ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಾವತಾರದ ಕಥೆ 245 ವುದೂ ನೀನು ಅವನ ಅಧೀನದಲ್ಲಿರುವ ಕೆಲವು ದೇಶಗಳಿಗೆ ಮಾತ್ರ ಅರಸೆನ್ನಿಸಿಕೊಂಡಿ ರುವುದೂ ನಿನ್ನ ಯೋಗ್ಯತೆಗೆ ಬಹಳ ನ್ಯೂನತೆಯಾಗಿರುವುದು, ಇದರಿಂದ ನೀನು ಪಡೆದ ಮಹಾವರಗಳಿಗೆ ಸಾಫಲ್ಯವುಂಟಾಗದೆ ಹೋಗುವುದು ಎಂದು ಹೇಳಿದನು. ಅದನ್ನು ಕೇಳಿ ಬಲಿಯು ಯೋಚಿಸಿ ಯುಕ್ತವೆಂದು ತಿಳಿದು ಆಚಾರ್ಯರನ್ನು ಕುರಿತು_ಸ್ವಾಮಿಾ, ಪುತ್ರನಾದ ನನ್ನಲ್ಲಿ ನಿರಂತರವೂ ಪೂರ್ಣದಯೆಯುಳ್ಳವರಾದ ನೀವೇ ಸುರಲೋಕಕ್ಕೆ ಬಿಜಯಂಗೆಯು ಮೊದಲು ಸುರಗುರುಗಳಾದ ಬೃಹಸ್ಪತಾ ಚಾರ್ಯರನ್ನು ಕಂಡು ಅವರಡಿದಾವರೆಗಳಿಗೆ ನನ್ನ ಭಯಭಕ್ತಿ ಪೂರ್ವಕಗಳಾದ ವಂದನೆಗಳನ್ನು ತಿಳಿಸಿ ಅನಂತರದಲ್ಲಿ ಈ ಮಾತುಗಳನ್ನು ತಿಳಿಸಬೇಕು, ಅವು ಯಾವು ವೆಂದರೆ-ಮಹಾತ್ಮರಾದ ನೀವು ದೇವೇಂದ್ರನಿಗೆ ಗುರುಗಳಾಗಿ ಹೇಗೆ ಮಾನ್ಯರಾಗಿ ದ್ದೀರೋ ಅದೇ ಮೇರೆಗೆ ನನಗೂ ಗುರುಗಳೂ ಮಾನ್ಯರೂ ಆಗಿದ್ದೀರಿ, ದೇವತೆಗ ಳಿಗೂ ದೈತ್ಯರಿಗೂ ಆಜನ್ಮಸಿದ್ದ ವಾದ ವೈರವುಂಟೆಂದು ಸರ್ವಜ್ಞರಾದ ತಮಗೆ ವೇದ್ಯ ವಾಗಿಯೇ ಇದೆ, ನಮ್ಮ ಮುತ್ತಜ್ಜ ನಾದ ಹಿರಣ್ಯಕಶಿಪುವು ಸ್ವಾತಂತ್ರ್ಯದಿಂದ ಆಳು ತಿದ್ದ ತ್ರಿಲೋಕಾಧಿಪತ್ಯವನ್ನು ಆತನು ಸತ್ತು ಹೋದ ಮೇಲೆ ದೇವೇಂದ್ರನು ಒಲಾ ತ್ಕಾರದಿಂದ ಆಳುತ್ತ ಬಂದಿದ್ದಾನೆ. ಈಗ ದೇವರ ದಯೆಯಿ೦ದ ಆ ಸುರೇಂದ್ರನನ್ನು ಜಯಿಸಿ ಆ ತ್ರಿಲೋಕಾಧಿಪತ್ಯವನ್ನು ಅನುಭವಿಸುವುದಕ್ಕೆ ಯೋಗ್ಯವಾದ ಶಕ್ತಿಯು ನನಗೆ ಉಂಟಾಗಿದೆ. ಸಾಮಾನಭೇದದಂಡಗಳೆಂಬ ಚತುರೋಪಾಯ ಗಳು ರಾಜ ನೀತಿಯಲ್ಲಿ ಹೇಳಲ್ಪಟ್ಟಿರುವುವು, ಬುದ್ಧಿಶಾಲಿಗಳಾದ ಅರಸುಗಳು ಅವುಗಳಲ್ಲಿ ಮೊದ ಲನೆಯದಾದ ಸಾಮೋಪಾಯವನ್ನೇ” ವಿಶೇಷವಾಗಿ ಉಪಯೋಗಿಸಿ ರಾಜ್ಯಗಳನ್ನು ಸಂಪಾದಿಸಬೇಕೆಂದೂ ಅದು ವ್ಯರ್ಥವಾದರೆ ದಾನೋಪಾಯ ; ಅದೂ ನಿಷ್ಪಲವಾಗುವ ಪಕ್ಷ ದಲ್ಲಿ ಭೇದೋಪಾಯ ; ಕಡೆಗೆ ಅದೂ ನಡೆಯದೆಹೋಗುವ ಪಕ್ಷದಲ್ಲಿ ದಂಡೋ ಪಾಯವನ್ನು ಆಚರಣೆಗೆ ತರತಕ್ಕುದೆಂದು ತಮ್ಮಂಥ ಮಹನೀಯರು ಅಪ್ಪಣೆ ಕೊಡಿಸಿ ರುವರು. ಅದು ಕಾರಣ ಈಗ ನಾನು ತಮ್ಮ ಚರಣಸನ್ನಿಧಿಯಲ್ಲಿ ಬಿನ್ನವಿಸುವುದೇನೆಂ ದರೆ-ದೇವೇಂದ್ರನು ತನ್ನ ಪುತ್ರ ಮಿತ್ರ ಕಳತ್ರಾದಿಗಳೊಡನೆ ಕೂಡಿ ಭಗವಂತನಿಂದ ಇಂದ್ರ ಪದವಿಗೆ ನೇಮಿಸಲ್ಪಟ್ಟಿರುವ ಐರಾವತ ಕಾಮಧೇನು ಕಲ್ಪವೃಕ್ಷ ವಜ್ರಾಯುಧ ಇವ್ರ ಮೊದಲಾದ ವಸ್ತುಗಳನ್ನು ಬಿಟ್ಟು ಸ್ವಕೀಯವಾದ ಪದಾರ್ಥಗಳನ್ನು ಮಾತ್ರ ತೆಗೆದುಕೊಂಡು ತನಗೆ ಬೇಕಾದ ಕಡೆಗೆ ಹೋಗಿ ಸುಖವಾಗಿ ಬಾಳುವುದು ಉತ್ತಮ ಪಕ್ಷವು, ಅದು ಆತನ ಮನಸ್ಸಿಗೆ ಒಡಂಬಡದೆ ಹೋದರೆ ನನ್ನೊಡನೆ ಯುದ್ಧಕ್ಕೆ ನಿಂತು ತನಗೆ ಸೇರಿದ ಜನರಿಗೂ ವೃಥಾಶ್ರಮವನ್ನು ಕೊಟ್ಟು ನನ್ನಿಂದ ತಾನೂ ಪರಾ ಜಿತನಾಗಿ ಕಾರಾಗೃಹದಲ್ಲಿ ಸೇರಿ ಕಷ್ಟ ವನ್ನೂ ಅಪಮಾನವನ್ನೂ ಅನುಭವಿಸುವುದು ಎರಡನೆಯ ಪಕ್ಷವು, ತಾವು ಈ ಎರಡು ಪಕ್ಷಗಳನ್ನೂ ಇಂದ್ರನಿಗೆ ತಿಳಿಸಿ ಆತನಿಗೆ ಸಮ್ಮತವಾದ ಪಕ್ಷವನ್ನು ನನಗೆ ಅಪ್ಪಣೆ ಕೊಟ್ಟು ಕಳುಹಿಸಬೇಕೆಂದು ನಾನು ಹೇಳಿದು ದಾಗಿ ತಿಳಿಸಿ ಅವರ ಮನೋಭಿಃಪ್ರಾಯಗಳನ್ನು ತಿಳಿದು ಬಂದು ನನಗೆ ಅಪ್ಪಣೆ ಕೊಡಿ ಸಬೇಕೆಂದು ಹೇಳಿ ಬಲಿಯು ಶುಕ್ರಾಚಾರ್ಯನನ್ನು ಸುರಲೋಕಕ್ಕೆ ಕಳುಹಿಸಿ ಕೊಟ್ಟನು. ೧ ಕ