ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವತಾರದ ಕಥೆ 279 ರಿಸಿಕೊಂಡಿರುವರೋ ಅಂಥವರಲ್ಲೇ ಇದ್ದು ಕೊಂಡು ತನಿರ್ಣಯಗಳನ್ನೂ ಧರ್ಮ ರಹಸ್ಯಗಳನ್ನೂ ಉಪದೇಶಿಸಿ ಅವರಿಗೆ ಇಷ್ಟಾರ್ಥಗಳು ಸಿದ್ದಿ ಸುವಂತೆ ಆಶೀರ್ವಾದ ವನ್ನು ಮಾಡುತ್ತ ಅವರ ಶ್ರೇಯಸ್ಸನ್ನೇ ಪ್ರಾರ್ಥಿಸಿಕೊಂಡಿರುವೆವು ಎಂದು ಹೇಳಲು ; ಅವರು ಆ ಮಾತನ್ನು ಕೇಳಿ ಬಹು ಸಂತೋಷವುಳ್ಳವರಾಗಿ-ಆತನಿಗೆ ಒಂದು ಮಠವನ್ನು ಕಟ್ಟಿಸಿ ಅಲ್ಲಿರಿಸಿ ಪ್ರಾತಃಕಾಲದಲ್ಲೂ 'ಸಾಯ೦ಕಾಲದಲ್ಲೂ ಆತನ ಬಳಿಗೆ ಹೋಗಿ ವೆಂದಿಸಿ ಬರುತ್ತಿದ್ದರು, ಆ ಮೇಲೆ ಆ ಕಪಟ ಬೌದ್ಧ ವೇಷಧಾರಿಯಾದ ಹರಿಯು ತಾನು ಚತುರೋಪಾಯದಿಂದ ಮಾಡಿದ ಬುದ್ಧ ಮತತತ್ವವನ್ನು ಅವರಿಗೆ ಬೋಧಿಸುತ್ತ ಲೌಕಿಕಯುಕ್ತಿಯಿಂದ....ಈ ಶಾಸ್ತ್ರವೇ ಸತ್ಯವಾದುದು. ಇತರವಾದ ವೇದಶಾಸ್ತ್ರಗಳೆಲ್ಲಾ ಅಸತ್ಯವಾದುವುಗಳು ಎಂದು ಅವರು ಸಂಪೂರ್ಣವಾಗಿ ನಂಬುವ ಹಾಗೆ ಮಾಡಲು ; ಅವರು ಆ ಮಾತುಗಳಿಂದ ಮೋಹಿತರಾಗಿ ವೇದೋಕ್ತ ಕರ್ಮಗಳ ನ್ನೆಲ್ಲಾ ಬಿಟ್ಟು ಸೌಗತಧರ್ಮವನ್ನು ಕೈಕೊಂಡು ತಮ್ಮ ಮನಸ್ಸಿಗೆ ಬಂದ ಹಾಗೆ ನಡೆ ಯುವುದಕ್ಕೆ ಆರಂಭಿಸಿದರು. ಆ ಮೇಲೆ ಈಶ್ವರನು ದೇವತೆಗಳಿಗೆ ಕ್ಷೇಮವನ್ನುಂಟುಮಾಡುವುದಕ್ಕೆ ಇದು ಸಮಯವೆಂದು ಆ ರಕ್ಕಸರೊಡನೆ ಯುದ್ದೋನ್ಮುಖನಾಗಿ--ಭೂಮಿಯ ರಥವ್ರ ಅದಕ್ಕೆ ಸೂರ್ಯಚಂದ್ರರೇ ಗಾಲಿಗಳು, ಚತುರ್ವೇದಗಳೇ ಕುದುರೆಗಳು, ಚತುರ್ಮು ಖಬ್ರಹ್ಮನೇ ಸಾರಥಿಯು, ಮೇರುಪರ್ವತವೇ ಧನುಸ್ಸು, ಅದಕ್ಕೆ ಆದಿಶೇಷನೇ ಹೆದೆಯು, ವಿಷು ವೇ ಬಾಣವು, ಈ ರೀತಿಯಾಗಿ ಸಿದ್ದ ಮಾಡಿಕೊಂಡು ಆ ಪುರತ್ರಯಗಳು ಸೇರುವ ಕಾಲವನ್ನು ನಿರೀಕ್ಷಿಸಿಕೊಂಡಿದ್ದು ಕಡೆಗೆ ರಾಕ್ಷಸ ಸಮೇತಗಳಾದ ಆ ಪಟ್ಟಣಗ ಳನ್ನು ಸುಟ್ಟು ಬೂದಿಮಾಡಿ ದೇವತೆಗಳಿಗೆ ಕ್ಷೇಮವನ್ನು ಂಟುಮಾಡಿದನು, “ತರು ವಾಯ ಲೋಕದಲ್ಲಿ ಬಹುಜನರು ಆಗ ವಿಷ್ಣು ಕಲ್ಪಿತ ಶಾಸ್ತ್ರಧರ್ಮವನ್ನು ಅನುಸರಿಸಿ ನಡೆದು ಕೊಳ್ಳುತ್ತ ಬೌದ್ದರೆನ್ನಿಸಿಕೊಂಡಿದ್ದಾರೆ. _9, THE TENTH OR HORSE INCARNATION. ೯, ಕಲ್ಪವತಾರದ ಕಥೆ. ಕಲಿಯುಗದ ಅಂತ್ಯದಲ್ಲಿ ಭೂಲೋಕದೊಳಗೆ ಮೈಚ ಕಿರಾತ ಶಕ ಚೀಣ ರೆಂಬುವರೇ ಮೊದಲಾದ ದುಷ್ಟಜನರು ಪ್ರಭುಗಳಾಗಿ ಪ್ರಬಲಿಸಿ ವೇದಮಾರ್ಗವನ್ನೂ ಬ್ರಾಹ್ಮಣ್ಯವನ್ನೂ ಯಜ್ಞಾದಿ ಸತ್ಕರ್ಮಗಳನ್ನೂ ಕೆಡಿಸಿ ಜಾತಿಸಂಕರಗಳನ್ನುಂಟು ಮಾಡುತ್ತ ಭೂಮಂಡಲವನ್ನೆಲ್ಲಾ ಆಕ್ರಮಿಸಿಕೊಳ್ಳುತ್ತ ಬರುತ್ತಿರಲು ; ಕೆಲ ಕಾಲದ ಮೇಲೆ ತಾಮ್ರಪರ್ಣಿ ಎಂಬೊಂದು ನದೀತೀರದ ಅಗ್ರಹಾರನಿವಾಸಿಯಾದ ಒಬ್ಬ ಬ್ರಾಹ್ಮಣನಿಗೆ ಮಹಾವಿಷ್ಣುವು ಕುಮಾರಭಾವದಿಂದ ಆಶ್ವಮುಖನಾಗಿ ಅವತರಿಸಿ ಕಲ್ಕಿಯೆಂಬ ಹೆಸರುಳ್ಳವನಾಗಿ ಕುದುರೆಯ ಮೇಲೆ ಏರಿಕೊಂಡು ಅಸಹಾಯ ಶೂರ ನಾಗಿ ಹೊರಟು ತನ್ನ ಕೈ ಕತ್ತಿಯಿಂದ ವೇದಮಾರ್ಗನಿಂದಕರಾಗಿ ದುಷ್ಟರಾದ ಜನರ ನ್ನೆಲ್ಲಾ ಕಡಿದು ಕೊಂದು ಶಿಷ್ಟರನ್ನೆಲ್ಲಾ ಸಂರಕ್ಷಿಸಿ ಧರ್ಮಸಂಸ್ಥಾಪನೆಯನ್ನು ಮಾಡಿ ಭೂಲೋಕವನ್ನು ಸಂರಕ್ಷಿಸುವನು.