ಗದಗಳು 287 ಮಂತ್ರಿಸಿದರೆ ಮಾವಿನ ಕಾಯಿಬಿದ್ದೀತೇ ? ಮ೦ದೇ ಬಳಿಗೆ ತೋಳ ಬಂದರೆ ತಂದೇ ಬಳಿಗೆ ಓಡಿಹೋದ ಹಾಗೆ. ಮಕ್ಕಳಿಲ್ಲದವನಿಗೆ ಒಕ್ಕಳ ಹೊನ್ನಿದ್ದರೇನು ? ಮಜ್ಜಿಗೆಗೆ ಹೋದವನಿಗೆ ಎಮ್ಮೆ ಕ್ರಯವೇಕೆ ? ಮಟ್ಟು ತಿಳಿಯದೆ ಮಾತನಾಡಬಾರದು. ಮಠಪತಿಯಾದರೂ ಶಠತನ ಬಿಡಲಿಲ್ಲ. " ಮಡಕೇ ಒಡೆಯುವದಕ್ಕೆ ಅಡಿಕೆ ಮರ ಬೇಕೇ ? ಮಣ್ಣು ಕಾಲು ನೀರಿಗಾಗದು, ಮರದ ಕಾಲು ಬೆಂಕಿಗಾಗದು. ಮಣ್ಣು ದೇವರಿಗೆ ಮಜ್ಜನವೇ ಸಾಕ್ಷಿ. ಮತಿಯಿಲ್ಲದವನಿಗೆ ಗತಿಯಿಲ್ಲ. ಮತ್ತನಾದವನ ಹತ್ರರ ಕತ್ತಿಯಿದ್ದರೇನು ? ಮದುವೆಗೆ ತಂದ ಅಕ್ಕಿಯೆಲ್ಲಾ ಸೇಸೆಗೆ ತೀರಿಹೋಯಿತು. ಮನೇ ಕಟ್ಟ ಬಹುದು, ಮನಸ್ಸು ಕಟ್ಟಿ ಕೂಡದು. ಮನೇ ಕಟ್ಟಿ ನೋಡು, ಮದುವೇ ಮಾಡಿ ನೋಡು. ಮನೆಗೆ ಮಾರಿ, ಹೆರರಿಗೆ ಉಪಕಾರಿ. ಮನೇ ಬಲ್ಲೆ, ದಾರಿ ಅರಿಯೆ. ಮನೇ ದೀಪವಾದರೆ ಮುತ್ತು ಕೊಡಬಹುದೇ ? ಮನೇ ತಿಂಬುವನಿಗೆ ಕದ ಹಪ್ಪಳ ಸಂಡಿಗೆ. ಮಳೆಗೆ ಹೆದರಿ ಹೊಳೆಗೆ ಬಿದ್ದ ಹಾಗೆ. ಮಳೆಗೆ ತಡೆಯದ ಕೊಡೆ ಸಿಡಿಲಿಗೆ ತಡದೀತೇ ? ಮಳೆ ನೀರು ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದ ಹಾಗೆ. ಮಳೆ ಹನಿ ಬಿಟ್ಟರೂ ಮರದ ಹನಿ ಬಿಡಲಿಲ್ಲ. ಮಾಡಬಾರದು ಮಾಡಿದರೆ ಆಗಬಾರದಾ ಗುವುದು. ಮಾಡಿದ ಪಾಪಕ್ಕೆ ಮನವೇ ಸಾಕ್ಷಿ ತೋಡಿದ ಬಾವಿಗೆ ಜಲವೇ ಸಾಕ್ಷಿ. ಮಾಡೋದು ದುರಾಚಾರ, ಮನೆಯ ಮುಂದೆ ಬೃಂದಾವನ. ಮಾಣಿಕ್ಯವನ್ನು ಮಸೀ ಅರವೇಲಿ ಕಟ್ಟಿದ ಹಾಗೆ. ಮಾತು ಕೊಂಡುಹೋದವ ಉಂಡ, ಮಾಣಿಕ್ಯ ಕೊಂಡುಹೋದವ ಹಸಿದು ಬಂದ. ಮಾತು ಬಂದಾಗ ಸೋತು ಹೋದವನೇ ಜಾಣ. ಮಾನದಲ್ಲಿ ಆನೆ ಹಿಡಿದೀತೇ ? ಮಾನಹೋದ ಮೇಲೆ ಮರಣವಾದ ಹಾಗೆ. ಮಾರಿಯ ಕಣ್ಣು ಹೊತನ ಮೇಲೆ. ಮಾರಿಯ ಮನೆಗೆ ಹೋತ ಕನ್ನಾ ಕೊರದ ಹಾಗೆ. ಮಾರಮ್ಮ ಅರಿಯದ ಕೋಣೆಯೋ ?
ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೭
ಗೋಚರ