ರಾವಣನ ಮರಣವು 187 ನೀನು ಪ್ರಸಿದ್ಧನಾಗಿ ರಣರಂಗದಲ್ಲಿ ಯುದ್ಧ ಮಾಡಿ ದೇಹವನ್ನು ಬಿಟ್ಟು, ಹೊರಟು ಪರಲೋಕವಾಸಿಯಾದಿ ? ಈ ಮಹಾ ದುಃಖಪರಂಪರೆಯನ್ನು ಅನುಭವಿಸುವುದಕ್ಕಾಗಿ ಪಾಪಿಷ್ಟನಾದ ನಾನು ಮಾತ್ರ ಉಳಿದೆನು ಎಂದು ಅನೇಕ ವಿಧವಾಗಿ ಹಂಬಲಿಸಿ ದುಃಖಿಸಿ ಮೈಮರೆತು ಮೈತಿಳಿದೆದ್ದು ಕುಳಿತು--ದೈವಯತ್ನವನ್ನು ಮಾರುವವ ರಾರು ? ಎಂದು ನಿರ್ಧರಿಸಿ ಮಂಡೋದರಿಯೇ ಮೊದಲಾದ ಅಂತಃಪರ ಸೀಜನರನ್ನು ಬಹು ವಿಧ ವಿವೇಕವಚನಗಳನ್ನು ಹೇಳಿ ಸಮಾಧಾನಪಡಿಸಿ ವೀರಕುಲತಿಲಕನಾದ ರಾವಣನ ಶವವನ್ನು ಪಾಲಕಿಯಲ್ಲಿಟ್ಟು ಕೊಂಡು ವಿವಿಧ ವಾದ್ಯಗಳೊಡನೆ ಕೂಡಿ ಮಸಣಕ್ಕೆ ತೆಗೆದು ಕೊಂಡು ಹೋಗಿ ಅಲ್ಲಿ ಮೃತದೇಹೋಚಿತಸಂಸ್ಕಾರಕೃತ್ಯಗಳನ್ನು ವಿಧಿವತ್ತಾಗಿ ಮಾಡಿ ತಿಲತರ್ಪಣವನ್ನು ಕೊಟ್ಟು ಆನಂತರದಲ್ಲಿ ಯುದ್ಧರಂಗದಲ್ಲಿ ಸತ್ತಿದ್ದ ಭ್ರಾತೃ ಪತ್ರಮಿತ್ರಬಾಂಧವಾದಿಗಳಿಗೆಲ್ಲಾ ವಿಧಿವತ್ತರ್ಮಪೂರ್ವಕವಾಗಿ ತರ್ಪಣದಕವನ್ನು ಕೊಟ್ಟು ಮಂಡೋದರ್ಯಾದಿ ಮಾನಿನೀ ಜನರನ್ನು ಅಂತಃಪು ರಕ್ಕೆ ಕಳುಹಿಸಿ ತಾನು ಸ್ನಾನವನ್ನು ಮಾಡಿ ಶುಚಿರ್ಭೂತನಾಗಿ ಪಾಳಯದಲ್ಲಿ ಸುಗ್ರೀ ವಾದಿ ಕಪಿಸೇನಾಸಮೇತನಾಗಿ ಕುಳಿತಿರುವ ಶ್ರೀರಾಮನ ಸನ್ನಿಧಿಗೆ ಒಂದು ಸಾಷ್ಟಾಂಗ ಪ್ರಣತನಾಗಿ ಎದ್ದು ನಿಂತುಕೊಂಡಿದ್ದನು. ಆಗ ಶ್ರೀರಾಮನು ಸುಗ್ರೀವನನ್ನು ನೋಡಿ-ಎಲೈ ಕಪಿಚಕ್ರವರ್ತಿಯೇ, ನೀನು ಈ ಲಕ್ಷ್ಮಣನನ್ನು ಕರೆದುಕೊಂಡು ಕಪಿಬಲಸಮೇತನಾಗಿ ವಿಭೀಷಣನೊ ಡನೆ ಲಂಕಾನಗರಕ್ಕೆ ಹೋಗಿ ದಿವ್ಯವಾದ ರಾವಣನ ಸಿಂಹಾಸನದ ಮೇಲೆ ಕುಳ್ಳಿರಿಸಿ ಲ೦ಕಾ ಗಾಜ್ಯಾಭಿಷೇಕವನ್ನು ಮಾಡಿ ಈ ರಾಕ್ಷ ಸರಾಜನಾದ ವಿಭೀಷಣನು ಅಪ್ಪಣೆಯನ್ನು ಕೊಟ್ಟರೆ ಮಂಗಳಸ್ನಾ ನಾ ದಿಗ ಳನ್ನು ಮಾಡಿಸಿ ಸೀತೆಯನ್ನು ಕರೆದು ಕೊಂಡು ಬಾ ಎಂದು ಹೇಳಿದನು. ಆಗ ಸುಗ್ರೀ ವನು ರಾಮಾನುಜನೊಡನೆ ಹೊರಟು ಸಮಸ್ಯವಾನರ ಸೇನೆಯನ್ನು ಕರೆದುಕೊಂಡು ಲಂಕಾನಗರಕ್ಕೆ ಹೋಗಿ ವಿಭೀಷಣನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ ವಿಧಿವತ್ತಾದ ಕರ್ಮಗಳಿಂದ ರಾಕ್ಷಸರಾಜ್ಯಾಭಿಷೇಕವನ್ನು ಮಾಡಿಸಿದನು. ಅನಂತರದಲ್ಲಿ ಕೃತಜ್ಞ ನಾದ ವಿಭೀಷಣನು ಲಕ್ಷ್ಮಣನನ್ನೂ ಸುಗ್ರೀವಾಂಗದಾದಿ ಕವಿನಾಯಕರನ್ನೂ ಅಸದೃ ಶವಾದ ಸತ್ಕಾರಗಳಿಂದಲೂ ಸನ್ಮಾನಗಳಿಂದಲೂ ದಣಿಸಿದನು. ಕೂಡಲೆ ಲೋಕ ಮಾತೃವಾದ ಸೀತೆಯನ್ನು ಕೂರಿಸಿಕೊಂಡು ತನ್ನ ಪಟ್ಟ ಮಹಿಷಿಯಿಂದ ಆಕೆಗೆ ಮಂಗಳ ಸ್ನಾನಾದಿಗಳನ್ನು ಮಾಡಿಸಿ ದಿವ್ಯ ವಸ್ತ್ರಾಭರಣಗಳಿಂದಲಂಕರಿಸಿ ನವರತ್ನ ಖಚಿತವಾದ ಪಾಲಕಿಯಲ್ಲಿ ಕುಳ್ಳಿರಿಸಿಕೊಂಡು ಆ ಪಾಲಕಿಯ ಮುಂದೆಸೆಯಲ್ಲಿ ತಾನು ಬೆತ್ತದ ಕೋಲನ್ನು ಹಿಡಿದು ಕೊಂಡು ಹೊರಟು ಜನಸಮುದಾಯದಲ್ಲಿ ದಾರಿಯನ್ನು ಬಿಡಿ ಸುತ್ತ ಕರೆದು ಕೊಂಡು ಬಂದು ರಾಮನ ಸನ್ನಿಧಿಯಲ್ಲಿ ನಿಲ್ಲಿಸಿ ತಾನೂ ನಮಸ್ಕಾರ ವನ್ನು ಮಾಡಿ ಕೈಕಟ್ಟಿ ಕೊಂಡು ನಿಂತನು. ಆಗ ಬಲು ನಾಚಿಕೆಯಿಂದ ತಲೆಯನ್ನು ಬೊಗ್ಗಿಸಿಕೊಂಡು ಭೂಮಿಯನ್ನು ಕಣ್ಣೀರುಗಳಿಂದ ನೆನಸುತ್ತಿರುವ ಸೀತೆಯನ್ನು ನೋಡಿ ಶ್ರೀರಾಮನು-ಎಲೈ ಜಾನ ಕಿಯೇ, ರಾಕ್ಷಸರು ಹೆಂಡತಿಯನ್ನು ಅಪಹರಿಸಿಕೊಂಡು ಹೋದರೆ ಕೂಡಲೆ ದುಷ್ಟ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೭
ಗೋಚರ