ಪುಟ:ಕಥಾ ಸಂಗ್ರಹ - ಭಾಗ ೨.djvu/೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


10 ' ಕಥಾಸಂಗ್ರಹ-೪ ನೆಯ ಭಾಗ ಒಂದು ಶಕ್ತಿಯನ್ನಿತ್ತು ತಾನು ಅಂತರಿಕ್ಷ ಮಾರ್ಗದಲ್ಲಿ ಹೊರಟುಹೋದನು, ಅನಂ ತರದಲ್ಲಿ ದಶಗ್ರೀವನು ಪತ್ನಿಯಾದ ಮಂಡೋದರಿಯೊಡನೆ ಲಂಕಾನಗರವನ್ನು ಪ್ರವೇ ಶಿಸಿ ತನ್ನ ಹಿರಿಯ ತಮ್ಮ ನಾದ ಕುಂಭಕರ್ಣನಿಗೆ ಪೌರೋಚನನ ಮಗಳ ಮಗಳಾದ ವಜಜ್ವಾಲೆ ಎಂಬವಳನ್ನೂ ಕಿರಿಯ ತಮ್ಮ ನಾದ ವಿಭೀಷಣನಿಗೆ ಶೈಲೂಷನೆಂಬ ಗಂಧ ರ್ವನ ಮಗಳಾದ ಸರಮೆ ಎಂಬವಳನ್ನೂ ತಂದು ಅತಿಸಂಭ್ರಮದಿಂದ ಮದುವೆ ಮಾಡಿ ಸಿದನು. ಅನಂತರದಲ್ಲಿ ಕೆಲವು ದಿನಗಳು ಕಳೆದ ಮೇಲೆ ಮಂಡೋದರಿಯು ಗರ್ಭವನ್ನು ಧರಿಸಿ ಒಂದು ಗಂಡು ಮಗುವನ್ನು ಹೆತ್ತಳು, ಆ ಕೂಸಿನ ರೋದನಧ್ರನಿಯು ಘನಗ ರ್ಜಿತದಂತೆ ಗಂಭೀರವಾಗಿಯ ಭಯಂಕರವಾಗಿಯೂ ಇದ್ದುದರಿಂದ ದಶವದನನು ಆ ಶಿಶುವಿಗೆ ಮೇಘನಾದನೆಂಬ ಅನ್ವರ್ಥನಾಮವನ್ನಿಟ್ಟನು, ಕುಂಭಕರ್ಣನಿಗೆ ಬ್ರಹ್ಮ ದತ್ತ ವರಪ್ರಭಾವದಿಂದ ನಿದ್ರಾಭಾರವು ಅಧಿಕವಾಗಲು ; ಒಂದು ದಿನ ಅವನು ದಶಕ೦ ಧರನ ಬಳಿಗೆ ಬಂದು-ನಿದ್ರೆಯು ನನ್ನನ್ನು ಸಂಪೂರ್ಣವಾಗಿ ಬಾಧಿಸುತ್ತದೆ. ಒಂದು ಶಯ್ಯಾಗೃಹವನ್ನು ಮಾಡಿಸಿಕೊಡು ಎಂದು ಕೇಳಲು ; ಅವನು ದೇವತೆಗಳ ಬಡಗಿ ಯಾದ ವಿಶ್ವಕರ್ಮನನ್ನು ಕರಿಸಿ ಸುವರ್ಣಸ್ತಂಭಗಳಿಂದ ಕೂಡಿಯ ನವರತ್ನ ಖಚಿತ ವಾಗಿಯ ಶಯನೋಚಿತ ಸಾಮಗ್ರೀ ಸಮೇತವಾಗಿಯೂ ಇರುವ ಒಂದು ಮನೆ ಯನ್ನು ಮಾಡಿಸಿಕೊಟ್ಟನು, ಕುಂಭಕರ್ಣನು ಆ ಮನೆಯನ್ನು ನೋಡಿ ಸಂತುಷ್ಟ ನಾಗಿ ಅಲ್ಲಿ ಬಹಳ ಕಾಲದ ವರೆಗೂ ಮಲಗಿಕೊಂಡು ನಿರ್ಬಾಧಕವಾದ ನಿದ್ರಾಸುಖವೆ ನ್ನನುಭವಿಸುತ್ತಿದ್ದನು. ಇತ್ತಲಾ ದಶಕಂಧರನು ಶೌರ್ಯಾಧಿಕ್ಯದಿಂದುಂಟಾದ ಗರ್ವವುಳ್ಳವನಾಗಿ ಮುನಿಜನಗಳನ್ನು ಬಾಧಿಸಿ ಕೊಲ್ಲುತ್ತ, ದಾನವ ದೈತ್ಯ ಸುರ ನರ ನಾಗ ಕಿನ್ನರಾದಿ ಗಳ ಸಂದಣಿಗಳನ್ನು ಸವರುತ್ಯ, ಕೆರೆ ತೊರೆ ಕುಂಟೆ ಕಾಲಿವೆ ಮೊದಲಾದ ಜಲಾಶಯ ಗಳನ್ನು ಧ್ವಂಸಮಾಡುತ್ತ ಮದಿಸಿ ಸೊಕ್ಕಿದಾನೆಯ ಚಂದದಿಂದ ಹೊರಟು ಪರ್ವತ ಶಿಖರಗಳನ್ನು ಕಿತ್ತುರುಳಿಸುತ್ತ ಪುರಗೋಪುರಗಳನ್ನು ತುಳಿದು ಹಾಳುಮಾಡುತ್ತ ಯಾರೂ ಎದುರಾಳಿಲ್ಲದೆ ಮದೋನ್ಮತ್ತತೆಯಿಂದ ನಿರರ್ಗಳವಾಗಿ ತಿರುಗುತ್ತಿದ್ದನು. ಹೀಗಿರುವಲ್ಲಿ ಉತ್ತರದಿಗೀಶನಾದ ಕುಬೇರನು ಒಂದು ದಿವಸ ತನ್ನ ತಮ್ಮ ನಾದ ದಶಮುಖನು ದುರ್ಮಾರ್ಗಿಯಾಗಿರುವುದನ್ನು ಕೇಳಿ-ಅಯ್ಯೋ, ಶ್ರೇಷ್ಠ ವಾದ ನಮ್ಮ ಕುಲದಲ್ಲಿ ಇಂಥ ದುಷ್ಯನು ಹುಟ್ಟಿದನಲ್ಲಾ! ಎಂದು ಬಹಳವಾಗಿ ವ್ಯಸನ ಪಡುತ್ತ ಒಬ್ಬ ಚಾರನನ್ನು ಕರೆದು-ಎಲೈ, ನೀನು ದಶಾನನನ ಬಳಿಗೆ ಹೋಗಿ ಇಂಥ ದುಷ್ಟತ್ವವನ್ನು ಬಿಟ್ಟು ಸುಖಿಯಾಗಿರು ಎಂದು ನಾನು ಹೇಳಿದೆನೆಂಬುದಾಗಿ ತಿಳಿಸು ಎಂದು ಹೇಳಿಕಳುಹಿಸಿದನು. ಅವನು ಬಂದು ದಶವದನನಿಗೆ ನಮಸ್ಕರಿಸಿ: ಎಲೈ ರಾಕ್ಷಸೇಂದ್ರನೇ, ನಿಮ್ಮಣ್ಣನಾದ ಕುಬೇರನು ಕೈಲಾಸಪರ್ವತದಲ್ಲಿ ಅಲಕಾವತಿ ಯೆಂಬೊಂದು ಪಟ್ಟಣವನ್ನು ಮಾಡಿಕೊಂಡು ಹರನೊಡನೆ ಸ್ನೇಹವನ್ನು ಸಂಪಾದಿಸಿ ಕೊಂಡು ಸುಖಿಯಾಗಿದ್ದಾನೆ. ಆತನು ನಿನಗೋಸ್ಕರ ನನ್ನೊಡನೆ ಹೇಳಿಕಳುಹಿಸಿರುವ