238 ಕಥಾಸಂಗ್ರಹ-೫ ನೆಯ ಭಾಗ ಬರೆದು ಇದನ್ನು ಕೂಡಿ ಕಳೆ ಎಂದು ಹೇಳಲು ; ಆಗ ಪ್ರಹ್ಲಾದನು ವಿಷ್ಣು ವನ್ನು ಮನಸ್ಸಿನಲ್ಲಿ ಕೂಡಿ ಸಕಲ ಪಾಪಗಳನ್ನೂ ಕಳೆಯುತ್ತ ಅಂತರಂಗದಲ್ಲಿ ಹರಿಯನ್ನೇ ಧ್ಯಾನಿಸುತ್ತ ಹೊರಗಣ ವ್ಯಾಪಾರಗಳನ್ನು ತೊರೆದು ಸುಮ್ಮನಿದ್ದನು. - ಅನಂತರದಲ್ಲಿ ಅದನ್ನು ನೋಡಿ ಶುಕ್ರಾಚಾರ್ಯನು--ಈ ಹುಡುಗನು ಯಾಕೆ ಹೀಗೆ ಮೊಂಕಾದನು ? ಎಷ್ಟು ವಿಧದಿಂದ ಹೇಳಿದಾಗ ಸ್ವಭಾವವನ್ನು ಬಿಡಲಿಲ್ಲ. ಇದಕ್ಕೇನು ಕಾರಣವಿರಬಹುದು? ಒಳ್ಳೆಯದು, ಹಸಿದನೋ ಏನೋ ? ಉಂಡು ಬರಲಿ ಎಂದು ಯೋಚಿಸಿ ಜೊತೆಯ ಹುಡುಗರನ್ನು ಕರೆದು ಈ ಹುಡುಗನು ಹಸಿದಿರು ವನು, ಇವನನ್ನು ಕರೆದು ಕೊಂಡು ಹೋಗಿ ಮನೆಯಲ್ಲಿ ಬಿಟ್ಟು ಬನ್ನಿರಿ ಎಂದು ಹೇಳಿ ಕಳುಹಿಸಲು; ಆಗ ಹರಿಭಕ್ತನಾದ ಪ್ರಹ್ಲಾದನು ಕಾಲು ಗೆಜ್ಜೆಗಳು ಉಲಿಯುತ್ತಿ ರಲು ; ಕೆಂಪಗಿರುವ ಮುಂಗೂದಲುಗಳು ಕುಣಿಯುತ್ತಿರಲು; ಮಾಗಾಯಿ ಹುಲಿಯು ಗುರುಗಳು ಒಲೆದಾಡುತ್ತಿರಲು; ನಳಿತೋಳುಗಳನ್ನು ಬೀಸುತ್ತ ನೋಡುವವರ ಮನಸ್ಸಿಗೆ ಆನಂದವನ್ನು ಬೀರುತ್ತ ನೋಟಗಳಿಂದ ಸರ್ವರಿಗೂ ಆಹ್ವಾದವನ್ನು ಂಟುಮಾಡುತ್ತ ಹುಡುಗರ ಜೊತೆಯಲ್ಲಿ ಬರುತ್ತಿರುವುದನ್ನು ಹಿರಣ್ಯಕಶಿಪುವು ದೂರದಿಂದಲೇ ಕಂಡು ಹರ್ಷಾತಿಶಯ ಮನಸ್ಕತ್ವದಿಂದ ರೋಮಾಂಚಕಂಚುಕಿತಾ೦ಗನಾಗಿ ಮುಂದೈತಂದು.. ಎನ್ನ ಕಂದಾ, ನನ್ನ ಮದದಾನೆಯೇ, ನನ್ನ ವಂಶಾಬ್ಬಿ ಸುಧಾಕರನೇ, ಬಾ, ಬಾ ಎಂದು ಕೈನೀಡಿ ಕರೆದು ಅಪ್ಪಿಕೊಂಡು ಮುದ್ದಿಸಿ ಶಿರಸ್ಸನ್ನು ಆಘ್ರಾಣಿಸಿ ಸ್ವಲ್ಪ ಕಾಲ ದ ವರೆಗೂ ಪುತ್ರಾಲಿಂಗನ ಸುಖವನ್ನನುಭವಿಸುತ್ತ ಇದ್ದು ಆ ಮೇಲೆ ಅವನನ್ನು ಕುರಿತು-ಗುರುಗಳು ನಿನಗೆ ಏನೇನು ಹೇಳಿಕೊಟ್ಟರು? ನೀನು ಏನೇನು ಕಲಿತು ಬಂದಿ, ಹೇಳು, ನೋಡೋಣ ಎಂದು ಸಂತೋಷದಿಂದ ಕೇಳಲು; ಆಗ ಪ್ರಹ್ಲಾದನು-ಹರಿಯೇ, ಹರಿಯೇ, ರಕ್ಷಿಸು, ರಕ್ಷಿಸು ಎಂದು ಬರೆದು ಓದಲು ; ಆಗ ಹಿರಣ್ಯಕಶಿಪುವು ಹರಿಶ ಬ್ಲೊಚ್ಚಾರಣೆಯನ್ನು ಕೇಳಿ ಬೆಚ್ಚಿ ಭಯದಿಂದ ಕೂಡಿ-ಬಾಲಕನಾದ ಇವನಿಗೆ ಕಪಟಿ ಯಾದ ಹರಿನಾಮೋಚ್ಚಾರಣೆಯು ಎಲ್ಲಿಂದ ಬಂದಿತು ? ಇದನ್ನು ಕಲಿಸಿಕೊಟ್ಟವರಾ ರು ? ಎಂದು ಯೋಚಿಸಿ ಏನೋ ಶಿಶುತ್ವಚಾಪಲ್ಯದಿಂದ ಎಲ್ಲೋ ಅಕಸ್ಮಾತ್ತು ಕಿವಿಗೆ ಬಿದ್ದ ಶಬ್ದವನ್ನೇ ಸ್ಮೃತಿಯಲ್ಲಿಟ್ಟು ಕೊಂಡು ಪೂರ್ವಾಪರ ವಿಚಾರವಿಲ್ಲದೆ ಹೀಗೆ ಹೇಳಿರಬಹುದು ; ಇಷ್ಟು ಮಾತ್ರಕ್ಕೆ ತಪ್ಪೇನು ? ಇವನಿಗೆ ಈ ಚಾಪಲ್ಯವನ್ನು ಬಿಡಿಸ ಬೇಕು ಎಂದು ನಿರ್ಧರಿಸಿ ಪುನಃ ಪ್ರಹ್ಲಾದನನ್ನು ಕುರಿತು--ಎಲೆ, ಕುಲದೀಪಕನಾದ ಪುತ್ರನೇ, ನೀನಾರು ? ಕಪಟಿಯಾದ ಹರಿಯಾರು ? ಆ ದುಷ್ಟನೂ ನೀಚನೂ ಆದ ಹರಿಯು ನಮಗೆ ಜನ್ನ ವಿರೋಧಿಯು, ಅವನು ಮೊದಲು ದೇವತೆಗಳ ಮಾತುಗಳನ್ನು ಕೇಳಿ ಹಂದಿಯ ರೂಪವನ್ನು ಧರಿಸಿ ಬಂದು ನಿನ್ನ ಚಿಕ್ಕಪ್ಪನಾದ ಹಿರಣ್ಯಾಕ್ಷನನ್ನು ಕೊಂದುಹಾಕಿದ ದುರಾತ್ಮನು. ಅಂಥ ವಂಚಕನನ್ನು ಹೊಗಳುವುದು ನಮಗೆ ಎಂದಿ ಗೂ ಉಚಿತವಲ್ಲ, ಅದು ಕಾರಣ ಹಾಗೆ ಹೇಳಬೇಡಪ್ಪಾ ಎಂದು ಹೇಳಿದನು ಆ ಮಾತುಗಳನ್ನು ಕೇಳಿ ಪ್ರಹ್ಲಾದನು--ಎಲೆ ತಂದೆಯೇ, ಕೇಳು, ಮಹನೀ ಯನಾದ ಹರಿಯಲ್ಲಿ ಇವರು ಹಗೆಗಳು, ಇವರು ಮಿತ್ರರು, ಇವರು ಬಂಧುಗಳು ಎಂಬ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೪೮
ಗೋಚರ