ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾದೆಗಳು 283 ಕೆರದ ಅಳತೆಗೆ ಕಾಲು ಕೊಯಿಸಿದ ಹಾಗೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕೊಯಿದ ಕಾಲು ನಾಯಿ ತಿಂದರೇನು, ನರಿ ತಿಂದರೇನು ? ಕೋಟಿ ವಿದ್ಯೆಯ ಕೂಳಿಗೋಸ್ಕರವೇ. ಕೋಣನ ಮುಂದೆ ಕಿನ್ನರೀ ಬಾರಿಸಿದ ಹಾಗೆ. ಗಂಗೆಗೆ ಹೋಗಿ ತೆಂಗಿನ ಓಟೆ ತಂದ ಹಾಗೆ, ಗಂಡಹೆಂಡಿರ ಜಗಳದಲ್ಲಿ ಕೂಸು ನಾಶವಾಯಿತು. ಗಾಳಿ ಬಂದಾಗಲೇ ತೂರಿಕೊಳ್ಳಬೇಕು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ ? ಗುರುವಿನಂತೆ ಶಿಷ್ಯ, ತಂದೆಯಂತೆ ಮಗ. ಗೇಣು ಬಿಟ್ಟು ಅಗಳು ದಾಟಿದ ಹಾಗೆ. ಚರ್ಮ ತೊಳೆದರೆ ಕರ್ಮ ಹೋದೀತೇ ? ಚಿಂತೆಯೇ ಮುಪ್ಪ, ಸಂತೋಷವೇ ಯೌವನ ಚಿನ್ನದ ಚೂರಿ ಎಂದು ಕುತ್ತಿಗೆ ಕೊಯಿಸಿಕೊಳ್ಳಬಹುದೇ ? ಚೇಳಿನ ಮಂತ್ರವನ್ನರಿಯದವನು ಹಾವಿನ ಹುತ್ತಕ್ಕೆ ಕೈಯಿಕ್ಕಿದ ಹಾಗೆ. ಜಗದೀಶ್ವರನ ದಯೆ ಒಂದಿದ್ದರೆ ಜಗತ್ತೆಲ್ಲಾ ನನ್ನ ದು. ಜನ ಮರುಳೋ ! ಜಾತ್ರೆ ಮರುಳೋ ! ಜೋಗಿಗೆ ಜೋಗಿ ತಬ್ಬಿ ಕೊಂಡರೆ ಮೈಯೆಲ್ಲಾ ಬೂದಿ. ಜ್ಞಾನವಂತನಿಗೆ ಸ್ಥಾನವೇಕೆ ? ತಟಸ್ಥನಾದವನಿಗೆ ತಂಟೆಯೇನು ? ತರ್ಕ ಮಾಡುವವ ಮೂರ್ಖನಿಗಿಂತ ಕಡೆ. ತಲೆ ಗಟ್ಟಿ ಎಂದು ಕಲ್ಲನ್ನು ಹಾಯಬಾರದು. ತಾ ಕಳ್ಳನಾದರೆ ಪರರನ್ನು ನಂಬ. ತಾನಾಗಿ ಬೀಳುವ ಮರಕ್ಕೆ ಕೊಡಲಿಯೇಕೆ ? ತಾನು ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು. ತಾಸಿಗೊಂದು ಕೂಸು ಹೆತ್ತರೆ ಈಸೀಸು ಮುತ್ತು. ತಾಳಿದವ ಬಾಳಿಯಾನು. ತಿಪ್ಪೆ ಮೇಲೆ ಮಲಗಿ ಉಪ್ಪರಿಗೇ ಕನಸ ಕಂಡ ಹಾಗೆ. ತೀರಕ್ಕೆ ಬಂದ ಮೇಲೆ ತೆರೆಯ ಭಯವೇ ? ತೀರದಲ್ಲಿರುವ ಮರಕ್ಕೆ ನೀರು ಏಕೆ ? ತುಂಟ ಕುದುರೆಗೆ ಗಂಟು ಲಗಾಮು. ತು೦ಡಿಲ್ಲದವನಿಗೆ ತುಂಟನ ಭಯವೇನು ? ತುಂತುರು ಮಳೆಯಿಂದ ತೂಬಿನ ಕೆರೆ ತುಂಬೀತೇ ? ತುಂಬಿದ ಕೊಡ ತುಳುಕುವದಿಲ್ಲ.