ಪುಟ:ಕಥಾ ಸಂಗ್ರಹ - ಭಾಗ ೨.djvu/೧೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


186 ಕಥಾಸಂಗ್ರಹ-೪ ನೆಯ ಭಾಗ ನನ್ನನ್ನು ಅವಾಚ್ಯವಚನಗಳಿಂದ ಬೈಯ್ದು ದಲ್ಲದೆ ಚಾವಡಿಯಿಂದ ನೂಕಿಸಿಬಿಟ್ಟನು. ಇಂಥ ಪತಿತನು ನನಗೆ ಅಣ್ಣನೂ ಅಲ್ಲ, ನಾನು ಆತನಿಗೆ ತಮ್ಮನೂ ಅಲ್ಲ, ಗರ್ವಾಂಧ ನಾದವನು ಗುರುವಾದರೂ ಪರಿತ್ಯಾಗಕ್ಕೆ ಯೋಗ್ಯವೆಂದು ಶಾಸ್ತ್ರವಚನವಿರುವುದು. ತನ್ನಲ್ಲಿ ಹುಟ್ಟಿ ತನ್ನನ್ನು ಬಾಧೆಗೊಳಿಸುತ್ತಿರುವ ವ್ಯಾಧಿಯು ಅರಣ್ಯ ಸಂಭೂತಗಳಾದ ಮೂಲಿಕೆಗಳಿಂದ ನಾಶವನ್ನು ಹೊಂದುವಂತೆ ಇವನು ನನ್ನೊಡನೆ ಹುಟ್ಟಿದವನಾದಾಗ್ಯೂ ತನ್ನ ದುಷ್ಕೃತ್ಯಗಳಿಂದ ತಾನೇ ನಾಶವಾದನು. ಆದುದರಿಂದ ನನ್ನ ಮತ್ತು ಸರ್ವ ಜಗತ್ತಿನ ಮಾನಸಿಕವಾದ ರೋಗವು ಪರಿಹಾರವಾದಂತಾಯಿತು. ನನಗೂ ಮರ್ಖ ನಾದ ಇವನಿಗೂ ಸಂಬಂಧವೇನೂ ಇರುವುದಿಲ್ಲ, ನಾನು ಅವನಿಗೆ ಪ್ರೇತಕಾರ್ಯ ವನ್ನು ಮಾಡುವುದಿಲ್ಲ ಎಂದು ರಾಮನು ಮೆಚ್ಚುವಂತೆ ನೀತಿಯನ್ನು ಹೇಳಿದನು. ಆಗ ಸರ್ವಪ್ರಾಣಿದಯಾಕರನಾದ ಶ್ರೀ ರಾಮನು ಆ ಮಾತುಗಳನ್ನು ಕೇಳಿ ವಿಭೀಷಣನನ್ನು ಕುರಿತು-ಎಲೈ ನೀತಿಪರಾಯಣನಾದ ವಿಭೀಷಣನೇ, ಜಗತ್ತಿನಲ್ಲಿ ನೀನು ತಿಳಿಯದ ಧರ್ಮರಹಸ್ಯಗಳು ಒಂದೂ ಇಲ್ಲ. ಲೋಕದಲ್ಲಿ ಹಗೆತನಕ್ಕೆ ಮರ ಣವೇ ಅಂತ್ಯವೆಂದು ಧರ್ಮಜ್ಞರು ಬೋಧಿಸುವರು. ಮಹಾತ್ಮನಾದ ಈ ರಾವಣನು ಸಕಲ ವೇದಶಾಸ್ತ್ರಗಳನ್ನೂ ಓದಿದವನು, ಮತ್ತು ಸಕಲ ರಾಜನೀತಿಗಳನ್ನೂ ತಿಳಿದ ವನು. ಲೋಕದಲ್ಲಿ ಶೂರರಾದವರಿಗೆ ಸುರಾಸುರನರೋರಗಪುರುಷರನ್ನೆಲ್ಲಾ ಯುದ್ಧ ರಂಗದಲ್ಲಿ ಜಯಿಸಿ ಅಪ್ರತಿಹತವಾದ ಕೀರ್ತಿಯನ್ನು ಸಂಪಾದಿಸುವುದು ನ್ಯಾಯವಲ್ಲದೆ ಅನ್ಯಾಯವಲ್ಲ, ಜಗದುತ್ಪತ್ತಿ ಕಾಲದಿಂದಲೂ ಸುರಾಸುರರಿಗೆ ಗಜಸಿಂಹಗಳಂತೆಯ ಗರುಡೋರಗಗಳಂತೆಯ ಗೋವ್ಯಾಘ್ರಗಳಂತೆಯ ಹಗೆತನವು ಪ್ರಸಿದ್ಧ ವಾಗಿರು ವದು. ಆದುದರಿಂದ ಈ ರಾಕ್ಷಸರಾಜನಾದ ದಶಕಂಠನು ದೇವತೆಗಳನ್ನು ಜಯಿಸಿ ದುದು ತಪ್ಪೆಂದು ಹೇಳುವುದಕ್ಕಾಗುವುದಿಲ್ಲ, ಮುನಿಜನಗಳು ಮಾಡುವ ಯಜ್ಞಗಳ ಆಹುತಿಯಿಂದ ವೈರಿ ಗಳಾದ ದೇವತೆಗಳಿಗೆ ಆಹಾರವುಂಟಾಗುತ್ತಿದ್ದುದರಿಂದ ಯಜ್ಞಾ ದಿಗಳನ್ನು ಭಂಗಪಡಿಸಿದನು. ನಾವು ಇವನ ತಂಗಿಯಾದ ಶೂರ್ಪನಖಿಯ ಕಿವಿ ಮಗು ಗಳನ್ನು ಕೊಯ್ಯು ಮೊದಲಿವನನ್ನು ಅಪಮಾನಪಡಿಸಿದುದರಿಂದ ಅದಕ್ಕೆ ಬದಲಾಗಿ ವೀರನಾದ ಇವನು ನಮಗೆ ಅಪಮಾನಮಾಡಿದನು. ಯೋಚಿಸಿ ನೋಡಿದರೆ ಇವ ನಲ್ಲೇನೂ ತಪ್ಪು ಕಂಡುಬರುವುದಿಲ್ಲ, ಬುದ್ಧಿಶಾಲಿಯಾದ ನಿನಗೆ ನಾನು ವಿಶೇಷವಾಗಿ ಹೇಳತಕ್ಕುದೇನು ಎಂದು ಹೇಳಿದನು. ಅನಂತರದಲ್ಲಿ ವಿಭೀಷಣನು ರಾಮಚಂದ್ರನ ಅಪ್ಪಣೆಯನ್ನು ತಲೆಯಲ್ಲಿ ಆಂತು ಅಣ್ಣನಾದ ರಾವಣನ ಶವದ ಬಳಿಗೆ ಬಂದು ನೋಡಿ ಕೊನೆಮೊದಲಿಲ್ಲದ ದುಃಖದಿಂದ ಅದರ ಮೇಲೆ ಬಿದ್ದು ಹೊರಳಿ-ಎಲೈ ಮಹಾತ್ಮನಾದ ಅಣ್ಣನೇ, ಹೀಗಾಗುವುದೆಂಬು ದನ್ನು ನಾನು ಮೊದಲೇ ತಿಳಿದು ಹೇಳಿದಂಥ ಹಿತೋಕ್ತಿಗಳು ಸಾಯುವವನಿಗೆ ವೈದ್ಯರು ಕೊಟ್ಟ ಮದ್ದುಗಳು ಎಷವಾಗಿ ತೋರುವಂತೆ ನಿನಗೆ ರುಚಿಸಲಿಲ್ಲವ, ಪಾಪಿಯಾದ ನಾನು ನಿನ್ನ ವಿಯೋಗವನ್ನು ಹೇಗೆ ಸಹಿಸಲಿ ! ಈ ದುರವಸ್ಥೆಯಲ್ಲಿರುವ ನಿನ್ನನ್ನು ನೋಡುತ್ತಿರುವ ನನ್ನ ಕಣ್ಣುಗಳಿಗೆ ಮಣ್ಣು ಬೀಳಲೊಲ್ಲದಲ್ಲಾ! ಪುಣ್ಯಶೀಲನಾದ