ನರಸಿಂಹಾವತಾರದ ಕಥೆ 239 ಭೇದವೇನೂ ಇರುವುದಿಲ್ಲ, ಆತನು ಸರ್ವಪ್ರಾಣಿಗಳಲ್ಲೂ ಏಕಪ್ರಕಾರವಾದ ದಯೆ ಯುಳ್ಳವನು. ಆತನು ವಿರೋಧದಿಂದ ನಿನ್ನ ತಮ್ಮನನ್ನು ಕೊಂದುಹಾಕಿದನೆಂದೂ ನಿನಗೆ ಹಗೆಯಾಗಿರುವನೆಂದೂ ಎಂದಿಗೂ ಯೋಚಿಸಬೇಡ, ತನ್ನ ಪುರಾಕೃತಪಾಪಫಲ ದಿಂದ ಅವನು ಅಳಿದನು, ನೀನು ಈ ವಿಷಯವನ್ನು ಚೆನ್ನಾಗಿ ಯೋಚಿಸಿ ನೋಡು. ಯುಕ್ತಾ ಯುಕ್ತಗಳನ್ನು ವಿಚಾರಿಸದೆ ಸುಮ್ಮನೆ ತೀರ್ಮಾನಿಸುವ ಯೋಚನೆಗಳಿಂದ ಅನರ್ಥವಲ್ಲದೆ ಫಲವೇನೂ ದೊರೆಯಲಾರದು ಎಂದು ಹೇಳಿದನು, ಈ ಮಾತುಗಳನ್ನು ಕೇಳಿ ಹಿರಣ್ಯಕಶಿಪುವು ಕೋಪಿಷ್ಠನಾಗಿ-ಇವನಿಗೆ ಯಾವ ವಿಧದಿಂದ ಹೇಳಿದಾಗ ನನ್ನ ಹಗೆಯಾದ ವಿಷ್ಣು ವಿನ ನೆನಹನ್ನು ಬಿಡುವುದಿಲ್ಲ, ಇಂಥ ಕುಲದ್ವೇಷಿಯ ಪಿತೃ ದ್ವೇಷಿಯ ಆದ ಕೆಟ್ಟ ಮಗನು ಇರುವುದರಿಂದ ಪ್ರಯೋಜನವೇನು ? ಇಂಥ ಪಾಪಿಯ ಶಿರಸ್ಸನ್ನು ಈಗಲೇ ಕಡಿದುಬಿಡುವೆನೆಂದು ಗರ್ಜಿಸಿ ಒರೆಯಿಂದ ಖಡ್ಡ ವನ್ನು ಹಿರಿದು ಕಡಿಯುವುದಕ್ಕೆ ಹೋಗಲು ; ಆಗ ಗುರುವಾದ ಶುಕ್ರಾಚಾರ್ಯನು ಶೀಘ್ರ ವಾಗಿ ಬಂದು ನಿಲ್ಲು ನಿಲ್ಲೆಂದು ಹಿರಣ್ಯಕಶಿಪುವಿನ ಕೈಯನ್ನು ಹಿಡಿದುಕೊಂಡುಬೇಡ ! ಈ ಕಾರ್ಯವನ್ನು ಮಾಡಬೇಡ ! ಶಿಶುವನ್ನು ಕೊಂದುದರಿಂದೇನು ಪ್ರಯೋ ಜನ ? ಹಾಲು ಕುಡಿಯುವ ಬಾಲಕನೊಡನೆ ನಿನಗೆ ವಿರೋಧವೇ ? ಈ ಪ್ರಯತ್ನ ವನ್ನು ನಿಲ್ಲಿಸು. ಪ್ರಿಯ ಪುತ್ರನನ್ನು ಮುದ್ದಿಸಿ ಸಂತೋಷಿಸು. ನಾನು ಇವನಿಗೆ ಲೋಕವು ಮೆಚ್ಚುವಂತೆ ವಿದ್ಯಾ ಬುದ್ಧಿಗಳನ್ನು ಕಲಿಸುವೆನು, ನೀನು ಈ ಶಿಶುವಿನ ವಿಷಯದಲ್ಲಿ ಅನ್ಯಥಾ ಯೋಚಿಸಬೇಡ' ಎಂದು ಹೇಳಿ ಹಿರಣ್ಯಕಶಿಪುವನ್ನು ಸಮಾಧಾ ನಪಡಿಸಿದನು. ಆಗ ದೈತ್ಯರಾಜನು ಶಾಂತಕೋಪನಾಗಿ ಪ್ರಹ್ಲಾದನನ್ನು ಗುರುವಿನ ವಶಕ್ಕೆ ಕೊಟ್ಟು--ನೀಚನಾದ ಹರಿಯನ್ನು ನೆನೆಯುತ್ತಿರುವ ಇವನ ಹುಚ್ಚುತನವನ್ನು ಬಿಡಿಸಿ ವಿದ್ಯಾ ಬುದ್ಧಿಗಳನ್ನು ಕಲಿಸು ಎಂದು ನೇಮಿಸಿ ಕಳುಹಿಸಿದನು. ಶುಕ್ರಾಚಾರ್ಯನು ಯಥಾಪ್ರಕಾರವಾಗಿ ಪ್ರಹ್ಲಾದನನ್ನು ಮಠಕ್ಕೆ ಕರೆದು ಕೊಂಡು ಬಂದು ಎಷ್ಟೆಷ್ಟು ಉಪಾಯಗಳಿಂದ ಒಡಂಬಡಿಸಿ ಹರಿಯ ನೆನಪನ್ನು ಬಿಡು ಎಂದು ತಿಳಿಸಿ ಹೇಳಿದಾಗ ಕೇಳದೆ ಪ್ರಹ್ಲಾದನು ಹರಿಧ್ಯಾನಪರಾಯಣನಾ ಗಿಯೇ ಇರುತ್ತಿದ್ದನು. ಅನಂತರದಲ್ಲಿ ಗುರುವು ಕೋಪಿಸಿಕೊಂಡು ಹರಿಸ್ಕೃತಿಯನ್ನು ಬಿಡು ಎಂದು ಹೇಳಲು ; ಅವನು ಅನ್ಯಾದೃಶವಾದ ವಾಗ್ದಾಣದಿಂದ ಗುರುವಿಗೇ ವೇದಾಂತವನ್ನು ಉಪದೇಶಿಸುತ್ತ ಬುದ್ದಿಯನ್ನು ಹೇಳುವುದಕ್ಕೆ ಬಂದುದರಿಂದ ಆತನು ಸಾಕಾಗಿ ಬೇಸರಿಕೆಯನ್ನು ಹೊಂದಿ ಆ ಪ್ರಹ್ಲಾದನನ್ನು ಕರೆದು ಕೊಂಡು ಹಿರಣ್ಯಕಶಿ ಪುವಿನ ಬಳಿಗೆ ಬಂದು--ಅಯ್ಯಾ, ಹಿರಣ್ಯಕಶಿಪುವೇ, ನಾನು ಎಷ್ಟು ವಿಧದಿಂದ ಒಳ್ಳೆಯ ಮಾತುಗಳನ್ನು ಉಪಯೋಗಿಸಿ ಬೋಧಿಸುವುದಕ್ಕೆ ತೊಡಗಿದರೂ ನಾನಾವಿಧದಿಂದ ಬೈದು ಹೊಡೆದು ಶಿಕ್ಷಿಸಿ ಹೇಳಿದಾಗೂ ಮೂರ್ಖನಾದ ನಿನ್ನ ಮಗನು ಒಂದು ಕ್ಷಣ ಕಾಲವಾದರೂ ಹರಿಧ್ಯಾನವನ್ನು ಬಿಡದೆ ನಾನು ಹೇಳಿಕೊಟ್ಟು ದನ್ನಾದರೂ ಓದಿ ಬರೆ ಯುವುದಿಲ್ಲ, ಇವನಿಗೆ ತಿಳಿವಳಿಕೆಯನ್ನು ಕಲಿಸುವುದಕ್ಕೆ ನನ್ನಿಂದಾಗುವುದಿಲ್ಲ. ಈತ ನನ್ನು ತಿದ್ದುವುದು ಅಸಾಧ್ಯವಾಗಿ ತೋರುತ್ತಿದೆ ಎಂದು ಖಂಡಿತವಾಗಿ ಹೇಳಿಬಿಟ್ಟನು.
ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೯
ಗೋಚರ