ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

248 ಕಥಾಸಂಗ್ರಹ-೫ ನೆಯ ಭಾಗ ಮೂರು ಜನರನ್ನು ಮಾತ್ರ ಸ್ವರ್ಗದಿಂದ ಹೊರಡಿಸಿಕೊಂಡು ಬಂದು ಇಂದ್ರನ ತಂದೆ ಯಾದ ಕಶ್ಯಪರ್ಷಿಯ ಆಶ್ರಮದಲ್ಲಿ ಒಂದೆಡೆಯಲ್ಲಿರಿಸಿ--ನೀವು ಇಲ್ಲಿರತಕ್ಕುದು. ನಾನು ಬೇಗ ಬರುವೆನು ಎಂದು ಹೇಳಿ ಅಲ್ಲಿಂದ ಹೊರಟು ಶೀಘ್ರವಾಗಿ ಶೋಣಿತಪ್ಪು ರಕ್ಕೆ ಬಂದು ಮೊದಲು ಶುಕ್ರಾಚಾರ್ಯರನ್ನು ಕಂಡು ಅವರಿಂದ ಪೂಜಿತನಾಗಿ ಅವ ರನ್ನು ಸಂಗಡ ಕರೆದು ಕೊಂಡು ಬಲಿಯ ಬಳಿಗೆ ಬರಲು ; ಆತನು ಇವರು ಬರುವುದನ್ನು ಕಂಡು ಸಿಂಹಾಸನದಿಂದ ಝಗ್ಗನೆದ್ದು ಎದುರಾಗಿ ಬಂದು ಬೃಹಸ್ಪತ್ಯಾಚಾರರನ್ನು ವಂದಿಸಿ ಕೈಹಿಡಿದು ಕರೆದು ಕೊಂಡು ಬಂದು ನವರತ್ನ ಖಚಿತವಾದ ಚಿನ್ನದ ಕಾಲ್ಕಣೆ ಯ ಮೇಲೆ ಕುಳ್ಳಿರಿಸಿ ಸಂತೋಷದಿಂದ ಕೂಡಿ ಷೋಡಶೋಪಚಾರಗಳಿಂದ ಪೂಜಿಸಿ ಕೈಮುಗಿದು ನಿಂತುಕೊಂಡು-ಸ್ವಾಮಿ, ಈ ದಿವಸ ತಾವು ನನ್ನ ಮನೆಗೆ ದಯ ಮಾಡಿಸಿದುದು ಬಡವನ ಮನೆಗೆ ಭಾಗ್ಯನಿಧಿಯು ಬಂದಂತಾಯಿತು. ಮಹಾತ್ಮರಾದ ತಮ್ಮ ಆಗಮನದಿಂದಲೂ ಪುಣ್ಯದಾಯಕವಾದ ತಮ್ಮ ದರ್ಶನದಿಂದಲೂ ನಾನು ಧನ್ಯ ನಾದೆನು, ಮತ್ತು ಕೃತಕೃತ್ಯನಾದೆನು, ನನ್ನ ಕುಲಕೋಟಿಯೆಲ್ಲಾ ಪಾವನವಾಯಿತು ಎಂದು ವಿವಿಧವಾಗಿ ಕೊಂಡಾಡಿದನು. ಆನಂತರದಲ್ಲಿ ಬೃಹಸ್ಪತ್ಯಾಚಾರನು ಬಲಿಯ ನ್ನು ಕುರಿತು-ಎಲೈ ದೈತ್ಯರಾಜೇಂದ್ರನೇ, ನಿನ್ನ ಸುಗುಣಗಳಿಗೂ ನಿನ್ನ ಸತ್ಕಾರಕ್ಕೂ ನಾನು ಸಂತುಷ್ಟನಾದೆನು. ಇಂದ್ರನು ನೀತಿಸಂಪನ್ನ ನಾದ ನಿನ್ನ ಸಾಮೋಕ್ಕಿಗಳಿಗೆ ವಿಶೇಷವಾಗಿ ಸಂತೋಷಪಟ್ಟು ತನ್ನ ಹೆಂಡತಿಯಾದ ಶಚೀದೇವಿಯನ್ನೂ ಪುತ್ರನಾದ ಜಯಂತನನ್ನೂ ಜತೆಯಲ್ಲಿ ಕರೆದುಕೊಂಡು ಇಂದ್ರಪದವಿಗೆ ಉಚಿತವಾದ ಸಕಲೈಶ್ಯ ರ್ಯವನ್ನೂ ನಿನಗೋಸ್ಕರ ಬಿಟ್ಟು ಹೊರಟು ಈ ಸಂಗತಿಯನ್ನು ನಿನಗೆ ತಿಳಿಸುವಂತೆ ನನ್ನನ್ನು ಇಲ್ಲಿಗೆ ಕಳುಹಿಸಿ ಹೋದನು ಎಂದು ಹೇಳಿದನು, ಆ ಮಾತುಗಳನ್ನು ಕೇಳಿ ದೈತ್ಯರಾಜನಾದ ಬಲಿಯು ಸಂತುಷ್ಟನಾಗಿ ಸಕಲ ದೈತ್ಯಬಲದೊಡನೆ ಕೂಡಿ ಗುರು ಶುಕ್ರರನ್ನೂ ಸಂಗಡ ಕರೆದು ಕೊಂಡು ಅತಿ ಸಂಭ್ರಮದಿಂದ ಅಮರಾವತಿಗೆ ಬಂದನು. ಅನಂತರದಲ್ಲಿ ಬೃಹಸ್ಪತ್ಯಾಚಾರರು ಆಗ್ಲಿಯೇ ಮೊದಲಾದ ದಿಗೀಶರನ್ನೂ ವಸುಗಳು ಮರುತ್ತುಗಳು ಆದಿತ್ಯರು ಇವರೇ ಮೊದಲಾದ ಸರ್ವ ದೇವತೆಗಳನ್ನೂ ಯಕ್ಷ ಕಿನ್ನರ ಕಿಂಪುರುಷ ಗರುಡ ಗಂಧರ್ವ ಅಪ್ಪರೋರಗರೇ ಮುಂತಾದವರನ್ನೂ ಕರಿಸಿ ಸುಮುಹೂರ್ತದಲ್ಲಿ ಸುಧರ್ಮಾನಾಮಕವಾದ ಮಹಾ ಸಭೆಯಲ್ಲಿ ಪರಿಶೋಭಿ ಸುತ್ತಿರುವ ದಿವ್ಯಸಿಂಹಾಸನಾಗ್ರದಲ್ಲಿ ಬಲಿಯನ್ನು ಕುಳ್ಳಿರಿಸಿ ತ್ರಿಲೋಕಾಧಿಪತ್ಯೋಚಿ ತವಾದ ಪಟ್ಟಾಭಿಷೇಕವನ್ನು ಮಾಡಿ ಬಲೀಂದ್ರನೆಂದೂ ಹೆಸರು ಕೊಟ್ಟು ಆಶೀರ್ವಾದ ವನ್ನು ಮಾಡಿದನು, ಆ ಬಳಿಕ ಸರ್ವರೂ ಬಂದು ಬಲಿಚಕ್ರವರ್ತಿಗೆ ಕೈಗಾಣಿಕೆಗಳನ್ನು ಕೊಟ್ಟು ಕಾಣಿಸಿಕೊಂಡರು. ಆಗ ತ್ರಿಭುವನಾಧಿಪತ್ಯಾತಿಸಂತುಷ್ಟನಾದ ಬಲೀಂದ್ರ ನು ವಶಿಷ್ಠಾದಿ ಬ್ರಹ್ಮರ್ಷಿಗಳಿಗೂ ನಾರದಾದಿ ದೇವರ್ಷಿಗಳಿಗೂ ರಾಜರ್ಷಿಗ ಳಿಗೂ ಸಮಸ್ತ ದಿಕ್ಷಾಲಕರೇ ಮೊದಲಾದವರಿಗೂ ಯಥಾಯೋಗ್ಯವಾಗಿ ದಿವ್ಯಭೋ ಜನ ಧನಕನಕವಸ್ತ್ರಾಭರಣ ಗಂಧಮಾಲ್ಯಾದಿಗಳಿಂದ ಸತ್ಕಾರವನ್ನು ಮಾಡಿಸಿ ಸಂತೋ ಷಪಡಿಸಿ ಸರ್ವಸಮ್ಮತಿಯಿಂದ ಸ್ವರ್ಗ ಮರ್ತ್ಯ ಪಾತಾಳಗಳೆಂಬ ಮೂರು ಲೋಕಗಳ