ಪುಟ:ಕಥಾ ಸಂಗ್ರಹ - ಭಾಗ ೨.djvu/೨೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವಾಮನಾವತಾರದ ಕಥೆ 253 ನೀವು ಅಹೋರಾತ್ರಿಗಳಲ್ಲೂ ನನಗೆ ಶ್ರೇಯಶ್ಚಿಂತಕರಾದ ಗುರುಗಳಾಗಿದ್ದು ಕೊಂಡು ಈ ಸಮಯದಲ್ಲಿ ನನಗೆ ಇಂಥ ಮಾತುಗಳನ್ನು ಹೇಳಬಹುದೇ ? ನನ್ನೊಡೆಯನಾದ ಮಹಾವಿಷ್ಣುವು ಪ್ರತ್ಯಕ್ಷನಾಗಿ ಬಂದು ನನ್ನನ್ನು ಕೇಳಿದರೆ ಈ ಅಶಾಶ್ವತವಾದ ತ್ರಿಲೋಕಾಧಿಪತ್ಯವು ಒಂದು ಮಾತ್ರವೇ ಅಲ್ಲ, ನನ್ನ ಪತ್ನಿ ಪುತ್ರ ಪ್ರಾಣಗಳನ್ನಾ ದರೂ ಸಂತೋಷದಿಂದ ಆತನ ಪಾದಗಳಿಗೆ ಒಪ್ಪಿಸಿಬಿಡುವೆನು. ಇದಕ್ಕಿಂತಲೂ ಸಂತೋಷಕರವಾದ ಕಾರ್ಯವು ಯಾವುದೂ ಇಲ್ಲವೆಂದು ನಾನು ನಿಶ್ಚಯವಾಗಿ ನಂಬಿ ದ್ದೇನೆ ಎಂದು ಹೇಳಿ ತಿರಿಗಿ ವಾಮನನನ್ನು ಕುರಿತು-ಎಲೈ ಮಹಾ ತೇಜಸ್ವಿಯಾದ ಬ್ರಹ್ಮಚಾರಿಯೇ, ಈಗ ಮಹಾತ್ಮನಾದ ನೀನು ಈ ನನ್ನ ಯಾಗಶಾಲೆಗೆ ಯಾವ ಅಪೇ ಕೈಯಿಂದ ಬಂದಿರುವಿ ? ನನ್ನ ಪ್ರಾಣಗಳೇ ಮೊದಲಾದ ಸಮಸ್ತ ವಸ್ತುಗಳೂ ನಿನ್ನ ಅಧೀನವಾಗಿರುವುವು, ನಿನಗೆ ಬೇಕಾದುದನ್ನು ಸಂತೋಷದಿಂದ ಕೇಳಬಹುದು ಎಂದ ನು. ಆಗ ವಾಮನನು--ಎಲೈ ಸುಗುಣಮಣಿಗಣಭೂಷಿತನಾದ ದೈತ್ಯಚಕ್ರೇಶ್ವರನೇ, ಬ್ರಹ್ಮಚರ್ಯಾಶ್ರಮದಲ್ಲಿದ್ದು ಕೊಂಡು ಸದಾಕಾಲದಲ್ಲೂ ಬ್ರಹ್ಮದಲ್ಲಿ ಅನುರಕ್ತತೆ ಯುಳ್ಳವನಾದ ನನಗೆ ನಿನ್ನ ಸಕಲವಿಧವಸ್ತುಗಳಿಂದ ಏನೂ ಪ್ರಯೋಜನವಿಲ್ಲ. ನಾನು ಇತರರ ಬಾಧೆಯಿಲ್ಲದಂತೆ ಸ್ವತಂತ್ರ ದಿಂದ ತಪಸ್ಸು ಮಾಡಿಕೊಂಡಿರುವುದ ಕ್ರೋಸ್ಕರ ಈ ನನ್ನ ಪುಟ್ಟ ಹೆಜ್ಜೆಗಳಲ್ಲಿ ಮರು ಹೆಜ್ಜೆಗಳಷ್ಟು ಭೂಮಿಯನ್ನು ಮಾತ್ರ ನನಗೆ ಧಾರೆಯೆರೆದು ಕೊಟ್ಟರೆ ಸಾಕು, ಅದರಿಂದ ಸಂತೃಪ್ತನಾಗುವೆನು ಎಂದು ಹೇಳಿದನು. ಆಗ ಬಲೀಂದ್ರನು ಪರಮಸಂತೋಷದಿಂದ ಕೂಡಿದವನಾಗಿ ತನ್ನ ಹೆಂಡತಿಯನ್ನು ಕರೆದು ಗಿಂಡಿಯಲ್ಲಿ ನೀರನ್ನು ತೆಗೆದುಕೊಂಡು ಬಾ ಎಂದು ಹೇಳಿ ತರಿಸಿ ತನ್ನ ಕೈಯಲ್ಲಿ ಶ್ರೀತುಲಸೀದಳವನ್ನು ಹಿಡಿದುಕೊಂಡು ವಾಮನನ ಕೈಯ ಮೇಲೆ ತನ್ನ ಕೈಯನ್ನಿಟ್ಟು --ಇಗೋ, ನಿನ್ನ ಅಡಿಯಲ್ಲಿ ಮರಡಿಯಷ್ಟು ಭೂಮಿ ಯನ್ನು ಸತ್ಯವಾಗಿ ಕೊಟ್ಟಿದ್ದೇನೆ ಎಂದು ಹೇಳಿ, ನೀರನ್ನು ಬಿಡು ಎಂದು ತನ್ನ ಹೆಂಡ ತಿಗೆ ಹೇಳಲು ; ಆಕೆಯು ನೀರನ್ನು ಸುರಿಯುವುದಕ್ಕೆ ಪ್ರಯತ್ನಿಸಿದಾಗ ಶುಕ್ರಾಚಾ ರ್ಯನು ಆ ಗಿಂಡಿಯ ನೀರು ಬರುವ ದ್ವಾರದಲ್ಲಿ ಹೋಗಿ ಕುಳಿತು ಕೊಂಡುದರಿಂದ ನೀರು ಬೀಳದೆ ಹೋಯಿತು, ವಾಮನನು ಅದನ್ನು ಕಂಡು ಓಹೋ ! ಈ ಗಿಂಡಿಯ ನೀರು ಹೊರಗೆ ಬರುವ ಕನ್ನದಲ್ಲಿ ಏನೋ ಕಸವು ಸಿಕ್ಕಿಕೊಂಡಿರಬೇಕೆಂದು ಹೇಳಿ ಒಂದು ದರ್ಭೆಯನ್ನು ತೆಗೆದು ಕೊಂಡು ಅದರ ಕನ್ನ ದಲ್ಲಿ ಚುಚ್ಚಲು ; ಆ ದರ್ಭಾಗ್ರವು ಶುಕ್ರಾಚಾರ್ಯನ ಕಣ್ಣಿಗೆ ತಗುಲಿದುದರಿಂದ ಆತನದೊಂದು ಕಣ್ಣು ಕುರುಡಾಯಿತು. ಅನಂತರದಲ್ಲಿ ಆತನು ಹೊರಟು ಹೊರಗೆ ಬಂದನು, ನೀರು ಸರಿಯಾಗಿ ಬಿದ್ದಿತು. ಅನಂತರದಲ್ಲಿ ವಾಮನನು ತನ್ನ ಕುಬ್ಬ ರೂಪನ್ನು ಬಿಟ್ಟು ಮಹತ್ತರವಾದ ತ್ರಿವಿಕ್ರಮ ರೂಪನ್ನು ಧರಿಸಿ ಆಕಾಶಕ್ಕೂ ಭೂಮಿಗೂ ಒತ್ತು ಕೊಟ್ಟ ಹಾಗೆ ಬೆಳೆದು ಒಂದು ಅಡಿಯಿಂದ ಭೂಲೋಕವನ್ನೆಲ್ಲಾ ಅಳೆದು ಮತ್ತೊಂದಡಿಯಿಂದ ಊರ್ದ್ವಲೋ ಕವನ್ನೆಲ್ಲಾ ಅಳೆಯುವುದಕ್ಕೆ ತೊಡಗಿದಾಗ ಬ್ರಹ್ಮಾಂಡ ಕಟಾಹಕ್ಕೆ ಈತನ ಹೆಬ್ಬೆಟ್ಟಿನ ತುದಿಯುಗುರು ತಗುಲಿದುದರಿಂದ ನಿರ್ಮಲವಾದ ಗಗನ ಗಂಗೋದಕವು ಹೊರಟು