ವಾಮನಾವತಾರದ ಕಥೆ 247 ಗರ್ವಿತನಾದ ಬಲಿಯು ಇವನ ಸ್ವರ್ಗಪದವಿಯನ್ನು ಕಿತ್ತು ಕೊಂಡು ತಾನು ಅನುಭವಿ ಸಬೇಕೆಂದು ಹೇಳಿ ಕಳುಹಿಸಿದ್ದಾನೆ, ಮಹೋನ್ನತ ತೇಜೋವಿರಾಜಮಾನನಾದ ನಿನ್ನ ಕಣ್ಣುಗಳ ಮುಂದೆಯೇ ನಿನ್ನ ಆಜ್ಞೆಗೆ ಭಂಗವುಂಟಾದರೆ ಅದರಿಂದುಂಟಾಗುವ ಅಪ ಮಾನವು ನಿನಗೇ ಹೊರತು ಇಂದ್ರನಿಗೇನೂ ಇಲ್ಲವಷ್ಟೆ ! ಈ ಭಾಗದಲ್ಲಿ ಸರ್ವಜ್ಞಚಿ ತ್ರಕ್ಕೆ ಸಮಾಧಾನವಾದ ವಿಷಯವಾವುದು ? ಮತ್ತು ಶರಣಾಗತನಾದ ಈ ಇಂದ್ರ ನಿಗೆ ಅಪ್ಪಣೆಯೇನು ? ಎಂದು ಕೇಳಿದನು. ಆ ಮಾತುಗಳನ್ನು ಕೇಳಿ ಚತುರ್ಮುಖ ಬ್ರಹ್ಮನು--ಇದಕ್ಕೆ ನಾನೇನು ಮಾಡಲಿ ? ನಾನು ಹೇಳತಕ್ಕ ಉತ್ತರವು ತಾನೆ ಯಾವು ದಿರುವುದು ? ತಪಸ್ಸನ್ನು ಮಾಡಿದವರಿಗೆ ಬೇಕಾದ ವರಗಳನ್ನು ಕೊಡುವುದು ಮಾತ್ರ ನನ್ನ ಧರ್ಮವು, ಹಾಗೆ ಕೊಡುವುದಕ್ಕೆ ಮಾತ್ರ ನನಗೆ ಶಕ್ತಿಯುಂಟೇ ಹೊರತು ನಿಗ್ರಹಿಸುವ ಶಕ್ತಿಯಿಲ್ಲ, ಅದು ಕಾರಣ ನೀವು ಜಗದೀಶ್ವರನಾದ ಶಿವನ ಸನ್ನಿಧಿಗೆ ಹೋಗಿ ಆತನೊಡನೆ ಈ ಸಂಗತಿಯನ್ನು ಹೇಳಿಕೊಳ್ಳಿರಿ. ಒಂದು ವೇಳೆ ಆತನೇನಾ ದರೂ ಒಂದು ಉಪಾಯದಿಂದ ನಿಮಗೆ ಸಹಾಯವನ್ನು ಮಾಡಿದರೂ ಮಾಡಬಹುದು. ಹೋಗಿರಿ ಎಂದು ಕಳುಹಿಸಿಬಿಟ್ಟನು. ಆ ಮೇಲೆ ಅವರು ಕೈಲಾಸಕ್ಕೆ ಬಂದು ಪರಮೇ ಶ್ವರನನ್ನು ಕಂಡು ನಮಸ್ಕರಿಸಿ ತಮಗೆ ಬಲಿಯು ಹೇಳಿ ಕಳುಹಿಸಿದುದನ್ನೂ ತಾವು ಆ ಸಂಗತಿಯನ್ನು ಚತುರ್ಮುಖ ಬ್ರಹ್ಮನಲ್ಲಿ ಹೇಳಿಕೊಂಡುದಕ್ಕೆ ಆತನು ಹೇಳಿದುದನ್ನೂ ಹೇಳಿ--ಇಲ್ಲಿಂದ ಮುಂದೆ ಸರ್ವಜ್ಞನಾದ ನೀನು ಏನು ಅಪ್ಪಣೆಯನ್ನು ಕೊಡುವಿ ? ಎಂದು ಕೇಳಿಕೊಂಡರು. ಆಗ ಈಶ್ವರನು--ನಾನೂ ಸರೋಜಸಂಭವನಂತೆ ಕೊಡುವು ದಲ್ಲದೆ ನಿಗ್ರಹಿಸುವುದನ್ನು ಅನುಮೋದಿಸಲಾರೆನು. ಇಂಥ ಸಂದರ್ಭದಲ್ಲಿ ಪ್ರಾಪ್ತ ವಾದ ಮೃತ್ಯುವನ್ನು ಯಾವುದಾದರೂ ಒಂದು ಉಪಾಯದಿಂದ ತಪ್ಪಿಸಿ ಕಾಪಾಡುವ ಶಕ್ತಿಯು ವಿಷ್ಣುವನ್ನೇ ಹೊಂದಿರುವುದಲ್ಲದೆ ಮತ್ತಾರಿಂದಲೂ ತೀರದು. ಆದುದರಿಂದ ನೀವು ಆತನ ಬಳಿಗೆ ಹೋಗಿ ಈ ಸಂಗತಿಯನ್ನು ಹೇಳಿಕೊಳ್ಳಿರಿ ಎಂದು ಅಪ್ಪಣೆಯನ್ನು ಕೊಟ್ಟು ಅವರನ್ನು ಕಳುಹಿಸಿದನು, ಆ ಮೇಲೆ ಅವರು ಕ್ಷೀರಸಾಗರಕ್ಕೆ ಬಂದು ಮಹಾ ವಿಷ್ಣುವನ್ನು ಕಂಡು ನಮಸ್ಕರಿಸಿ ನಡೆದಿರುವ ಸಂಗತಿಗಳನ್ನೆಲ್ಲಾ ಯಥಾವತ್ತಾಗಿ ವಿಜ್ಞಾಪಿಸಿ ಕಾಪಾಡಬೇಕೆಂದು ಬೇಡಿಕೊಂಡರು. ಅನಂತರದಲ್ಲಿ ಮಹಾವಿಷ್ಣುವು ಬೃಹಸ್ಪತಾಚಾರ್ಯನನ್ನು ಕುರಿತು-ಎಲೈ ಸುರರಾಜಗುರುವೇ, ಬಲಿಯು ಮಹಾ ಧರ್ಮಿಷ್ಟನು. ಇದಲ್ಲದೆ ಅವನು ನನಗೆ ಪರಮ ಭಕ್ತನು. ಆತನನ್ನು ನಿಗ್ರಹಿಸುವ ಕಾರ್ಯವು ನನ್ನಿಂದ ಎಷ್ಟು ಮಾತ್ರವೂ ಆಗಲಾರದು. ನೀನು ಮಹಾ ಬುದ್ದಿ ಸಂಪನ್ನನು, ನಿನಗೆ ತಿಳಿಯುವಂಥ ಉಪಾಯ ಗಳು ಯಾರಿಗೂ ತಿಳಿಯುವುದಿಲ್ಲ ವು. ಅದು ಕಾರಣ ನೀನೇ ಈ ಕಾರ್ಯವನ್ನು ನಿರ್ವ' ಹಿಸತಕ್ಕ ಯೋಚನೆಯನ್ನು ಮಾಡಿ ಈ ಇಂದ್ರನನ್ನು ಕಾಪಾಡು ಎಂದು ಹೇಳಿ ಅದ್ಧ ಶ್ಯನಾದನು, ಆ ಮೇಲೆ ಬೃಹಸ್ಪತ್ಯಾಚಾರನು ತುಂಬಿದ ದುಃಖದಿಂದ ಕಂದಿದ ಮುಖ ವುಳ್ಳ ಇಂದ್ರನನ್ನು ಕರೆದುಕೊಂಡು ಹಿಂದಿರುಗಿ ಅಮರಾವತಿಗೆ ಬಂದು ಇ೦ದ್ರನನ್ನೂ ಆತನ ಪಟ್ಟದರಸಿಯಾದ ಶಚೀದೇವಿಯನ್ನೂ ಆತನ ಮಗನಾದ ಜಯಂತನನ್ನೂ ಈ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೭
ಗೋಚರ