ಕಥಾಸಂಗ್ರಹ-೪ ನೆಯ ಭಾಗ. ಕಿಂಕರಸೇವಿತ ಪಾದಪಂಕಜನಾದ ಶಂಕರನು ತುಷ್ಟನಾಗಿ ಗಿರಿಜಾತೆಯೊಡನೆ ತಂದು, ದಶಕಂಠನ ಅಪರಾಧಗಳನ್ನು ಮನ್ನಿಸಿ-ಎಲೆ ಅಸದೃಶವೀರನೇ, ನಿನ್ನ ಭುಜ ಎಕ್ರಮಕ್ಕೆ ನಾನು ಮೆಚ್ಚಿದೆನು, ನೀನು ಧ್ವನಿಯಿಂದ ಲೋಕತ್ರಯಗಳನ್ನೂ ಬೆಚ್ಚಿಸಿ ದವನಾದುದರಿಂದ ಇನ್ನು ಮೇಲೆ ನಿನಗೆ ರಾವಣನೆಂದು ಹೆಸರುಂಟಾಗಲಿ, ಸಂತೋ ಷದಿಂದ ಹೋಗು ಎಂದು ಹೇಳಿದನು, ಆ ಮೇಲೆ ರಾವಣನು ಭಯಭರಿತಭಕ್ತಿಯಿಂದ ಕೂಡಿ, ಕೈಮುಗಿದು ನಿಂತುಕೊಂಡು-ಎಲೈ ದೇವದೇವನೇ, ನೀನು ನನ್ನಲ್ಲಿ ಕೃಪೆ ಯುಳ್ಳವನಾದರೆ ಅಪೂರ್ವವಾದೊಂದು ಖಡ್ಡ ವನ್ನು ಕರುಣಿಸಬೇಕೆಂದು ಬೇಡಿಕೊಳ್ಳ ಲು; ಚಂದ್ರಶೇಖರನು ಚಂದ್ರಹಾಸವೆಂಬೊಂದು ಕತ್ತಿಯನ್ನಿತ್ತು ಅಂತರ್ಧಾನನಾದನು. - ಆ ಬಳಿಕ ರಾವಣನು ಅಲ್ಲಿಂದ ಹೊರಟು ಭೂಲೋಕದಲ್ಲಿ ಸಂಚರಿಸುತ್ತ ತೋ ಇವು ಕುರಿಮಂದೆಗಳನ್ನು ಕಡಿದೊಟ್ಟು ವಂತೆ ಆಜೆರಂಗದಲ್ಲಿ ಬಲವಂತರಾದ ಅರಸುಗ ಇನ್ನು ಸಂಹರಿಸುತ್ತ ಬಂದು ಹಿಮನಗದ ತಪ್ಪಲಲ್ಲಿರುವ ಮಹಾರಣ್ಯವನ್ನು ಹೊಕ್ಕು ನೋಡಲು; ಅಲ್ಲೊಂದೆಡೆಯಲ್ಲಿ ಅಸಮಾನಸೌಂದರ್ಯದಿಂದ ಕಂಗೊಳಿಸುತ್ತ ದ್ವಿತೀಯ ರತಿಯಂತೆ ಕುಳಿತು ತಪಸ್ಸನ್ನು ಮಾಡುತ್ತಿದ್ದ ಒಬ್ಬ ಸ್ತ್ರೀಯನ್ನು ನೋಡಿ. ಎಲೈ ಸ್ತ್ರೀಯಳೇ, ಇದೇನು ? ಅತ್ಯಾಶ್ಚರ್ಯವು ! ನೀನಾರು ? ನಿನ್ನ ಹೆಸರೇನು ? ಈ ವನ ಭೂಮಿಯಲ್ಲಿ ಸುಕುಮಾರಾಂಗಿಯಾದ ನೀನೊಬ್ಬಳೇ ಇದ್ದುಕೊಂಡು ಕಠಿಣತರ ತಪಶ್ಚರಣಕ್ಕೆ ಕಾರಣವೇನು ? ಈ ಮೊದಲಾದ ವರ್ತಮಾನಗಳನ್ನು ವಿಶದವಾಗಿ ತಿಳಿಸು ಎನ್ನಲು ; ಆಕೆಯು ಪ್ರೀತಿಯಿಂದ ರಾವಣನನ್ನು ಸತ್ಕರಿಸಿ-ಕೇಳ್ಳೆ, ಬೃಹಸ್ಸ ತಿಯ ಕುಮಾರನಾದ ಕುಶಧಜನೆಂಬವನು ವೇದವನ್ನು ಪಠಿಸುತ್ತಿರುವಾಗ ನಾನು ಆತನ ಬಾಯಿಯಿಂದ ಹುಟ್ಟಿದವಳಾದಕಾರಣ ಲೋಕದಲ್ಲಿ ನನಗೆ ವೇದವತಿಯೆಂದು ಹೆಸರಾಯಿತು, ನನ್ನ ತಂದೆಯು ಬಹು ಪ್ರೀತಿಯಿಂದ ನನ್ನನ್ನು ಕಾಪಾಡುತ್ತಿರಲು ; ಮನು ಮುನಿ ಸುರ ಕಿನ್ನರ ಯಕ್ಷ ಕಿಂಪುರುಷಾದಿಗಳಲ್ಲಿ ಸುಂದರರಾದ ಪುರುಷರು ಒಂದು ನನ್ನನ್ನು ಬೇಡಲು ; ಅವರೊಡನೆ ನನ್ನ ತಂದೆಯುಈಕೆಯು ಅಯೋನಿಜೆ ಯಾದುದರಿಂದ ಬಹು ಪವಿತ್ರಳು. ಈಕೆಯನ್ನು ವಿಷ್ಣುವಿಗಲ್ಲದೆ ಮತ್ತಾರಿಗೂ ಕೊಡುವುದಿಲ್ಲ ವೆಂದು ಹೇಳಿಬಿಟ್ಟನು ಆ ಮೇಲೆ ಶಂಭುವೆಂಬೊಬ್ಬ ರಾಕ್ಷಸನು ಬಂದು ನನ್ನನ್ನು ಕೇಳಲು ; ನನ್ನ ತಂದೆಯು ಅವನಿಗೂ ಯಥಾವತ್ತಾಗಿ ಹೇಳಿಬಿಡಲು ; ಅವನು ಕ್ರುದ್ದ ನಾಗಿ ನನ್ನ ತಂದೆಯ ತಲೆಯನ್ನು ಕಡಿದು ಬಿಸುಟು ಹೊರಟುಹೋ ದನು, ಆಗ ನನ್ನ ತಾಯಿಯ ಸಹಗಮನಕ್ರಿಯೆಯಿಂದ ಪ್ರಾಣತ್ಯಾಗವನ್ನು ಮಾಡಿ ದಳು. ಆ ಮೇಲೆ ಅನಾಥಳಾದ ನಾನು ತಾಯ್ತಂದೆಗಳಿಗೆ ಔರ್ಧ್ವದೇಹಿಕವನ್ನು ನಿರ್ವ ರ್ತಿಸಿ ನನ್ನ ತಂದೆಯ ಬಯಕೆಯನ್ನು ಕೊನೆಗಾಣಿಸುವುದಕ್ಕಾಗಿ ವಿಷ್ಣು ಪ್ರೀತ್ಯರ್ಥ ವಾಗಿ ತಪಸ್ಸನ್ನು ಮಾಡುತ್ತ ಇಲ್ಲಿದ್ದೇನೆ ಎಂದು ಹೇಳಿದಳು. ಆಗ ರಾವಣನು. ಎಲೈ ಸ್ತ್ರೀಯೇ, ಕೇಳು, ಹರಿಯೆಲ್ಲಿ ? ನೀನೆಲ್ಲಿ ? ಇಂಥ ನವಯೌವನಕಾಲದಲ್ಲಿ ಸುಖ ವಾಗಿರುವುದನ್ನು ಬಿಟ್ಟು ಹೀಗೆ ಮೂಢಳಾಗಿ ತಪಶ್ಚರಿಸುವುದರಿಂದ ನಿನ್ನ ಯೌವನವು ಅರಣ್ಯ ಪತಿತ ಚಂದ್ರಿಕೆಯಂತೆ ನಿರುಪಯೋಗವಾಗಿ ಹೋಗುವುದು, ಅದು ಕಾರಣ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೪
ಗೋಚರ