಿಯಾಡು ವಂತೆ ರಾವಣನ ತಲೆಗಳ ಮೇಲೆ ಹತ್ತಿ ಓಡಿಯಾಡುತ್ತ ಅವನ ಮೊಗ ಕಿವಿ ಮಗು ಗಳನ್ನು ಪರಚುತ್ತ ಕೈಗೆ ಸಿಕ್ಕದೆ ಛೇ ! ಹೆಂಗಾ ! ಬೀಳೆಂದು ರಾವಣನನ್ನು
ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೫
ಗೋಚರ