ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

198 ಕಥಾಸಂಗ್ರಹ-೪ ನೆಯ ಭಾಗ ಯಿಂದ ಹೊತ್ತು ನಿರ್ವಹಿಸುವುದಕ್ಕೆ ಯೋಗ್ಯವಾದ ಮಹಾಭಾರವಸ್ತುವನ್ನು ಎಳೆಗ ಶವು ಹೇಗೆ ಹೊರಲಾರದೋ ಹಾಗೆ ಮೂರು ಲೋಕಗಳ ಭಾರವನ್ನಾದರೂ ವಹಿಸಿ ಕೊಂಡು ಪರಿಪಾಲಿಸುವುದಕ್ಕೆ ಯೋಗ್ಯನಾದ ನಿನ್ನಿಂದ ಧರಿಸಲ್ಪಡತಕ್ಕ ಈ ಕೋಸಲ ರಾಜ್ಯಭಾರವನ್ನು ಅಲ್ಪನಾದ ನಾನು ಧರಿಸಬಲ್ಲೆನೇ ? ಲೋಕದಲ್ಲಿ ಸೂರ್ಯನಂತೆ ಮಿಂಚು ಹುಳುವಿಗೂ ಮಹಾಗಜದಂತೆ ಅದರ ಮರಿಗೂ ಪರಾಕ್ರಮಶಾಲಿಯಾದ ಅರಸನಂತೆ ಬಾಲಕನಾದ ಅವನ ಮಗನಿಗೂ ಹೇಗೆ ಸಾಮರ್ಥ್ಯವಿರುವದಿಲ್ಲವೋ ಹಾಗೆ ನಾನು ಕೋಸಲರಾಜ್ಯ ಪರಿಪಾಲನೆ ಮಾಡುವುದರಲ್ಲಿ ಮಹಾತ್ಮನಾದ ನಿನಗೆ ಸಮಾ ನವಾದ ಶಕ್ತಿವಂತನಲ್ಲದವನಾಗಿದ್ದೇನೆ. ಸರ್ವಪ್ರಾಣಿಹಿತಚಿಂತಕನೂ ಧರ್ಮಸಂಸ್ಕಾ ಪಕನೂ ಆದ ನೀನು ಈ ರಾಜ್ಯಭಾರವನ್ನು ವಹಿಸಿಕೊಂಡು ಸೂರ್ಯ ಚಂದ್ರ ನಕ್ಷ ತ್ರಗಳಿರುವ ವರೆಗೂ ಸತ್ಯದಿಂದ ಪರಿಪಾಲಿಸುತ್ತ ದಶರಥಾದಿ ಪೂರ್ವ ರಾಜರುಗ ಆಗಿಂತಲೂ ಅಪಾರವಾಗಿ ಕೀರ್ತಿಸಂಪಾದನೆಯನ್ನು ಮಾಡಿಕೊಂಡು ಇರುವವನಾಗು ಎಂದು ಭಯಭಕ್ತಿ ಪುರಸ್ಸರವಾಗಿ ಬಿನ್ನವಿಸಲು ; ಪರಮಾನಂದತುಂದಿಲಮನಸ್ಸನಾದ ಶ್ರೀರಾಮನು ಸತ್ಯಸಂಧನೂ ಮಹಾತ್ಮನೂ ಆದ ಭರತನ ವಿಜ್ಞಾಪನೆಗಳಿಗೆ ಹಾಗೇ ಆಗಲಿ ಎಂದು ಅನುಮತಿಯನ್ನಿತ್ತು ಸರ್ವಪುವಾರ ಮಧ್ಯದಲ್ಲಿ ರಾರಾಜಿಸುತ್ತಿರುವ ದಿವ್ಯ ಮಣಿಮಯಾಸನದ ಮೇಲೆ ಕೂತುಕೊಂಡನು. ಅನಂತರದಲ್ಲಿ ಅರಿಭಯಂಕರನಾದ ಶತ್ರುಷ್ಟನ ಅಪ್ಪಣೆಯ ಮೇರೆಗೆ ಬುದ್ಧಿ ವಂತರಾದ ಒಟಾಬಂಧವಿಸ್ತಂಸಕರು ಬಂದು ಲೋಕಾಭಿರಾಮನಾದ ಶ್ರೀರಾಮನ ಸನ್ನಿ ಧಿಯಲ್ಲಿ ಸಾಷ್ಟಾಂಗ ಪ್ರಣತರಾಗಿ ಎದ್ದು ಕೈಮುಗಿದು ನಿಂತರು. ಆಗ ರಾಮಾ ಜ್ಞಾನುಸಾರವಾಗಿ ಮೊದಲು ಭರತನ ಜಡೆಯನ್ನೂ ಆ ಮೇಲೆ ಲಕ್ಷ್ಮಣನ ಜಡೆಯ ನ್ಯೂ ಅನಂತರದಲ್ಲಿ ಶತ್ರುಜ್ಞನ ಜಡೆಯನ್ನೂ ಬಿಡಿಸಿ ಅವರಿಗೆ ಮಂಗಳಸ್ನಾನವನ್ನು ಮಾಡಿಸಿ ಆ ಬಳಿ ಶ್ರೀರಾಮಚಂದ್ರನು ತನ್ನ ಜಡೆಯನ್ನೂ ಬಿಡಿಸುವುದಕ್ಕೆ ಅಪ್ಪಣೆ ಕೊಡಲು ; ಆ ಜಡೆಯನ್ನು ಬಿಡಿಸುವವರು ನವರತ್ನ ಖಚಿತಗಳಾದ ಸಿಕ್ಕಟ್ಟಿಗೆಗಳಿಂ ದಲೂ ಬಾಚಣಿಗೆಗಳಿಂದಲೂ ಉಗುರುಗಳಿಂದ ಸ್ವಲ್ಪವಾದರೂ ನೋವಾಗದಂತೆ ಬಿಡಿಸಿ ಪರಿಮಳಯುಕ್ತವಾದ ತೈಲವನ್ನು ಲೇಪಿಸಿ ಚೆನ್ನಾಗಿ ಜಡಿದೊತ್ತಿ ಮಂಗ ಇಸ್ಕಾನವನ್ನು ಮಾಡಿಸಿದರು. ಆ ಮೇಲೆ ಶ್ರೀರಾಮನು ರಾಜಯೋಗ್ಯವಾದ ದಿವ್ಯಾಂ ಬರಾಭರಣಭೂಷಿತನಾಗಿ ಸರ್ವಲೋಕರಮ್ಯವಾದ ತೇಜಸ್ಸಂಪನ್ನ ತೆಯನ್ನು ಹೊಂದಿ ಭೂದೇವೇಂದ್ರನಂತೆ ರಾರಾಜಿಸಿದನು. ಆನಂತರದಲ್ಲಿ ಸುಗ್ರೀವಾಂಗದಾದಿ ಕಪಿಕ ಟಕವೂ ವಿಭೀಷಣಾದಿ ರಾಕ್ಷಸರೂ ಸಂತೋಷದಿಂದ ಮಂಗಳಸ್ನಾನವನ್ನು ಮಾಡಿ ದಿವ್ಯಾಂಬರಾಭರಣಭೂಷಿತರಾಗಿ ರಂಜಿಸಿದರು.

  • ಅಷ್ಟರಲ್ಲಿಯೇ ಪಶ್ಚಿಮಾಶಾನಿತಂಬಿನಿಯು ಸರ್ವಗುರುಜನ ಮಾತೃಜನ ಭಾತೃ ಜನ ಪರಿವಾರಾದಿ ಜನರೊಡನೆ ದಿವ್ಯ ಪೀಠೋಪವಿಷ್ಟನಾಗಿರುವ ಶ್ರೀರಾಮಚಂದ್ರನ ಅಭ್ಯುದಯ ಸೂಚಕವಾದ ಮಂಗಳಾರತಿಯನ್ನು ಎತ್ತಿ ಹರಸುವುದಕ್ಕೋಸ್ಕರ ಕೈಗ ೪೦ದ ಧರಿಸಿಕೊಂಡಿರುವ ನವರತ್ನ ಖಚಿತವಾದ ಹರಿವಾಣವೋ ಎಂಬಂತೆ ದರ್ಶನೀಯ