284 ಕಥಾಸಂಗ್ರಹ-೩ ನೆಯ ಭಾಗ ತುಚ್ಛನ ಸಂಗಡ ಬಾಳೋದಕ್ಕಿಂತ ಹುಚ್ಚನ ಸಂಗಡ ಬೀಳೋದು ವಾಸಿ. ತುಚ್ಚ ಮಾತಾಡುವವನು ಹುಚ್ಚನಿಗಿಂತ ಕಡೆ. ತುದಿಯಲ್ಲಿ ಕಾಣುವದು ಮದುವೇ ಗುಣ. ದಣಿದ ಎತ್ತಿಗೆ ಮಣವೇ ಭಾರ. ದಾರಿ ತಪ್ಪಿದ ಮೇಲೆ ಹಾರಿ ಏನು ಫಲ ? . ದಾಸ್ಯೆಯ ತಿರುಪತಿಗೆ ಹೋದ ಹಾಗೆ. ದಾಹ ಹತ್ತಿದವನಿಗೆ ಹತ್ತಿ ಕುಡಿಯೋದಕ್ಕೆ ಕೊಟ್ಟ ಹಾಗೆ. ದಿಕ್ಕಿಲ್ಲದ ಮನುಷ್ಯನಿಗೆ ದೇವರೇ ಗತಿ. ದಿಕ್ಕು ದಿಕ್ಕಿಗೆ ಹೋದರೂ ದುಃಖ ತಪ್ಪಿತೇ ? ದುಃಖದ ಮೇಲೆ ಸುಖ; ಸುಖದ ಮೇಲೆ ದುಃಖ. ದುಮ್ಮಿನಿಂದ ಹಮ್ಮ ಕಳಕೊಂಡ. ದೂರಕ್ಕೆ ಬೆಟ್ಟ ನುಣ್ಣಗೆ. ದೆಬ್ಬೆ ಕೊಟ್ಟು ಬೊಬ್ಬೆ ಕೊಂಡ. ದೇವರು ಕೊಟ್ಟರೂ ಪೂಜಾರಿ ಕೊಡ. ದೇಶಾಂತರ ಹೋದರೆ ದೈವ ಬಿಟ್ಟಿತೇ ? ದೊಣ್ಣೆ ಹಿಂಡಿದರೆ ಎಣ್ಣೆ ಬೀಳುವದೇ ? ದೋತ್ರ ದೊಡ್ಡದಾದರೆ ಗೋತ್ರ ದೊಡ್ಡದೇ ? ದೋವಾ ಮಾಡುವವನಿಗೆ ರೋಷ ಬಹಳ. ದ್ರಾಕ್ಷಿ ನೀ ಎಂದು ಬಳ್ಳಿ ಸಹಾ ತಿನ್ನಬಾರದು. ಧರ್ಮಕ್ಕೆ ಕೊಟ್ಟ ಎಮ್ಮೆ ಹಲ್ಲು ಹಿಡಿದು ನೋಡಿದನು. ಧರ್ಮಕ್ಕೆ ಕೊಟ್ಟ ದಟ್ಟಿ ಹಿತ್ತಲಿಗೆ ಹೋಗಿ ಮೋಳಾ ಹಾಕಿ ನೋಡಿದನು. ಧೂಪಾ ಹಾಕಿದರೆ ಪಾಪ ಹೋದೀತೇ ? ಧೈರ್ಯವುಂಟಾದವನಿಗೆ ದೈವ ಸಹಾಯವುಂಟು. ಧೋರೆಯಿಂದ ಆಗುವಂಥಾದ್ದು ನರಿಯಿಂದ ಆದೀತೇ ? ಧೋರೆ ಹೇಳಿದನೆಂದರೆ ಮರದ ಕಾಯಿ ಬಿದ್ದೀತೇ ? ನಡಗುವವನ ಮೇಲೆ ಸತ್ತ ಹಾವು ಬಿದ್ದ ಹಾಗೆ. ನಯವಿದ್ದಲ್ಲಿ ಭಯವಿಲ್ಲ. ನಯಶಾಲಿಯಾದವ ಜಯಶಾಲಿಯಾದಾನು. ನರಕಕ್ಕೆ ನವದ್ವಾರ, ನಾಕಕ್ಕೆ ಒಂದೇ ದ್ವಾರ. ನರಿಯ ಹೊಟ್ಟೆಯಲ್ಲಿ ಸಿಂಹದ ಮರಿ ಹುಟ್ಟಿತೇ ? ನರ್ಮದೆಗೆ ಹೋದರೆ ಕರ್ಮ ತಪ್ಪಿತೇ ! ನವಿಲು ಕುಣಿಯೋದ ನೋಡಿ ಕೆಂಬೋತಿ ಪುಕ್ಕಾ ತೆರೆಯಿತು. ನಷ್ಟ ಬಿದ್ದರೂ ಭ್ರಷ್ಠನಾಗಬಾರದು.
ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೪
ಗೋಚರ