236 ಕಥಾಸಂಗ್ರಹ-೫ ನೆಯ ಭಾಗ ಗಳನ್ನೂ ಹಿಡಿದು ತಿಕ್ಕಿ ಮುಕ್ಕಿ ಬಿಡುವೆನು ಎಂದು ಗರ್ಜಿಸುತ್ತ ನಿಜನಗರವಾದ ಶೋಣಿತಪುರಕ್ಕೆ ಬರುವಷ್ಟರಲ್ಲೇ ಆ ಹಿರಣ್ಯಕಶಿಪುವಿನ ಪತ್ನಿ ಯು ಕೋಟಿಸೂ ರ್ಯಪ್ರಕಾಶದಿಂದ ಕೂಡಿರುವ ಒಂದು ಗಂಡು ಮಗುವನ್ನು ಹೆರಲು ; ಆಗ ಲೋಕೋ ಪಕಾರಿಯ ಲೋಕಾನಂದಕರನೂ ಆದ ಹರಿಭಕ್ತಾಗ್ರೇಸರನು ಹುಟ್ಟಿದನೆಂದು ಬಹಳ ಸಂತೋಷದಿಂದ ಇಂದ್ರಾದಿದೇವತೆಗಳು ದೇವದುಂದುಭಿಯನ್ನು ಬಾರಿಸಿದರು. ಗಂಧರ್ವರು ಮನೋಹರವಾಗಿ ಗಾನವನ್ನು ಮಾಡಿದರು, ಅಪ್ಪರಸ್ತ್ರೀಯರು ನರ್ತನ ವನ್ನು ಮಾಡಿ ನಲಿದರು. ಸುರಮುನಿಗಳೂ ಬ್ರಹ್ಮರ್ಷಿಗಳೂ ತಮ್ಮ ತಮ್ಮ ಸತ್ಕರ್ಮ ಗಳಿಗೆ ನಿರ್ವಿಘ್ನು ತೆಯುಂಟಾಗುವುದೆಂದು ಆ ಶಿಶುವನ್ನು ಹರ್ಷದಿಂದ ಹರಸಿದರು. ನಂದನವನದಲ್ಲಿರುವ ಕಲ್ಪವೃಕ್ಷ ಪಾರಿಜಾತಾದಿ ವೃಕ್ಷಗಳು ಪೂಮಳೆಯನ್ನು ಕರೆದುವು. ಅನಂತರದಲ್ಲಿ ಮಹೋಗ್ರಕೋಪಯುಕ್ತನಾಗಿ ನಿಜನಗರಕ್ಕೆ ಬರುತ್ತಿದ್ದ ಹಿರ ಣ್ಯಕಶಿಪುವು ಇದನ್ನೆಲ್ಲಾ ಕಂಡು-ದೇವತೆಗಳಿಗೆ ಇಷ್ಟು ಸಂತೋಷವುಂಟಾಗುವುದಕ್ಕೆ ಕಾರಣವೇನಿರಬಹುದು ಎಂದು ಯೋಚಿಸುತ್ತ ಇರುವಲ್ಲಿ ದೇವೇಂದ್ರನು ಅಷ್ಟದಿಕ್ಷಾ ಲಕರೊಡನೆ ಕೂಡಿ ಆತನೆದುರಿಗೆ ಬಂದು ದೇವಲೋಕದ ಉನ್ನ ತವಸ್ತುಗಳನ್ನು ಕೈಗಾಣಿಕೆಯಾಗಿ ಒಪ್ಪಿಸಿ ಕೈಮುಗಿದು ನಿಂತುಕೊಂಡು-ಎಲೈ ಸರ್ವಲೋಕಾಧಿ ರಾಜನೇ, ಮಹಾತ್ಮನಾದ ನಿನಗೆ ಮಹಾ ಪುತ್ರೋತ್ಸವವಾಯಿತೆಂದು ತಿಳಿದು ನಮಗೆ ಪೂರ್ಣ ಸಂತೋಷವುಂಟಾದುದರಿಂದ ಹೀಗೆ ನಡೆದುಕೊಂಡೆವು ಎಂದು ಬಿನ್ನವಿಸಿದರು. ಆಗ ಹಿರಣ್ಯಕಶಿಪುವು ಆ ಮಾತುಗಳನ್ನು ಕೇಳಿದುದರಿಂದ ದೇವತೆಗಳ ಮೇಲಿದ್ದ ಕೋಪವೆಲ್ಲಾ ಶಾಂತವಾಗಿ ಪ್ರತೋತ್ಸವವಾಯಿತಂಬ ಸಂತೋಷದಿಂದ ಹಿಗ್ಗು ತ್ಯ ಆ ಇಂದ್ರಾದಿ ದೇವತೆಗಳೊಡನೆ ಕೂಡಿ ನಗರವನ್ನು ಪ್ರವೇಶಿಸಿ ಕೂಡಲೆ ಅಂತಃಪುರಕ್ಕೆ ಹೋಗಿ ದಿವ್ಯತೇಜಃಪುಂಜರಂಜಿತನಾದ ಮಗನನ್ನು ನೋಡಿ ಅತ್ಯಾಶ್ಚರ್ಯಾನಂದಭರಿ ತಾಂತರಂಗನಾಗಿ ತನ್ನ ಸೆರೆಮನೆಯಲ್ಲಿಟ್ಟಿದ್ದ ಸರ್ವಜನರನ್ನೂ ಬಿಡಿಸಿ ದೀನಾನಾಥಾದಿ ಗಳಿಗೆಲ್ಲಾ ಸಕಲವಿಧವಾದ ದಾನಧರ್ಮಗಳನ್ನು ಮಾಡಿಸಿ ತೃಪ್ತಿ ಪಡಿಸಿ ಕೂಡಲೆ ತಮ್ಮ ಕುಲಗುರುವಾದ ಶುಕ್ರಾಚಾರ್ಯನನ್ನು ಕರಿಸಿ ಶಿಶುವಿಗೆ ಜಾತಕರ್ಮಾದಿಗಳನ್ನು ಸಾಂಗವಾಗಿ ನೆರವೇರಿಸಿ ಆ ಮಗುವು ಸಕಲ ಲೋಕಾಹ್ಲಾದಕರನಾಗಿದ್ದುದರಿಂದ ಹನ್ನೆರಡನೆಯ ದಿವಸದಲ್ಲಿ ಶುಕ್ರಾಚಾರ್ಯರಿಂದ ಮಹಾ ಸಂಭ್ರಮದೊಡನೆ ಪ್ರಹ್ಲಾದ ನೆಂದು ನಾಮಕರಣವನ್ನು ಮಾಡಿಸಿದನು. ಆ ಪ್ರಹ್ಲಾದನು ಗರ್ಭದಲ್ಲಿರುವಾಗಲೇ ಹರಿಭಕ್ತಿರಸಮಯವಾದ ಶರೀರವುಳ್ಳ ವನಾದುದರಿಂದ ಭೂಮಿಯಲ್ಲಿ ಜನಿಸಿದಾಗ್ಯೂ ಅಜ್ಞಾನವನ್ನು ಹೊಂದದೆ ಆ ಶಿಶು ದಲ್ಲಿಯ ಹರಿಧ್ಯಾನಪರಾಯಣನಾಗಿ ನಿಜಮಾತೃವಿನ ಮೊಲೆಹಾಲನ್ನು ಹರಿಪಾದ ತೀರ್ಥವೆಂದೇ ಭಾವಿಸಿ ಪಾನಮಾಡುತ್ತ ಹರಿಗೆ ಈ ರೀತಿಯಾಗಿ ಅಡ್ಡ ಬೀಳಬೇಕೆಂದು ತೊಟ್ಟಲಿನಲ್ಲಿ ಮೊಗುಚಿಕೊಳ್ಳುತ್ತ ಹರಿಗೆ ಅರ್ಪಿಸದೆ ಹಾಲು ತುಪ್ಪ ಸಕ್ಕರೆ ಮೊದಲಾ ದುವುಗಳನ್ನು ಬಲಾತ್ಕಾರದಿಂದ ಕೈಹಿಡಿದು ತಿನ್ನಿಸುತ್ತಿರುವರಲ್ಲಾ ಎಂಬ ದುಃಖಾತಿಶ ಯದಿಂದ ರೋದಿಸುತ್ತ ಹರಿಮಾಹಾತ್ಮವನ್ನು ಮನಸ್ಸಿನಲ್ಲಿ ನೆನನೆನದು ನಗುತ್ತ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೬
ಗೋಚರ