ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾದೆಗಳು 285 ನಾಕದವರಿಗೆ ಲೋಕದ ಭಯವೇನು ? ನಾಕದ ಸಂತೋಷ ಸಕರಗೆ ತಿಳಿದೀತೇ ? ನಾಚಿಕೆಯಿಲ್ಲದವರ ಕಂಡರೆ ಆಚೆಗೆ ಹೋಗಬೇಕು. ನಾಡಿಗೆ ಇಬ್ಬರು ಅರಸುಗಳಾದರೆ ಕೇಡು ಬಪ್ಪದು ತಪ್ಪದು. ನಾಡೀ ನೋಡದೆ ಮದ್ದು ಕೊಟ್ಟರೆ ಕಾಡುರೋಗ ಬರೋದು. ನಾಡೀ ಪರೀಕ್ಷೆ ಆಡು ಬಲ್ಲ ದೇ ? ನಾದವಿದ್ದರೆ ಘಂಟೆ, ವಾದವಿದ್ದರೆ ತಂಟೆ. ನಾಮವಿದ್ದವಗೆ ಕಾಮ ಕಡಿಮೆಯೇ ? ನಾಯಿ ಕೂಗಿದರೆ ದೇವಲೋಕ ಹಾಳಾದೀತೇ ? ನಾಯಿ ಬಡೀಲಿಕ್ಕೆ ಬಣ್ಣದ ಕೋಲೇ ? ನಾಯಿಯ ಬಾಲಾ ಲಳಿಗೇಲಿ ಹಾಕಿದರೆ ಸೊಂಕು ಬಿಟ್ಟಿತೇ ? ನಾಳೇ ಎಂಬೋದು ಗಣಪತೀ ಮದುವೆಯ ಹಾಗೆ. ನಿಜವಾಡಿದರೆ ನಿಮ್ಮೂರ. ನಿತ್ಯ ದರಿದ್ರನಿಗೆ ನಿಶ್ಚಿಂತೆ ನೀರಲ್ಲಿ ಬರೆದ ಬರಹದ ಹಾಗೆ. ನೀರಿನ ಮೇಲಣ ಗುಳ್ಳೆಯ ಹಾಗೆ. ನೀರಿಲ್ಲದ ತಾವಿನಲ್ಲಿ ಊರ ಕಟ್ಟಿದ ಹಾಗೆ. ನೀರು ಇದ್ದರೆ ಊರು, ನಾರಿ ಇದ್ದರೆ ಮನೆ. ನೀರುಳ್ಳಿ ನೀರಲ್ಲಿ ತೊಳೆದರೆ ನಾರೋದು ತಪ್ಪಿತೇ ? ನೀರುಳ್ಳಿಯವನ ಸಂಗಡ ಹೋರಾಟಕ್ಕೆ ಹೋದರೆ ಮೋರೇ ಎಲ್ಲಾ ನಾರದೇ ? ನೀರೊಳಗೆ ಹೋಮಾ ಮಾಡಿದ ಹಾಗೆ. ನುಂಗಿದ ತುತ್ತಿನ ರುಚಿ ಮತ್ತೆ ಬಯಸಿದ ಹಾಗೆ. ನುಗ್ಗಿ ದವನಿಗೆ ಹಗ್ಗ ತಪ್ಪಿತೇ ? ನುಡಿ ಪುರಾತನ, ನಡೆ ಕಿರಾತನ. ನೆಚ್ಚಿದ ಎಮ್ಮೆ ಕೋಣನಾಯಿತು. ನೋಟ ಇಲ್ಲದೆ ಓಟಾ ಮಾಡಿದರೆ ಕಾಟ ತಪ್ಪದು. ನೋಟ ನೆಟ್ಟಗಿದ್ದರೆ ಕಾಟ ಹ್ಯಾಗೆ ಬಂದೀತು ? ನೋಡಿದರೆ ಕಾಣದ್ದು ಓಡಿದರೆ ಸಿಕ್ಕೀತೇ ? ನೋಡಿ ನಡಿಯೋನಿಗೆ ಕೇಡು ಬಾರದು. ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮಸ್ವರ ಕೊಟ್ಟಿತೇ ? ಪರಡಿಯ ರುಚಿ ಕರಡಿಗೆ ತಿಳಿದೀತೇ ? " ಪಕ್ಷಿಗೆ ಆಕಾಶವೇ ಬಲ, ಮತ್ಯಕ್ಕೆ ನೀರೇ ಒಲ. ಪ್ರಾಯ ಹೆಚ್ಚಾದರೂ ಬಾಯಿ ಒಂದಾಗಿರ ಬೇಕು.