ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


244 ಕಥಾಸಂಗ್ರಹ-೫ ನೆಯ ಭಾಗ ಅನಂತರದಲ್ಲಿ ಬಲಿಯು ತನ್ನ ಅಧೀನವಾದ ರಾಜ್ಯಭಾರವನ್ನು ತನ್ನ ಬುದ್ದಿ ವಂತರಾದ ಮಂತ್ರಿಗಳಲ್ಲಿಟ್ಟು -ಎಳ್ಳಷ್ಟಾದರೂ ಧರ್ಮಕ್ಕೆ ಲೋಪಬಾರದಂತೆಯ ದೇಶದ ಸರ್ವಜನರೂ ಪರಮಭಕ್ತಿಯಿಂದ ಕೂಡಿ ಮಹಾವಿಷ್ಣುವನ್ನೇ ಆರಾಧಿಸುವಂ ತೆಯ ಸರ್ವರಿಗೂ ಕಟ್ಟು ಮಾಡಿಸಿ-ನೀವು ಧರ್ಮಿಷ್ಠರಾಗಿ ವಿಚಾರಿಸಿಕೊಳ್ಳುತ್ತ ಸತ್ಯದಿಂದಿರಿ ಎಂದು ಆ ಮಂತ್ರಿಗಳಿಗೆ ಹೇಳಿ ತಾನು ಹಿಮವತ್ಪರ್ವತಕ್ಕೆ ಹೋಗಿ ಅಲ್ಲಿ ಸರ್ವಲೋಕ ಪಿತಾಮಹನಾದ ಬ್ರಹ್ಮದೇವನನ್ನು ಕುರಿತು ಅನೇಕ ಸಂವತ್ಸರಗಳ ವರೆಗೂ ಕಠಿಣತರವಾದ ತಪಸ್ಸನ್ನು ಮಾಡಿದುದರಿಂದ ಹಿರಣ್ಯಗರ್ಭನು ಮೆಚ್ಚಿ ಆತನ ಬಳಿಗೆ ಬಂದು- ಎಲೈ ಸುಶೀಲನಾದ ಬಲಿಯೇ, ನಾನು ನಿನ್ನ ತಪಸ್ಸಿಗೆ ಮೆಚ್ಚಿದೆನು, ನಿನಗೆ ಬೇಕಾದ ವರಗಳನ್ನು ಬೇಡಿಕೊ, ಕೊಡುವೆನು ಎಂದು ಹೇಳಲು ; ಆಗ ಬಲಿಯು ಆತನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ ಭಯಭಕ್ತಿಯಿಂದ ಕೈಮುಗಿದು ನಿಂತು ಕೊಂಡು--ಸ್ವಾಮಿಾ, ಜಗತ್ನರ್ತನೇ, ಮೊದಲು ನನಗೆ ಎಂಥ ಎಡರು ಬಂದ ಕಾಲ ದಲ್ಲೂ ಮಹಾವಿಷ್ಣು ವಿನಲ್ಲಿ ಅಚಂಚಲವಾದ ಭಕ್ತಿಯ ಧರ್ಮದಲ್ಲಿ ಬುದ್ದಿ ಯ ಸ್ವಲ್ಪವಾದರೂ ತಪ್ಪದ ಹಾಗೆ ಕೊಡತಕ್ಕ ವರ ಒಂದು, ನಾನು ಆಳುವ ರಾಜ್ಯಗ ಇಲ್ಲಿ ಸಕಲ ಪ್ರಜೆಗಳೂ ಸಂತತಿ ಸಂಪತ್ತು ಗಳಿಂದ ಕೂಡಿ ಸದಾ ಸಂತೋಷಚಿತ್ತರಾಗಿ ರುವ ಹಾಗೆ ಕೊಡಬೇಕಾದ ವರ ಒಂದು, ನಾನು ಸ್ಥಿರಜೀವಿಯಾಗಿರತಕ್ಕ ವರ ಒಂದು, ಸಕಲ ದೇವತೆಗಳೂ ದಾನವರೂ ಮತ್ತು ಯಕ್ಷಗರುಡಗಂಧರ್ವ ಕಿನ್ನರೋ ರಗರೇ ಮುಂತಾದವರಲ್ಲಿರುವ ಸಕಲ ಮಂತ್ರಾಸ್ತ್ರಗಳೂ ವೈಷ್ಣವಪಾಶುಪತಬ್ರಹ್ಮಾಸ್ತ್ರ ಗಳೂ ನನಗೆ ಸಿದ್ಧಿಸುವಂತೆ ಅನುಗ್ರಹಮಾಡುವ ವರ ಒಂದು. ಇವುಗಳನ್ನು ನನಗೆ ದಯಪಾಲಿಸಬೇಕೆಂದು ದೀನತೆಯಿಂದ ಬೇಡಿಕೊಳ್ಳಲು ; ಬ್ರಹ್ಮದೇವನು ಬಹಳವಾಗಿ ಸಂತೋಷಿಸಿ-ಎಲೈ ಮಗನೇ, ನಿನ್ನ ಸುಗುಣಗಳಿಗೆ ನಾನು ಬಹಳವಾಗಿ ಮೆಚ್ಚಿ ದೆನು, ನೀನು ಕೇಳಿಕೊಂಡ ನಾಲ್ಕು ವರಗಳನ್ನೂ ಸಂತೋಷದಿಂದ ನಿನಗೆ ಕೊಟ್ಟಿ ದ್ದೇನೆ, ಅವಿಚ್ಚಿ ನ ವಾದ ಸುಖದಿಂದ ಬಾಳು ಎಂದು ಆತನ ತಲೆಯ ಮೇಲೆ ಕೈಯಿಟ್ಟು ಹರಸಿ ಹಂಸೆಯನ್ನೇರಿ ಸತ್ಯಲೋಕಕ್ಕೆ ಹೊರಟುಹೋದನು. ಅನಂತರದಲ್ಲಿ ಬಲಿಯು ಸಂತೋಷದಿಂದ ಕೂಡಿದವನಾಗಿ ನಿಜನಗರವಾದ ಶೋಣಿತಫರಕೆ ಬಂದು ಆಚಾರ್ಯನಾದ ಶುಕಾಚಾರ್ಯನಿಗೆ ಸಾಷಾ೦ಗವಾಗಿ. ನಮಸ್ಕರಿಸಿ ಷೋಡಶೋಪಚಾರಗಳಿಂದ ಪೂಜಿಸಿ ತಾನು ತಪಸ್ಸಿನಿಂದ ಬ್ರಹ್ಮನನ್ನು ಮೆಚ್ಚಿಸಿ ಆತನಿಂದ ಪಡೆದು ಕೊಂಡು ಬಂದ ನಾಲ್ಕು ವರಗಳ ವಿವರಗಳನ್ನು ಕ್ರಮ ವಾಗಿ ಬಿನ್ನವಿಸಿ--ಸ್ವಾಮಿಾ, ನಾನು ಇಲ್ಲಿಂದ ಮುಂದೆ ಮಾಡಬೇಕಾದ ಕಾರ್ಯ ವೇನು ? ಅಪ್ಪಣೆಯಾಗಬೇಕು ಎಂದು ಕೇಳಲಾಗಿ ; ಆಗ ಸಂತುಷ್ಟಾಂತರಂಗನಾದ ಶುಕ್ರಾಚಾರ್ಯನು--ಎಲೈ ಸುಗುಣಾಭರಣ ಭೂಷಿತನಾದ ಬಲಿಯೇ, ನೀನು ಅನ್ನಾ ದೃಶವಾದ ತಪಸ್ಸಿನಿಂದ ಇಂಥ ಅಮೋಘವಾದ ವರಗಳನ್ನು ಪಡೆದ ಮೇಲೆ ನೀನೇ ತ್ರಿಲೋಕಾಧಿಪತಿಯಾಗಿರಬೇಕೇ ಹೊರತು ಇಂಥ ಅನನ್ಯ ಸಾಧಾರಣಶೌರ್ಯಧುರಂಧ ರನಾದ ನಿನ್ನ ಮುಂದೆ ಅಲ್ಪ ಬಲನಾದ ದೇವೇಂದ್ರನು ತ್ರಿಲೋಕಾಧಿಪತಿಯಾಗಿರು