ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

246 ಕಥಾಸಂಗ್ರಹ-೫ ನೆಯ ಭಾಗ - ಅನಂತರದಲ್ಲಿ ಶುಕ್ರಾಚಾರ್ಯರು ಶಿಷ್ಯನಾದ ಬಲಿಯ ನಯಭಯೋಕ್ತಿಗಳನ್ನು ಕೇಳಿ ಮನಸ್ಸಿನಲ್ಲಿ ಸಂಪೂರ್ಣವಾಗಿ ಸಂತೋಷ ಪಡುತ್ತ ಇಂದ್ರನಿವಾಸಸ್ಥಾನವಾದ ಅಮರಾವತಿಗೆ ಬಂದು ಮೊದಲು ಬೃಹಸ್ಪತ್ವಾಚಾರ್ಯರನ್ನು ರಹಸ್ಯ ದಲ್ಲಿ ಕಂಡು ಅವರಿಂದ ಪೂಜಿತರಾಗಿ ಬಲಿಯು ಹೇಳಿದ ಮಾತುಗಳಲ್ಲಿ ಸ್ವಲ್ಪವೂ ತಪ್ಪದಂತೆ ಅವ ರೊಡನೆ ಹೇಳಿದರು, ಬೃಹಸ್ಪತ್ವಾಚಾರ್ಯರು ಆ ಮಾತುಗಳನ್ನೆಲ್ಲಾ ಕೇಳಿ ತಮ್ಮ ಮನಸ್ಸಿನಲ್ಲಿ ಚೆನ್ನಾಗಿ ಪರಿಭಾವಿಸಿ ನೋಡಿ ಶುಕ್ರಾಚಾರ್ಯರನ್ನು ಭೋಜನಾದಿ ಗಳಿಂದ ಸತ್ಕರಿಸುವ ಹಾಗೆ ತಮ್ಮ ಮನೆಯ ಜನಗಳಿಗೆ ನೇಮಿಸಿ ತಾವು ದೇವೇಂ ದ್ರನ ಬಳಿಗೆ ಬಂದು ಏಕಾಂತದಲ್ಲಿ ಕುಳಿತು ಬಲಿಯು ಶುಕ್ರಾಚಾರ್ಯರೊಡನೆ ಹೇಳಿ ಕಳುಹಿಸಿರುವ ಮಾತುಗಳನ್ನೆಲ್ಲಾ ಆತನೊಡನೆ ಹೇಳಿದರು, ದೇವರಾಜನು ಆ ಮಾತುಗಳನ್ನೆಲ್ಲಾ ಕೇಳಿ ಬಹಳ ವ್ಯಸನಾಕ್ರಾಂತನಾಗಿ ಬೃಹಸ್ಪತ್ಯಾಚಾರ್ಯರನ್ನು ಕುರಿತು-ಎಲೈ ಆಚಾರ್ಯರೇ, ಬಲಿಯು ವರಬಲದಿಂದ ಅಜೇಯನಾದ ಬಲಿಷ್ಟ ನಾಗಿದ್ದಾನೆ. ಈ ವಿಷಯದಲ್ಲಿ ಏನು ಯೋಚನೆಯನ್ನು ಮಾಡಬೇಕೋ ನನಗೆ ಸ್ವಲ್ಪವೂ ತೋಚುವುದಿಲ್ಲ, ಅದು ಕಾರಣ ಹೀಗೆ ನಡೆಯೆಂದು ತಾವು ಅಪ್ಪಣೆಯನ್ನು ಕೊಟ್ಟ ಮೇರೆಗೆ ನಾನು ನಡೆದು ಕೊಳ್ಳುವೆನು ಎಂದು ಹೇಳಿದನು. ಅದಕ್ಕೆ ಬೃಹಸ್ಸ ತ್ಯಾಚಾರ್ಯರು ಇಂದ್ರನನ್ನು ಕುರಿತು-ಎಲೈ ದೇವೇಂದ್ರನೇ, ಬುದ್ಧಿಶಾಲಿಯು ಆಲೋಚಿಸಿ ಯಾವ ಕಾರ್ಯವನ್ನಾದರೂ ಮಾಡಬೇಕೇ ಹೊರತು ಅವಿಚಾರದಿಂದ ದುಡುಕಬಾರದು, ತತ್ರಾಪಿ ಅಶುಭವಾದ ಕಾರ್ಯಗಳಿಗೆ ಕಾಲಹರಣವನ್ನು ಮಾಡಿ ನೋಡಬೇಕೆಂದು ನೀತಿಶಾಸ್ತ್ರವಚನವಿರುವುದು, ಅದು ಕಾರಣ ಇನ್ನೊಂದು ತಿಂಗಳಲ್ಲಿ ದೈತ್ಯರಾಜನಾದ ಬಲಿಯ ಮಾತುಗಳಿಗೆ ಪ್ರತ್ಯುತ್ತರನ್ನು ಹೇಳಿಕಳುಹಿಸುವೆನೆಂದು ಈಗ ಶುಕ್ರಾಚಾರ್ಯರಿಗೆ ಹೇಳಿಕಳುಹಿಸಿಬಿಟ್ಟು ತಿರುಗಿ ಬರುವೆನು, ಆ ಮೇಲೆ ಮುಂದೆ ನಡೆಯತಕ್ಕ ಕಾರ್ಯಕ್ಕೆ ತಕ್ಕ ಯೋಚನೆಯನ್ನು ಮಾಡಿ ನೋಡೋಣ ಎಂದು ಹೇಳಿ ಅಲ್ಲಿಂದ ತಿರುಗಿ ಮನೆಗೆ ಬಂದು ಭೋಜನಾದ್ಯುಪಚಾರಗಳಿಂದ ಸಮ್ಮತ ರಾಗಿ ದಿವ್ಯ ಪೀಠದಲ್ಲಿ ಕುಳಿತಿರುವ ಶುಕ್ರಾಚಾರ್ಯರನ್ನು ಕಂಡು--ಬಲಿರಾಜನು ತಮ್ಮೊಡನೆ ಹೇಳಿಕಳುಹಿಸಿದ ಮಾತಿಗೆ ಇನ್ನೊಂದು ತಿಂಗಳಲ್ಲಿ ಪ್ರತ್ಯುತ್ತರವನ್ನು ಹೇಳು ವೆನು ಎಂದು ಇಂದ್ರನು ಹೇಳಿದನೆನಲು ; ತರುವಾಯ ಶುಕ್ರಾಚಾರ್ಯರು ಅಲ್ಲಿಂದ ಹೊರಟು ಬಲಿಯ ಬಳಿಗೆ ಬಂದು ಬೃಹಸ್ಪತ್ಯಾಚಾರ್ಯರು ಹೇಳಿದ ಮಾತನ್ನು ಆತನಿಗೆ ತಿಳಿಸಲು ; ಆತನು ಬಹಳ ವಿಚಾರಪರನೂ ಸತ್ಯಸಂಧನೂ ಆದುದ ರಿಂದ ಹಾಗೇ ಆಗಲಿ ಎಂದು ಒಡಂಬಟ್ಟು ಸಮಾಧಾನದಿಂದಿದ್ದನು. ಅತ್ತಲಾ ಬೃಹಸ್ಪತ್ವಾಚಾರ್ಯರು ಇ೦ದ್ರನನ್ನು ಕರೆದು ಕೊಂಡು ಸತ್ಯಲೋ ಕಕ್ಕೆ ಹೋಗಿ ಬ್ರಹ್ಮದೇವರನ್ನು ವಂದಿಸಿ--ಸ್ವಾಮಿಾ, ಚತುರ್ಮುಖನೇ, ಒಂದು ಮನ್ವಂತರದ ವರೆಗೂ ಈ ಇಂದ್ರನು ತ್ರಿಲೋಕಾಧಿಪತ್ಯವನ್ನು ಮಾಡಿ ಕೊಂಡಿರತಕ್ಕು ದೆಂದು ಮೊದಲು ನೀನೇ ಕಟ್ಟು ಮಾಡಿ ನೇಮಿಸಿದೆ. ಈಗ ಮಧ್ಯಕಾಲದಲ್ಲಿ ವರಬಲ