ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರಾವಣನ ಮರಣವು 191 M ನಿನ್ನ ಸದ್ಗುಣಗಳಿಗೂ ನಿನ್ನ ನಿಜಪತ್ನಿ ಯಾದ ಈ ಸೀತೆಯು ನಡಿಸಿದ ಕೆಲಸಕ್ಕೂ ನಾವೆ ಲ್ಲರೂ ಪೂರ್ಣ ಸಂತುಷ್ಟರಾದೆವು. ನೀನಿನ್ನೀ ಸಂದೇಹವನ್ನು ಬಿಟ್ಟು ಪರಿಶುದ್ಧಳಾಗಿ ರುವ ಸೀತೆಯನ್ನು ಸಂತೋಷದಿಂದ ಪರಿಗ್ರಹಿಸು, ಲೋಕಾನುಗ್ರಹಾರ್ಥವಾಗಿ ನೀನೂ ನಿನ್ನ ಪತ್ನಿ ಯ ಮಾಡಿದ ಎರಡು ಕೆಲಸಗಳಿಗೆ ಎರಡು ವರಗಳನ್ನು ಕೊಡು ವೆವು, ನಿಸ್ಸಂದೇಹದಿಂದ ಬೇಡಿಕೋ ಎಂದು ಹೇಳಲು, - ಆಗ ನಿಶ್ಚ೦ಕಮನಸ್ಕನಾದ ಶ್ರೀ ರಾಮನು ಆ ದೇವತೆಗಳಿಗೆಲ್ಲಾ ನಮಸ್ಕರಿಸಿಸರ್ವಜ್ಞರಾದ ನೀವೆಲ್ಲರೂ ಈ ಸೀತೆಯು ಪರಿಶುದ್ಧ ಳು ಎಂದು ಹೇಳಿದ ಮೇಲೆ ನಾನು ಪರಿಗ್ರಹಿಸದೆ ಇರುವುದು ಹೇಗೆ ? ಮಹಾತ್ಮರಾದ' ನಿಮ್ಮೆಲ್ಲರ ಆಜ್ಞಾನುಸಾರವಾಗಿ ಈ ಸೀತೆಯನ್ನು ಪುನಃ ಪರಿಗ್ರಹಿಸುವೆನು, ನಾನು ನಿಮ್ಮನ್ನು ಬೇಡಿಕೊಳ್ಳುವ ಎರಡು ವರಗಳು ಯಾವುವೆಂದರೆ--ನನ್ನ ನಿಮಿತ್ತವಾಗಿ ಈ ಯುದ್ಧರಂಗದಲ್ಲಿ ಪ್ರಾಣಗಳನ್ನು ತೊರೆದ ಕಪಿಗಳೆಲ್ಲಾ ಮಲಗಿದ್ದವರೇಳುವ ಹಾಗೆ ಜೀವಿಸಿ ಏಳಬೇಕು, ಮತ್ತು ಈ ಕಪಿನಾಯಕರು ಭೂಲೋಕದಲ್ಲಿ ಯಾವ ಸ್ಥಳದಲ್ಲಿ ವಾಸಮಾಡಿದಾಗ ಅಲ್ಲೆಲ್ಲಾ ವಿವಿಧ ತರುಲತೆಗಳು ನಿರಂತರವೂ ಸಂಪೂರ್ಣ ಫಲಭರಿತಗಳಾಗಿದ್ದು ಕೊಂಡು ಈ ಕಪಿಪರಿವಾರಕ್ಕೆಲ್ಯಾ ಪರಮಾನಂದವನ್ನುಂಟುಮಾಡುತ್ತಿರಬೇಕೆಂಬುದೇ ಎಂದು ಹೇಳಿದನು, ಅವರು ಅದೇ ರೀತಿಯಾಗಿ ವರವನ್ನು ಕೊಡಲು ; ತತ್‌ಕ್ಷಣದ ಲ್ಲಿಯೇ ಸತ್ತು ಬಿದ್ದಿದ್ದ ಸಮಸ್ತ ಕಪಿಗಳೂ ಜೀವದೊಡನೆ ಕೂಡಿ ಎದ್ದು ಬಂದು ಶ್ರೀರಾಮನಿಗೆ ನಮಸ್ಕರಿಸಿದುವು. ಆಗ ಈಶ್ವರನು ರಾಮನನ್ನು ನೋಡಿ ಎಲೈ ರಾಮನೇ, ಇಲ್ಲಿ ನೋಡು, ನಿನ್ನ ತಂದೆಯಾದ ದಶರಥನು ಪ್ರಿಯ ಪುತ್ರನಾದ ನಿನ್ನನ್ನು ನೋಡುವ ಉದ್ದೇಶದಿಂದ ವಿಮಾನಾರೂಢನಾಗಿ ನಿನ್ನ ಬಳಿಗೆ ಬಂದಿದ್ದಾನೆ ಎಂದು ತೋರಿಸಲು ; ಆಗ ದಶರಥನು ಶೀಘ್ರವಾಗಿ ವಿಮಾನವನ್ನು ಕೆಳಗಿಳಿಸಿ ನಮ ಸ್ಕರಿಸುತ್ತಿರುವ ಸೀತಾ ರಾಮ ಲಕ್ಷ್ಮಣರನ್ನು ತೆಗೆದಾಲಿಂಗಿಸಿಕೊಂಡು ಮುದ್ದಾಡಿ ಆ ಮೇಲೆ ರಾಮನನ್ನು ಕುರಿತು-ಎಲೈ ಪ್ರಿಯನಂದನನೇ, ಸತ್ಯವಂತನಾದ ನೀನು ಹದಿನಾಲ್ಕು ಸಂವತ್ಸರಗಳಿಂದಲೂ ವನವಾಸವನ್ನು ಮಾಡಿ ನನ್ನನ್ನು ಸತ್ಯ ಪ್ರತಿಜ್ಞನ ಸ್ನಾಗಿ ಮಾಡಿದೆ. ಇನ್ನು ಮೇಲೆ ನೀನು ಶೀಘ್ರವಾಗಿ ಅಯೋಧ್ಯಾನಗರಕ್ಕೆ ಹೋಗಿ ಪಟ್ಟಾಭಿಷಿಕ್ತನಾಗಿ ಅಮಿತವಿಕ್ರಮರಾದ ತಮ್ಮಂದಿರೊಡನೆ ಕೂಡಿ ರಾಜ್ಯ ಪರಿಪಾಲನೆ ಯನ್ನು ಮಾಡಿಕೊಂಡು ಸುಖವಾಗಿರು ಎಂದು ಆಶೀರ್ವಾದವನ್ನು ಮಾಡಿ ಅವರನ್ನು ಕಳುಹಿಸಿ ತಾನು ಇಂದ್ರಾದಿ ದೇವತೆಗಳೊಡನೆ ಕೂಡಿ ಅಲ್ಲಿಂದ ಹೊರಟುಹೋದನು. ಆಗ ಮಾತಲಿಯ ನಿಜಸ್ವಾಮಿಯಾದ ದೇವೇಂದ್ರನೊಡನೆ ರಾಮನ ವಿಕ್ರಮಾತಿಶಯ ವನ್ನು ಹೊಗಳುತ್ತ ಹೋದನು. ಆಗ ಅಮಂದಾನಂದಸಂದೋಹತುಂದಿಲನಾದ ರಘುನಂದನನು ಸೀತಾಲಕ್ಷ್ಮಣರೊಡನೆ ಕೂಡಿ ಸುಗ್ರೀವ ವಿಭೀಷಣಾದಿ ಕಪಿರಾಕ್ಷಸ ಸೇನಾಸಮೇತನಾಗಿ ತನ್ನ ಪಾಳಯಕ್ಕೆ ಬಂದು ಸಂತೋಷದಿಂದಿರುತ್ತಿದ್ದನು.