ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಕಥಾಸಂಗ್ರಹ-೪ ನೆಯ ಭಾಗ ಒದೆದನು. ಆಗ ಶೂರಪಕ್ಷಪಾತಿಯದ ರಾವಣನು ನೀಲನ ಪರಾಕ್ರಮಕ್ಕೆ ಮೆಚ್ಚಿ ಬಿಲೈಬ್ಬಿನಲ್ಲಿ ಅರಿಭೀಕರ ಹಾನಿದಾಯಕವಾದ ಆಗ್ನೆಯಾಜ್ಯವನ್ನು ಹೂಡಿ ಅವನ ಮೇಲೆ ಬಿಡಲು ; ಆಗ ಆ ನೀಲನು ಅಗ್ನಿ ಕುಮಾರನಾದುದರಿಂದ ಬದುಕಿದನಲ್ಲದೆ ಆ ಮಹಾಸ್ಯಘಾತವನ್ನು ತಡೆದು ಬದುಕುವವರು ಮೂರು ಲೋಕಗಳಲ್ಲಿ ಎಲ್ಲಿಯಾದರೂ ಇರುವುದುಂಟೇ ? ಆ ಮಹಾಸ್ತ್ರವು ಮಹಾವೀರರಿಗೆ ಎದೆನಡುಗನ್ನು ಹುಟ್ಟಿಸುತ್ತ ಕೇಸುರಿಯನ್ನು ಕಾರುತ್ತ ಮಹಾ ಶಬ್ದದಿಂದ ಹೊರಟುಬಂದು ಕಪಿವೀರನ ಎದೆಯಲ್ಲಿ ಹೊಕ್ಕು ಬೆನ್ನಿನಲ್ಲಿ ಮೂಡಲು ; ಆಗ ಅವನು ಬಲಹೀನತೆಯನ್ನು ಹೊಂದಿ ಮರ್ಥಿ ತನಾಗಿ ನೆಲದಲ್ಲಿ ಬಿದ್ದನು. ಆ ಸಮಯದಲ್ಲಿ ರಕ್ಕಸರರಸನು ತನ್ನ ರಥವನ್ನು ಮುಂದಕ್ಕೆ ನೂಕುತ್ತ ಎದು ರಿಗೆ ಬಂದ ಕಪಿವೀರರನು ಸಂಹರಿಸುತ್ತ ಬರುತ್ತಿರಲು; ಆಗ ಪೆಟ್ಟುಗಳನ್ನು ತಿಂದು ಖೇದ ಗೊಂಡು ಕಪಿಬಲವೆಲ್ಲಾ ಜಯಾಪೇಕ್ಷೆಯನ್ನು ತೊರೆದು ರಾಮನನ್ನೇ ಸ್ಮರಿಸುತ್ತಿದ್ದರು. ಮೂರ್ಛಹೋಗಿದ್ದ ಸುಗ್ರೀವನು ಇನ್ನಾದರೂ ಎದ್ದು ಯುದ್ಧಕ್ಕೆ ಬರಲಿಲ್ಲ, ಕಸಿವಾ ಹಿನೀಪತಿಯಾದ ನೀಲನ ಪ್ರಾಣಗಳ ಹವಣು ಚೆನ್ನಾಗಿ ಗೊತ್ತಾಗಲಿಲ್ಲ. 'ಯುವರಾ ಜನಾದ ಅಂಗದನು ನೊಂದು ಕಳವಳಿಸಿದನು. ನಳನೆಂತಿರುವನೋ ತಿಳಿಯದು, ಉಳಿದ ವೀರರಲ್ಲಿ ಒಬ್ಬರಾದರೂ ಕಾಣುವುದಿಲ್ಲ, ಇನ್ನೀ ದುಷ್ಟನಾದ ರಾವಣನ ಶರಾಗ್ನಿ ಜ್ವಾಲೆಯೆದುರಿಗೆ ನಿಲ್ಲುವವರಾರು ? ನಮ್ಮೆಲ್ಲರಿಗೂ ಅಕಾಲದಲ್ಲಿ ವಿಲಯವು ಸಂಪಾ ಪ್ರವಾಯಿತಲ್ಲಾ ಎಂದು ಕೂಗುತ್ತಾ ಕಪಿಸೇನೆಗಳೆಲ್ಲಾ ಬಾಯ್ಸಡಿದು ಕೊಳ್ಳುತ್ತಿರಲು ; ಆಗ ಕೋಪತಾಮಾರನಾದ ಆಂಜನೇಯನು ಪ್ರಳಯಕಾಲದ ರುದ್ರನಂತೆ ಅತ್ಯುಗ್ರ ತೆಯನ್ನು ಧರಿಸಿ ಈ ಕಾರ್ಯದಿಂದ ನನಗೆ ಯಾವ ಕೊರತೆ ಬಂದರೂ ಬರಲಿ. ರಾಮನು ನನ್ನನ್ನು ತೊರೆದರೂ ತೊರೆಯಲಿ; ನನ್ನ ಪ್ರತಿಜ್ಞೆಯನ್ನು ಭಂಗಪಡಿಸಿದನು, ಅದು ಕಾರಣ ಇವನು ಉನ್ಮತ್ತನೆಂದು ಹೇಳಿಕೊಂಡರೂ ಹೇಳಿಕೊಳ್ಳಲಿ ! ಮುಂಗಲ ಸವನ್ನು ಆ ಮೇಲೆ ಯೋಚಿಸುವೆನು. ಈಗ ಈ ಖಳನನ್ನು ಹಿಡಿದು ಎಲುವುಗಳನ್ನು ಮುರಿದು ಇವನನ್ನು ಹಿಂಡಿ ರಕ್ತವನ್ನು ತೆಗೆದು ಹಿತವಾಗುವಂತೆ ಶಾಕಿನಿಯರ ಬಾಯ್ಕ ಳಲ್ಲಿ ಸುರಿಯುವೆನು. ಇವನು ಮಹಾ ರಣಮರ್ಖನು. ಬಲು ಕೊಬ್ಬುಳ್ಳ ವನು ಎಂದು ಯೋಚಿಸಿ ಶೀಘ್ರವಾಗಿ ರಾವಣನೆದುರಿಗೆ ಬಂದು ನಿಂತು--ಏನೆಲಾ, ನಿರ್ಲಜ್ಞನಾದ ದಶಕಂಠಾ ! ಯಾರೊಡನೆ ನಿನಗೆ ರಣದ ಸನ್ಮಾನವು ? ಈ ವರೆಗೂ ನಿನ್ನನ್ನು ಬೀಳ್ಳಡಿಯದೆ ಉಳಿಸಿದ ಮಾತ್ರಕ್ಕೆ ಗೆದ್ದೆನೆಂದು ಮೈಕೊಬ್ಬಿದಿಯೋ ? ಎಂದು ಕೇಳಲು ; ಆಗ ಅರಿಭಯಂಕರನಾದ ಮೊಬ್ಬಿಗರೊಡೆಯನುಏನೋ, ಮುಮ್ಮು ಸುಡಿನ ಕೆಮ್ಮೋರೆಯ ಬಡಗೋಡಗನೇ, ಮೊದಲು ನಮ್ಮ ನಗರದಲ್ಲಿ ಹಳೆಯವಾದ ಚಿಂದಿಯರಿವೆಗಳನ್ನು ನಿನ್ನ ಬಾಲಕ್ಕೆ ಸುತ್ತಿಸಿ ಎಣ್ಣೆಯಲ್ಲಿದ್ದಿ ಬೆಂಕಿಯನ್ನು ಹೊತ್ತಿಸಿ ಬೀದಿಬೀದಿಗಳಲ್ಲಿ ತಿರುಗಿಸಿ ಬಾಯ್ಕೆಡಿಸಿದವನನ್ನು ಮರೆತಿಯೋ? ಇಷ್ಟು ದುರಹಂಕಾರ ವಚನಗಳನ್ನು ನಮ್ಮೊಡನೆ ಆಡಿ ಕಟ್ಟಿ ಯಲ್ಲಾ ಎನ್ನಲು; ಆಗ ವೀರನಾದ ಮಾರುತಿಯು ಹೌದು ! ನೀನು ರಕ್ಕಸರೊಡೆಯನು'! ಕೂಳಿನಾಸೆಗೆ ತಲೆಮರೆಸಿಕೊಂಡು ಕಾಲಹರಣ