ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


220 ಕಥಾಸಂಗ್ರಹ-೫ ನೆಯ ಭಾಗ ಸ್ವಲ್ಪ ಸಾವಕಾಶವಾಗಿರಬಹುದು, ನೀವು ಇಷ್ಟು ಮಾತ್ರಕ್ಕೆ ಚಪಲಚಿತ್ತರಾಗಿ ಬೇರೆ ಆಲೋಚನೆಯನ್ನು ಮಾಡಬಾರದು. ಯಾವ ಮನುಷ್ಯನು ಚಂಚಲಚಿತ್ತನಾಗದೆ ಸ್ಥಿರ ಚಿತ್ತನಾಗಿರುವನೋ ಅವನಿಗೆ ಎಣಿಸಿದ ಕೆಲಸವೆಲ್ಲಾ ನಿರ್ವಿಘ್ನವಾಗಿ ಕೈಗೂಡುವುವು ಎಂದು ಹೇಳುತ್ತ ಇದ್ದರು. ಆ ವೇಳೆಗೆ ಸರಿಯಾಗಿ ಬೃಹಸ್ಪತ್ವಾಚಾರ್ಯರು ಬಂದು ಅರಮನೆಯ ಬಾಗಿಲ ಲ್ಲಿ ನಿಂತು ನಾನು ಬಂದಿರುವ ಸುದ್ದಿಯನ್ನು ಶೀಘ್ರವಾಗಿ ದೈತ್ಯರಾಜನಿಗೆ ತಿಳಿಸು ಎಂದು ಬಾಗಿಲನ್ನು ಕಾಯುವವನಿಗೆ ಹೇಳಲು ; ಅವನು ಆ ಕೂಡಲೆ ಹೋಗಿ ವಿಜ್ಞಾಪಿಸಿದ ಕ್ಷಣದಲ್ಲಿಯೇ ಅವರೆಲ್ಲರೂ ಆಚಾರ್ಯರು ಹೇಳಿದ ಮಾತು ಯುಕ್ತ ವಾದುದೆಂದು ನಿಶ್ಚಯಿಸಿಕೊಂಡು ಶುಕ್ರಾಚಾರ್ಯರನ್ನು ಸಂಗಡ ಕರೆದು ಕೊಂಡು ಎದುರಿಗೆ ಬಂದು ಸುರಾಚಾರ್ಯರಿಗೆ ಅಭಿನಂದಿಸಿ ಕೈಹಿಡಿದು ಏಕಾಂತಸ್ಥಳಕ್ಕೆ ಕರೆ ದು ಕೊಂಡು ಹೋಗಿ ದಿವ್ಯ ಪೀಠದಲ್ಲಿ ಕುಳ್ಳಿರಿಸಿ ಸನ್ಮಾನವನ್ನು ಮಾಡಿ ಅವರ ಅಪ್ಪಣೆ ಯನ್ನು ಪಡೆದು ತಾವೆಲ್ಲ ರೂ ತಮ್ಮ ತಮ್ಮ ಉಚಿತಸಾನಗಳಲ್ಲಿ ಕುಳಿತುಕೊಂಡರು. ಅನಂತರದಲ್ಲಿ ಸುರಾಚಾರ್ಯನು ನಗೆಮೊಗದಿಂದ ಕೂಡಿ ದೈತ್ಯರನ್ನು ಕುರಿತು-ನೀವೆ ಲ್ಲರೂ ಬಹಳ ಧರ್ಮಿಷ್ಟರಾದುದರಿಂದ ನಿಮ್ಮ ಕಾರ್ಯವು ಕೈಗೂಡುವ ಹಾಗೆ ದೇವರು ಅನುಗ್ರಹಿಸಿದ್ದಾನೆ. ದೇವತೆಗಳಿಗೆ ಸಹಾಯವಾಗಿ ಮಹಾವಿಷ್ಣುವು ತನ್ನ ವಾಸ ಸ್ಥಾನವಾದ ಕ್ಷೀರಸಮುದ್ರವನ್ನು ಮಂದರಪರ್ವತದಿಂದ ಕಡೆದರೆ ಅದರಲ್ಲಿ ನಿಮಗೆ ಬೇಕಾದ ಅನರ್ಘವಾದ ಪದಾರ್ಥಗಳೂ ಅಮೃತವೂ ಹುಟ್ಟುವುವು. ಆ ಅಮೃತವನ್ನು ನೀವು ಪಾನಮಾಡಿದರೆ ಅಮರ್ತ್ಯರಾಗಿ ತಿರಿಗಿ ಯುದ್ಧ ರಂಗದಲ್ಲಿ ದೈತ್ಯರನ್ನು ಜಯಿಸಿ ನಿಮ್ಮ ಸ್ವರ್ಗಪದವಿಯನ್ನು ಹೊಂದುವಿರಿ ಎಂದು ಅಪ್ಪಣೆಯನ್ನು ಕೊಡಲು ; ಅಲ್ಲಿಂದ ಬಂದು ದೇವತೆಗಳನ್ನು ಕುರಿತು ನಾನು-ಎಲೈ ದೇವತೆಗಳಿರಾ, ನೀವು ಅಲ್ಪ ಬಲರು. ಮೇರು ಪರ್ವತಕ್ಕೆ ಸಮಾನವಾದ ಮಂದರಪರ್ವತವನ್ನು ಕಿತ್ತು ಹೊತ್ತುಕೊಂಡು ಬರು ವುದಕ್ಕೆ ನಿಮಗೆ ಶಕ್ತಿ ಸಾಲದು. ಇದಕ್ಕೊಸ್ಕರ ಒಂದು ಒಳ್ಳೆಯ ಯೋಚನೆಯು ನನ್ನ ಮನಸ್ಸಿಗೆ ತೋರಿದೆ. ಅದೇನಂದರೆ, ನೀವೂ ದೈತ್ಯರೂ ಒಬ್ಬ ತಂದೆಯ ಮಕ್ಕಳು. ಅವರಿಗೆ ನೀವು ದ್ವೇಪಿಗಳಾಗಿರುವುದುಂದ ಪದೇ ಪದೇ ನಿಮಗೆ ಇಂಥ ತೊಂದರೆಗಳು ಸಂಭವಿಸುತ್ತ ಇರುತ್ತವೆ, ಲೋಕದಲ್ಲಿ ಸ್ವ ಜನವಿರೋಧವು ಬಲು ಕೆಟ್ಟು ದು, ಅದರಿಂದ ದುಃಖಪ್ರಾಪ್ತಿಯೇ ಹೊರತು ಎಳ್ಳಷ್ಟಾದರೂ ಸುಖವಿಲ್ಲ ವು. ಆದುದರಿಂದ ನೀವೂ ಅವರೂ ಐಕಮತ್ಯದಿಂದ ಕೂಡಿದರೆ ಎಂಥ ಅಸಾಧ್ಯ ಕಾರವಾದರೂ ನಿರ್ವಿಘ್ನವಾಗಿ ನಡೆಯುವುದು, ಆ ಮೇಲೆ ಇತ್ತಂಡದವರೂ ಅಮೃತಪಾನವನ್ನು ಮಾಡಿ ಸುಖದಿಂದ ಸಹೃದಯರಾಗಿರಬಹುದು ಎಂದು ಹೇಳಿದೆನು. ಅದಕ್ಕೆ ಅವರೆಲ್ಲರೂ ಸಂತೋಷ ದಿಂದ ನನ ನು ಕುರಿತು- ತಾವೇ ರೈತರಿಗೂ ನಮಗೂ ಸಂಧಿಮಾಡಿಸಬೇಕೇ ಹೊರತು ಇನ್ನಾರಿಂದಲೂ ಈ ಕಾರ್ಯವು ನೆರವೇರಲಾರದು ಎಂದು ಬಹಳವಾಗಿ ಬೇಡಿಕೊಂ ಡುದರಿಂದ ನಾನು ನನ್ನ ಮನಸ್ಸಿನಲ್ಲಿ ಯೋಚಿಸಿದ ಯೋಜನೆಯು ಕೈಗೂಡುವು ದೆಂದು ಸಂತೋಷಪಟ್ಟು ಕೊಂಡು ಅವರ ಮಾತಿನ ಮೇರೆಗೆ ನಿಮ್ಮ ಬಳಿಗೆ ಬರುವವನ. ಹಾಗೆ ಇಲ್ಲಿಗೆ ಬಂದೆನು ಎಂದು ಹೇಳಿದನು.