ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

286 ಕಥಾಸಂಗ್ರಹ-೬ ನೆಯ ಭಾಗ ಪ್ರೇತದ ಭೀತಿ ಹೋದರೂ ನಾತದ ಭೀತಿ ಹೋಗಲಿಲ್ಲ. ಬಂಕಾಪುರಕ್ಕೆ ಹೋದರೆ ಡೊಂಕು ಬಿಟ್ಟಿತೇ ? ಬಂದ ದಿವಸ ನಂಟ, ಮರುದಿವಸ ಭಂಟಿ, ಮರನೇ ದಿವಸ ಕಂಟ. ಬಲತ್ಕಾರದಿಂದ ತಂದ ನಾಯಿ ಮೊಲಾ ಹಿಡಿದೀತೇ ? ಬಲೆಗೆ ಸಿಕ್ಕದ್ದು ಕೋಲಿಗೆ ಸಿಕ್ಕೀತೇ ? ಬಲ್ಲವನೇ ಬಲ್ಲ ಬೆಲ್ಲದ ಸವಿ. ಬಸವನ ಹಿಂದೆ ಬಾಲ. ಬಾಣದ ಗುರಿ ನೊಣದ ಮೇಲೆಯೇ ? ಬಾಳೆ ತೋಟಕ್ಕೆ ಆನೆ ಬಂದ ಹಾಗೆ. ಬಾಳೇ ಹಣ್ಣಿಗೆ ಗರಗಸವೇಕೆ ? ಬುದ್ದಿ ಹೇಳಿದವರ ಸಂಗಡ ಗುದ್ದಾಟಕ್ಕೆ ಹೋದ ಹಾಗೆ. ಬೂರುಗದ ಮರವನ್ನ ಗಿಣಿ ಕಾದ ಹಾಗೆ. ಬೆಂದ ಮನೆಗೆ ಹಿರಿದದ್ದೇ ಲಾಭ. ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ. ಬೆಟ್ಟಾ ಅಗಿದು ಇಲೀ ಹಿಡಿದ ಹಾಗೆ. ಬೆಟ್ಟಕ್ಕೆ ಹೋಗುವವನ ಸೊಂಟದಲ್ಲಿ ಕೊಡಲೇ ಸಿಕ್ಕಿಸಿದ ಹಾಗೆ. ಬೆರಳು ತೋರಿದರೆ ಮುಂಗೈ ತನಕ ನುಂಗುತ್ತಾನೆ." ಬೆಳಗಾನಾ ರಾಮಾಯಣ ಕೇಳಿ ಸೀತೆಯ ರಾಮನೂ ಏನಾಗಬೇಕೆಂದ ಹಾಗೆ, ಬೆಳಗೂ ಕಡೆದ ಬೆಣ್ಣೆ ಮೋಳ ಬೆಕ್ಕಿನ ಪಾಲಾಯಿತು. ಬೆಳೆಯ ಸಿರಿ ಮೊಳೆಯಲ್ಲೇ ಕಾಣುವುದು. ಬೇಕು ಅಂದಾಕ್ಷಣ ನಾಕಾ ಸೇರುವನೇ ? ಬೇರು ಬಲ್ಲಾತನಿಗೆ ಎಲೇ ತೋರಿಸಬೇಕೇ ? ಬೇಲಿ ಎದ್ದು ಹೊಲಾ ಮೇಯಿ ದರೆ ಕಾಯುವವರಾರು ? ಬೋರೇ ಗಿಡದಲ್ಲಿ ಕಾರೇ ಹಣ್ಣಾದೀತೇ ? ಭಲಾ ಜಟ್ಟಿ ಅಂದರೆ ಕೆಮ್ಮಣ್ಣು ಮುಕ್ಕಿದ. ಭಾಗ್ಯ ಬರುವುದನ್ನು ಭಾಗಮ್ಮ ತಡೆದಾಳೇ ? ಭಾರವಾದ ಪಾಪಕ್ಕೆ ಘೋರವಾದ ನರಕ. ಭಾವೀ ನೀರಾದರೆ ಭಾವಿಸಿದರೆ ಬಂದೀತೇ ? ಭೇದಾ ತಿಳಿಯದಿದ್ದರೂ ವಾದಾ ಬಿಡುವುದಿಲ್ಲ. ಭೋಗಿಗೆ ಯೋಗಿ ಮರಳು, ಯೋಗಿಗೆ ಭೋಗಿ ಮರುಳು. ಭ್ರಷ್ಟನಾದರೂ ಕಷ್ಟ ತಪ್ಪದು. ಭ್ರಾಂತಿ ಹಿಡಿದವನಿಗೆ ವಾಂತೀ ಕೊಟ್ಟರೆ ಹೋದೀತೇ ? ಮಂಗನ ಕೈಯಲ್ಲಿ ಮಾಣಿಕ ಕೊಟ್ಟ ಹಾಗೆ. ಮಂಗನ ಪಾರುಪತ್ಯ ಹೊಂಗೇಮರದ ಮೇಲೆ.