228 ಕಥಾಸಂಗ್ರಹ-೫ ನೆಯ ಭಾಗ ಬೆಚ್ಚಿಸಿದನು. ಗುಡುಗಾಗಿ ಹೆದರಿಸಿದನು, ಮಳೆಯಾಗಿ ವರಾಹನ ಮೇಲೆ ಸುರಿದನು. ಗಿರಿಗಳಾಗಿ ವರಾಹನ ಮೇಲೆ ಬಿದ್ದುರುಳಿದನು. ಬಲ್ಕತ್ತುಂಡುಗಳಾಗಿ ಸುರಿದು ಕಣ್ಣೆ ಡಿಸಿದನು, ಕತ್ತಲೆಯಾಗಿ ಕವಿದು ಮುಂಗೆಡಿಸಿದನು. ಹುಲಿ ಕರಡಿ ಸಂಗ ಮೊದ ಲಾದ ದುಷ್ಟ ಮೃಗಗಳಾಗಿ ಬಂದು ವರಾಹನನ್ನು ಪರಚಿದನು, ಕಚ್ಚಿದನು, ಕವರಿದನು. ವಿವಿಧವಾದ ವಿಷ ಸರ್ಪಗಳಾಗಿ ಮೊರೆಯುತ್ತ ಬಂದು ವರಾಹನನ್ನು ಮುತ್ತಿ ಸುತ್ತಿ ಕೊಂಡು ಕಚ್ಚಿ ಖಂಡಗಳನ್ನು ಕಿತ್ತು ಗಾಯಗಳಲ್ಲಿ ಮಹಾ ವಿಷವನ್ನು ಕಾರಿದನು. ಮತ್ತು ಕಾಡಿ ಚ್ಚಾಗಿ ಕವಿದು ದಹಿಸಿದನು. ಭೂತ ಪ್ರೇತ ಪಿಶಾಚಗಳ ತಂಡಗಳಾಗಿ ಬಂದು ವರಾಹನನ್ನು ಮುತ್ತಿಕೊಂಡು--ಕೊಬ್ಬಿದ ಹಂದಿ ಬಲೆಗೆ ಸಿಕ್ಕಿತು, ಕವಿ! ಕವಿ! ತಿವಿ! ತಿವಿ ! ಹೊಡಿ ! ಹೊಡಿ ! ಬಲ್ಬಸುರಿಂದ ಕರುಳುಗಳನ್ನು ಕೀಳು ! ಕೀಳು ! ರಕ್ತವನ್ನು ಹೀರು ! ಎಂದು ಆರ್ಭಟಿಸುತ್ತ ಇನ್ನೂ ವಿವಿಧವಾಗಿ ವರಾಹನಿಗೆ ಹಿಂಸೆ ಯನ್ನುಂಟುಮಾಡುತ್ತ ತನ್ನ ಮಾಯಾಸಾಮರ್ಥ್ಯವನ್ನು ತೋರಿಸುತ್ತ ಮತ್ತೆ ತನ್ನ ಪೂರ್ವದ ದೈತ್ಯರೂಪವನ್ನೇ ಧರಿಸಿ-ಎಲಾ ಹಂದಿಯೇ, ಕಾದುಬಾರೋ ; ಮುಷ್ಟಿ ಯುದ್ಧಕ್ಕೆ ನಿಲ್ಲು ಎಂದಬ್ಬರಿಸಿ ತಿವಿಯಲು ; ಆಗ ವರಾಹನು ರೋಷಾವೇಶಕಪಾ ಯಿತಾಕ್ಷಿಗಳಿಂದ ಕೂಡಿ ತನ್ನ ವಜ್ರಮುಷ್ಟಿಯಿಂದ ಹಿರಣ್ಯಾಕ್ಷನ ಹಣೆಯನ್ನು ತಿವಿ ದನು. ಆ ಹೊಡೆತದಿಂದ ದೈತ್ಯನು ತಲೆಯೊಡೆದು ಕಣ್ಣಿವಿ ಬಾಯ ಗುಗಳಲ್ಲಿ ಕೆರ್ಸುರಿದು ಹಲ್ಲುಗಳುದುರಿ ಭೂಮಿಯಲ್ಲಿ ಬಿದ್ದು ಒದೆದಾಡಿ ಬಾಧೆಯಿಂದ .ನರಳುತ್ತ ಮೈಮರೆತು ಕಡೆಗೆ ಸತ್ತುಬಿದ್ದನು ಅನಂತರದಲ್ಲಿ ವರಾಹರೂಪಧಾರಿ ಯಾದ ಮಹಾವಿಷ್ಣುವು ಭೂಮಿಯನ್ನು ತೆಗೆದು ಕೊಂಡು ಹೋಗಿ ಮೊದಲಿನಂತೆ ಸ್ಥಾಪಿಸಿ ಹವ್ಯ ಕಮ್ಮಗಳು ಮೊದಲಿನಂತೆ ನಿರ್ವಿಘ್ನವಾಗಿ ನಡೆಯವಂತೆ ಮಾಡಿ ದೇವತೆ ಗಳನ್ನೂ ಮುನಿಜನರನ್ನೂ ಸಜ್ಜನರನ್ನೂ ಸಲಹಿ ವೈಕು೦ಠಲೋಕಕ್ಕೆ ಹೋದನು. 4, THE ROURTH OR MAN-LION INCARNATION. ೪, ನರಸಿಂಹಾವತಾರದ ಕಥೆ. ಅನಂತರದಲ್ಲಿ ಹಿರಣ್ಯಕಶಿಪು ಹಿರಣ್ಯಾಕ್ಷರ ತಾಯಿಯಾದ ದಿತಿಯು ತನ್ನ ಕಿರಿಯ ಮಗನಾದ ಹಿರಣ್ಯಾಕ್ಷನು ವರಾಹರೂಪಧಾರಿಯಾದ ಮಹಾವಿಷ್ಣು ವಿನಿಂದ ಸಂಹೃತನಾದ ಸುದ್ದಿಯನ್ನು ಕೇಳಿ ಸಿಡಿಲು ಬಡಿದು ಸಮಲವಾಗಿ ಮುರಿದಿಳೆ ಗುರುಳಿದ ದೊಡ್ಡ ಮರದಂತೆ ಭೂಮಿಯಲ್ಲಿ ಬಿದ್ದು ಮರ್ಛಿತಳಾಗಿ ಒಂದೆರಡು ಗಳಿ ಗೆಗಳಾದ ಮೇಲೆ ಚೇತರಿಸಿಕೊಂಡು ಮಹಾದುಃಖದಿಂದ ಹೊಟ್ಟೆಯನ್ನೂ ಬಾಯಿ ಯನ್ನೂ ಬಡಿದುಕೊಳ್ಳುತ್ತ ಅಡಿಗಡಿಗೆ ಮಗನ ಶಕ್ತಿ ಪರಾಕ್ರಮಗಳನ್ನು ನೆನೆನೆನದು ಹಂಬಲಿಸಿ ಮರುಗುತ್ತ ತಡೆಯಿಲ್ಲದೆ ಕಣ್ಣೀರುಗಳನ್ನು ಸುರಿಸುತ್ತ ತಲೆಯನ್ನು ಕೆದ ರಿಕೊಂಡು ಬಹು ಸಂತಾಪಯುಕ್ತಳಾಗಿ ಹಿರಿ ಮಗನಾದ ಹಿರಣ್ಯಕಶಿಪುವಿನ ಬಳಿಗೆ. ತಂದು-ಅಪ್ಪಾ ಮಗನೇ, ಪಾಪಿಷ್ಠಳಾದ ನನ್ನೊಡಲು ಬೆಂದು ಬೆಂಡಾದುದು.
ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೮
ಗೋಚರ