ಪುಟ:ಕಥಾ ಸಂಗ್ರಹ - ಭಾಗ ೨.djvu/೨೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮತ್ಯಾವತಾರದ ಕಥೆ | 213 ಆ ರಾಯನು ಮಹಾವಿಷ್ಣುವಿನ ಆಜ್ಞೆಯನ್ನು ಶಿರಸಾವಹಿಸಿ ತನ್ನ ಪಟ್ಟಣಕ್ಕೆ ಬಂದು ರಾಜ್ಯದ ಸರ್ವಪ್ರಜೆಗಳಿಗೂ-ನೀವೆಲ್ಲ ರೂ ಚಿತ್ತೈಕಾಗ್ರತೆಯಿಂದ ಎಷ್ಟು ಎನ ಧ್ಯಾನ ವನ್ನು ಮಾಡಿಕೊಂಡು ಮೋಕ್ಷ ಸುಖವನ್ನು ಹೊಂದಿ ಸುಖಪಡಿರಿ ಎಂದು ಡಂಗುರ ವನ್ನು ಹೊಯ್ಕೆ ಪ್ರಸಿದ್ದಿ ಪಡಿಸಿ ತಾನು ಮಹಾವಿಷ್ಣು ವಿನ ಅಪ್ಪಣೆಯ ಪ್ರಕಾರ ಕುಟುಂಬದೊಡನೆ ಬಂದು ಹಡಗನ್ನೇರಿದ ಉತ್ತರಕ್ಷಣದಲ್ಲಿಯೇ ಭೂಮಿಯು ಸಮು ದ್ರದಲ್ಲಿ ಮುಳುಗಿಹೋಯಿತು. ಆಗಲಾ ಸತ್ಯವ್ರತರಾಜನು ಸಮುದ್ರದಲ್ಲಿ ಹಡಗಿನ ಮೇಲೆ ಸಂಚರಿಸತ್ತ ಆಗಾಗ್ಗೆ ಮತ್ತ್ವಮಹಾಮೂರ್ತಿಯ ಸಂದರ್ಶನವನ್ನು ಮಾಡುತ್ತ ಸಂತೋಷದಿಂದಿರುತ್ತಿದ್ದನು. ಆ ಮೇಲೆ ಚತುರ್ಮುಖಬ್ರಹ್ಮನು ತನಗೆ ಸಂಪ್ರಾಪ್ತವಾದ ರಾತ್ರಿಯಲ್ಲಿ ಮಲಗಿ ಕೊಂಡನು. ಸೋಮಕ ಹಯಗ್ರೀವರೆಂಬ ಹೆಸರುಳ್ಳ ಇಬ್ಬರು ದೈತ್ಯರು ಆ ವೇಳೆಯ ನೃರಿತು ಪರಸ್ಪರವಾಗಿ ಆಲೋಚಿಸಿಕೊಂಡು ದೇನೆಂದರೆ--ಈ ಚತುರ್ಮುಖಬ್ರಹ್ಮನು ನಿದ್ರೆಯಿಂದ ಎಚ್ಚೆತ ಮೇಲೆ ಈಗ ಜಲಪ್ರಳಯದಿಂದ ನಾಶವಾಗಿರುವ ಭೂಲೋಕ ಭುವರ್ಲೋಕ ಸುವರ್ಲೋಕಗಳೆಂಬ ಮೂರು ಲೋಕಗಳನ್ನು ತಿರಿಗಿ ಸೃಷ್ಟಿಸುವನು. ಆಗ ಭೂಲೋಕದಲ್ಲಿ ನಡೆಯುವ ದೇವಯಾಗ ಪಿತೃಯಾಗಗಳಿಂದ ದೇವತೆಗಳೆಲ್ಲಾ ತೃಪ್ತರಾಗಿ ಹೆಚ್ಚಿ ನಮಗೆ ಹಗೆಗಳಾಗಿ ನಮ್ಮನ್ನು ತಿರಸ್ಕರಿಸುವರು. ಇದಕ್ಕೆಲ್ಲಾ ಕಾರ ಣಭೂತವಾದುದು ವೇದವಾಕ್ಯವು, ಈಗ ಬ್ರಹ್ಮನು ಮಲಗಿದ್ದಾನೆ. ಈ ವೇಳೆಯಲ್ಲಿ ನಾವು ಹೋಗಿ ಆ ವೇದಗಳನ್ನೇ ಅಪಹರಿಸಿಕೊಂಡು ಬಂದು ಬಿಟ್ಟರೆ ನಮಗೆ ವಿರೋಧಿ ಗಳಾದ ದೇವತೆಗಳ ಹುಟ್ಟೇ ಎನಾಶವಾಗಿ ಹೋಗುವುದು ಎಂದು ಯೋಚಿಸಿ ಸತ್ಯ ಲೋಕಕ್ಕೆ ಹೋಗಿ ವೇದದ ಪುಸ್ತಕಗಳನ್ನು ಅಪಹರಿಸಿಕೊಂಡು ಬಂದು ಸಮುದ್ರ ವನ್ನು ಪ್ರವೇಶಿಸಲು ; ಆಗ ಮತ್ಯಮೂರ್ತಿಯಾದ ಮಹಾವಿಷ್ಣುವು ಅವರನ್ನು ಕಂಡು ಅವರಿಬ್ಬರನ್ನೂ ಸಂಹರಿಸಿ ವೇದಪುಸ್ತಕಗಳನ್ನೆಲ್ಲಾ ತೆಗೆದು ಕೊಂಡು ತನ್ನಲ್ಲಿಟ್ಟು ಕೊ೦ಡಿದ್ದನು. ಅನಂತರದಲ್ಲಿ ನೇಮಕವಾದ ರಾತ್ರಿಯು ಕಳೆದು ಬೆಳಗಾಗಲು ; ಆಗ ಸರೋಜ ಸಂಭವನು ಎದ್ದು ಸ್ನಾನಸಂಧ್ಯಾವಂದನಾದಿ ನಿತ್ಯ ಕರ್ಮಗಳನ್ನು ನೆರವೇರಿಸಿಕೊಂಡು ಕಮಲಾಸನದಲ್ಲಿ ಕುಳಿತು ತಿರಿಗಿ ಸೃಷ್ಟಿ ಯನ್ನು ಮಾಡುವುದಕ್ಕೆ ಆರಂಭಿಸಿ ವೇದಪು ಸ್ತಕಗಳನ್ನು ನೋಡುವಲ್ಲಿ ಅವುಗಳಿಲ್ಲದೆ ಇರಲು ; ಆಗ ಬ್ರಹ್ಮನು ಮಹಾ ಚಿಂತಾ ಕ್ರಾಂತನಾಗಿ ಭಯಭಕ್ತಿಯಿಂದ ಕೂಡಿ ಮಹಾವಿಷ್ಣುವನ್ನು ಧ್ಯಾನಮಾಡಿ.ಎಲೈ ಮಹಾವಿಷ್ಣುವೇ, ನಿನ್ನ ಅಪ್ಪಣೆಯ ಪ್ರಕಾರ ಸಂಪ್ರಾಪ್ತವಾದ ರಾತ್ರಿಯಲ್ಲಿ ನಾನು ಮಲಗಿದ್ದೆನು. ಆಗ ನನ್ನ ಸೃಷ್ಟಿ ಕರ್ಮಕ್ಕೆ ಆಧಾರಭೂತಗಳಾಗಿದ್ದ ವೇದಪುಸ್ತಕಗಳು ಏನಾದುವೋ ತಿಳಿಯೆನು. ಈಗ ಅವುಗಳೊಂದೂ ಕಾಣಿಸುವುದಿಲ್ಲ, ಇನ್ನು ಮೇಲೆ ನಾನು ನಿನ್ನ ಆಜ್ಞೆಯ ಮೇರೆಗೆ ಹೇಗೆ ಸೃಷ್ಟಿ ಮಾಡಲಿ ? ನಾನು ಮಲಗಿ ಮೈಮರೆತಿ ರುವಾಗ ಜಗದೀಶ್ವರನಾದ ನೀನು ಜಾಗರೂಕನಾಗಿದ್ದು ನನ್ನನ್ನು ಕಾಪಾಡದಿದ್ದರೆ ಮತ್ತೊಬ್ಬರು ಕಾಪಾಡುವರುಂಟೋ ? ಮಹಾಸ್ವಾಮಿ, ನಾನು ಈಗ ಕಣ್ಣಿಲ್ಲದ