ಪುಟ:ಕಥಾ ಸಂಗ್ರಹ - ಭಾಗ ೨.djvu/೨೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


288 ಕಥಾಸಂಗ್ರಹL ನೆಯ ಭಾಗ ಊಾನು ನೀರಿನಲ್ಲಿ ಮುಳುಗಿದರೆ ಸ್ನಾನದ ಫಲ ಬಂದೀತೇ ? ಮುತ್ತಿನ ಚಲುವು ಕತ್ತೆಗೆ ತಿಳಿದೀತೇ ? ಮುತ್ತು ಕೆಟ್ಟರೆ ಭತ್ತಕ್ಕಿಂತ ಕಡೆಯೇ ? ಮಕನೆದುರಿಗೆ ನಗು ತುರಿಸಿಕೊಂಡ ಹಾಗೆ ಮೂಗಿಗಿಂತ ಮೂಗುತಿ ಭಾರ. ಮೂಗು ಕೊಯಿದು ಮೊಗ್ಗಿನ ತುರಾಯಿ ಕೊಟ್ಟ ಹಾಗೆ. ಮೂರ್ಖಗೆ ಹೇಳಿದ ಬುದ್ದಿ ಗೋರ್ಕಲ್ಲಿನ ಮೇಲೆ ಮಳೆ ಹೊಯಿದ ಹಾಗೆ. ಮೂರ್ತಿ ಸಣ್ಣದಾದರೂ ಕೀರ್ತಿ ದೊಡ್ಡದು. ಮೂವರ ಕಿವಿಗೆ ಮುಟ್ಟಿ ದ್ದು ಮೂರು ಲೋಕಕ್ಕೆ ಮುಟ್ಟುವುದು. ಮರೆತ್ತಿನ ಬಂಡಿ ಹೊಲಕ್ಕೂ ಹೋಗದು, ಮನೆಗೂ ಬಾರದು. ಮೆಚ್ಚಿದವನಿಗೆ ಮಸಣವೇ ಸುಖ. ಮೆಟ್ಟಿದಲ್ಲದೆ ಹಾವು ಕಡಿಯದು. ಮೆಟ್ಟಿದಾಕ್ಷಣ ಗಟ್ಟ ತಕ್ಕೀತೇ? ಮೈಯಲ್ಲಿ ಹುಟ್ಟಿದ ರೋಗಕ್ಕಿಂತ ಕಾಡಲ್ಲಿ ಹುಟ್ಟಿದ ಔಷಧ ಮೇಲು. ಮೊಗೇ ಮಾಡದ ಕುಂಬಾರ ಗುಡಾಣಾ ಮಾಡಾನೇ ? ಮೊಳಕೈ ಆಡಿದರೆ ಮುಂಗೈ ಆಡುತ್ತದೆ. ಯಾತ ತಲೇ ತೂಗಿದರೆ ಪಾತಾಳದ ನೀರು ಹರಿಯುತ್ತದೆ; ತಾತ ತಲೇ ತೂಗಿದರೆ ಪಾಗು ಬೀಳುತ್ತದೆ. ಯಾರೂ ಇಲ್ಲದ ಊರಿಗೆ ಅಗಸರ ಮಾಳಿಯೇ ಮುತ್ತೈದೆ. ಯಾರೂ ಇಲ್ಲದ ಊರಿಗೆ ಹೋಗಿ ನೀರ ಮಜ್ಜಿಗೆ ಬಯಸಿದ ಹಾಗೆ. ಯಾವ ರಾಯನಿಗೆ ರಾಜ್ಯವಾದರೂ ರಾಗಿಬೀಸೋದು ತಪ್ಪದು. : ಯೋಗಿಯಾದರೂ ಭೋಗಾ ಬಿಡ. ಯೋಗ್ಯತೆ ಅರಿಯದ ದೊರೆಯ ರೋಗವರಿಯದ ವೈದ್ಯನೂ ಒಂದೇ. ರಂಗನ ಮುಂದೆ ಸಿಂಗನೇ ? ರಾಗ ನುಡಿಸುವಾಗ ತಂತಿ ಹರಿಯಿತು. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ. ರಾಯರ ಪಾದದಾಣೆ ಹಾರೇ ನುಂಗು. ರಾವಣನ ಹೊಟ್ಟೆಗೆ ಅರೆಕಾಸಿನ ಮಜಿ ಗೆಯೇ ! ಲಂಗು ಹರಿದ ಮೇಲೆ ಜಂಗಮನ ಹಂಗೇನು ? ಲೆತ್ತಾ ಹಾಕಲಿಕ್ಕೆ ಹೋದರೆ ಬೋಕಿ ಬಿತ್ತು. ಲೋಕದವರೆಲ್ಲಾ ಸತ್ತರೆ ಶೋಕಾ ಮಾಡುವವರಾರು ? ವಂಚಕನಿಗೆ ಸಂಚು ಕೊಟ್ಟ ಹಾಗೆ. ವನವಾಸಕ್ಕೆ ಹೋದರೂ ಘನ ಕಷ್ಟ ಬಿಡಲಿಲ್ಲ. ವಾಸಿ ಆಗದ ರೋಗಕ್ಕೆ ರಾಶಿ ಮದ್ದು ಮಾಡಿದರೂ ವ್ಯರ್ಥ.