ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


278 ಕಥಾಸಂಗ್ರಹ-೫ ನೆಯ ಭಾಗ ಇಲ್ಲ, ಈ ದುರಾತ್ಮರು ಇಂಥ ಮಹಾವರಗಳನ್ನು ಕೇಳಿಕೊಂಡರಲ್ಲಾ ! ಶಿವ ಶಿವಾ ! ಈ ಅನಿವಾರ್ಯವಾದ ಕಾರ್ಯಕ್ಕೆ ನಾನು ಮಾಡತಕ್ಕೆ ಯೋಚನೆ ಯಾವುದು ಎಂದು ಒಂದು ಗಳಿಗೆಯ ವರೆಗೂ ಯೋಚಿಸಿ ತರುವಾಯ ಆ ಮರು ಮಂದಿಯನ್ನೂ ಕುರಿತು-ನಿಮ್ಮ ಕೋರಿಕೆಯಂತೆ ನಿಮಗೆ ಆಕಾಶದಲ್ಲಿ ವರು ಪಟ್ಟಣಗಳು ಉಂಟಾಗುವುವು, ಮಹಾಶೂರರಾದ ನೀವು ಇಂದ್ರಾದಿದೇವತೆಗಳೆಂಬ ನೊರಜುಗ ಳನ್ನು ಒಡೆದು ನಿಮ್ಮ ಸೇವೆ ಮಾಡಿಸಿಕೊಳ್ಳಿರಿ, ನಿಮ್ಮ ಮರು ಪಟ್ಟಣಗಳು ದಿವ್ಯ ಸಹಸ್ರ ಸಂವತ್ಸರಗಳಿಗೊಂದುಸಾರಿ ಒಂದು ಸ್ಥಾನದಲ್ಲಿ ಕೂಡುವುವು.” ಆ ವೇಳೆಯಲ್ಲಿ ಯಾವ ಮಹಾತ್ಮನು ಆ ನಿಮ್ಮ ಮರು ನಗರಗಳನ್ನು ಒಂದೇ ಬಾಣದಿಂದ ಕಡಿದು ಹಾಕುವನೋ ಆ ಸಮಯದಲ್ಲಿ ನಿಮಗೆ ಸಾವ್ರಂಟಾಗುವುದೇ ಹೊರತು ಅನ್ಯಥಾ ನೀವು ಯಾವ ವಿಧದಿಂದಲೂ ಸಾಯುವುದಿಲ್ಲ ಹೋಗಿರಿ ಎಂದು ಹೇಳಿ ಅದೃಶ್ಯನಾದನು. ತರುವಾಯ ಆ ದುಷ್ಟ ರು ಅಂಥ ಕಾಲವು ಬಂದಾಗ ನೋಡಿಕೊಳ್ಳೋಣ ಎಂದು ಸಂತೋಷದಿಂದ ಕೂಡಿ ಅಲ್ಲಿಂದ ಹೊರಟುಬಂದು ದೈತ್ಯರ ಬಡಗಿಯಾದ ಮಯನನ್ನು ಕರಿಸಿ ಆಕಾಶದಲ್ಲಿ ತ್ರಿಪುರಗಳನ್ನು ನಿರ್ಮಾಣಮಾಡಿಸಿಕೊಂಡು ಇಂದ್ರಾ ದಿ ದೇವತೆಗಳನ್ನೆಲ್ಲಾ ಬಡಿದು ಅವರಿಂದ ನಿರಂತರದಲ್ಲೂ ಸೇವೆಯನ್ನು ಮಾಡಿಸಿಕೊ ಳ್ಳುತ್ತ ಅತಿ ಪ್ರಬಲರಾಗಿದ್ದರು. ಆ ಮೇಲೆ ಇಂದ್ರಾದಿ ದೇವತೆಗಳೆಲ್ಲಾ ಕೂಡಿ ಯೋಚಿಸಿ ಯಾವ ವಿಧದಿಂದಲೂ ಆ ದೈತ್ಯರ ಸಂಹಾರೋಪಾಯವನ್ನು ಕಾಣದೆ ಕಡೆಗೆ ಅವರೆಲ್ಲರೂ ಹೊರಟು ಕೈಲಾಸಕ್ಕೆ ಹೋಗಿ ಪ್ರಮಥಾಧಿಪನಿಗೆ ಅಡ್ಡಬಿದ್ದು ತಮಗೆ ಸಂಭವಿಸಿರುವ ತಾರಕನ ಮಕ್ಕಳ ಬಾಧೆಯನ್ನು ಹೇಳಿಕೊಂಡು ಮೊರೆಯಿ ಡಲು, ಆಗ ಶಂಕರನು- ಎಲೈ ದೇವತೆಗಳಿರಾ, ತಾರಕನ ಮಕ್ಕಳು ವೇದಮಾರ್ಗಗ ಳಲ್ಲಿ ಎಳ್ಳಷ್ಟಾದರೂ ತಪ್ಪದೆ ವೇದೋಕ್ತವಾದ ಕರ್ಮಗಳನ್ನು ಮಾಡುತ್ತ ಬಹಳ ಪರಿಶುದ್ಧರಾಗಿರುವರು. ಇಂಥವರನ್ನು ನಿಷ್ಕಾರಣವಾಗಿ ಸಂಹರಿಸುವುದು ಹೇಗೆ ? ನೀವು ಈಗಲೇ ಹೋಗಿ ವಿಷ್ಣು ವಿಗೆ ಈ ಸಂಗತಿಯನ್ನು ತಿಳಿಸಿರಿ ಎಂದು ಹೇಳಲು ; ಆಗ ಅವರೆಲ್ಲರೂ ವಿಷ್ಣುವಿನ ಬಳಿಗೆ ಬಂದು ಈಶ್ವರವಚನವನ್ನು ತಿಳಿಸಿ ತಮ್ಮ ಕಷ್ಟ ವನ್ನು ಹೇಳಿಕೊಂಡು ಗೋಳಾಡಲು ; ಆಗ ಕರುಣಾಳುವಾದ ಹರಿಯು ಬೌದ್ದಾನೆ ತಾರವನ್ನು ಮಾಡಿ ಯುಕ್ತಿಯಿಂದ ಸೌಗತವೆಂಬ ಒಂದು ಶಾಸ್ತ್ರವನ್ನು ಕಲ್ಪಿಸಿ' ಆ ಪುಸ್ತಕವನ್ನು ಕೈಯಲ್ಲಿ ಹಿಡಿದು ಕೊಂಡು ಹೋಗಿ ಆ ತ್ರಿಪುರಗಳನ್ನು ಪ್ರವೇಶಿಸಿ ಆ ತಾರಕನ ಮಕ್ಕಳಿಗೆ ಕಾಣಿಸಿಕೊಳ್ಳಲು; ಅವರು ಈತನ ಅನ್ಯಾದೃಶವಾದ ತೇಜಸ್ಸನ್ನು ನೋಡಿ-ಇವನಾರೋ ಮಹಾ ಪುರುಷನೆಂದು ಯೋಚಿಸಿ ಎದುರೆದ್ದು ಬಂದು ಆತ ನಿಗೆ ನಮಸ್ಕಾರವನ್ನು ಮಾಡಿ ದಿವ್ಯ ಪೀಠಾಗ್ರದಲ್ಲಿ ಕುಳ್ಳಿರಿಸಿ ಷೋಡಶೋಪಚಾರಗ ಳಿಂದ ಪೂಜಿಸಿ-ಎಲೈ ಮಹಾನುಭಾವರೇ, ತಾವು ಎಲ್ಲಿಂದ ಬಂದಿರಿ ? ಪವಿತ್ರರಾದ ನಿಮ್ಮ ಸಂದರ್ಶನದಿಂದ ನಾವು ಧನ್ಯರಾದೆವು, ಇಲ್ಲಿ ಬಂದ ಕಾರ್ಯವೇನು ? ಎಂದು ಭಯಭಕ್ತಿಯಿಂದ ಕೂಡಿ ಕುಶಲಪ್ರಶ್ನೆ ಯನ್ನು ಮಾಡಲು ; ಬೌದ್ಧ ವೇಷಧಾರಿಯಾದ ವಿಷ್ಣುವು ಅವರನ್ನು ಕುರಿತು-ನಾವು ಭಿಕ್ಷುಕರು, ನಮಗೆ ಊರೆಲ್ಲಿರುವುದು ? ನಮ್ಮ ತಪಸ್ಸು ನಿರಾತಂಕವಾಗಿ ನಡೆಯುವ ಹಾಗೆ ಮಾಡಿ ನಮ್ಮನ್ನು ಯಾರು ಪ್ರೀತಿಯಿಂದಿ