ರಾವಣನ ದಿಗ್ವಿಜಯವು 23 ಪಡಬೇಡ ! ಹೋಗೆಂದನು. ಆಗ ಅವಳು ನಿದ್ರಿಸುತ್ತಿರುವ ತನ್ನ ಗಂಡನ ಬಳಿಗೆ ಬಂದು ಎಬ್ಬಿಸಿ ಅವನನ್ನು ಕುರಿತು--ನನ್ನ ಮಗನಾದ ದಶಾನನನು ದೇವೇಂದ್ರನನ್ನು ಜಯಿಸುವುದಕ್ಕಾಗಿ ಸೇನೆಯೊಡನೆ ಹೊರಟುಬಂದಿರುವನು, ನೀನು ಆತನ ಬಳಿಗೆ ಹೋಗಿ ಆದರಿಸಿ ಮುಂದೆ ನಡೆಯುವ ಯುದ್ಧದಲ್ಲಿ ಅವನಿಗೆ ನಿನ್ನ ಭುಜಸಹಾಯ ವನ್ನು ಮಾಡೆಂದು ಹೇಳಲು ; ಮಧುರೈತ್ಯನು ಆ ಮಾತುಗಳನ್ನು ಕೇಳಿ ಒಪ್ಪಿ ಕೊಂಡು ರಾವಣನ ಬಳಿಗೆ ಬಂದು ಯಥಾಯೋಗ್ಯವಾಗಿ ಪೂಜಿಸಿ ಮರ್ಯಾದೆಯೊ ಡನೆ ತನ್ನ ಮನೆಗೆ ಕರೆದುಕೊಂಡು ಬಂದು ಸತ್ಕರಿಸಿದನು. ಆ ಬಳಿಕ ರಾವಣನು ಆ ರಾತ್ರಿಯನ್ನು ಅಲ್ಲೇ ಕಳೆದು ಮರುದಿವಸ ಬೆಳಗಾ ಗುತ್ತಲೆ ಎದ್ದು ಆ ಮಧುದೈತ್ಯನನ್ನೂ ಸಂಗಡವೇ ಕರೆದು ಕೊಂಡು ಇಂದ್ರನ ಪಟ್ಟ. ಣವಾದ ಅಮರಾವತಿಯನ್ನು ಕುರಿತು ಬರುತ್ತಿರಲು ; ನಡುದಾರಿಯಲ್ಲಿ ಸೂರ್ಯಾ ಸ್ವಮಾನವಾಯಿತು. ಆಗ ಕೈಲಾಸಾಚಲದ ತಪ್ಪಲಲ್ಲಿ ಬೀಡಾರವನ್ನು ಬಿಡಿಸಿ ಕೋ ಮಲತರವಾದ ಚಿಗುರುಗಳನ್ನು ತರಿಸಿ ಮಂಚದ ಮೇಲೆ ಹಾಸಿಸಿ ಮಾರ್ಗಾಯಾಸ ವಿಶ್ರಾಂತ್ಯರ್ಥವಾಗಿ ತಣುಪಾದ ಗಾಳಿಗೆ ಮೆಲ್ಲೊ ಟ್ಟು ಮಲಗಿದ್ದನು. ಆ ಸಮ ಯದಲ್ಲಿ ದೇವಗಣಿಕೆಯರಲ್ಲಿ ಬಲು ಚಲುವೆಯ ಸೊಬಗುಳ್ಳವಳೂ ಆದ ರಂಭೆಯೆಂ ಬವಳು ಆ ಮಾರ್ಗದಲ್ಲಿ ಹೋಗುತ್ತಿರಲು ; ದಶಾನನನು ಅವಳನ್ನು ನೋಡಿ ಕಾಮ ಪರವಶನಾಗಿ ಕೂಡಲೆ ಅವಳ ಬಳಿಗೆ ಹೋಗಿ ಅವಳನ್ನು ತಡೆದು ಬಲಾತ್ಕಾರಿಸಲು ; ಆಕೆಯು ಆ ನಿರ್ಬಂಧವನ್ನು ತಡೆಯಲಾರದೆ ಅದೃಶ್ಯಳಾಗಿ ತಾನು ವರಿಸಿದ್ದ ಕುಬೇ ರನ ಕುಮಾರನಾದ ನಳಕೂಬರನ ಬಳಿಗೈಯಿ ದಾರಿಯಲ್ಲಿ ದುಷ್ಟನಾದ ದಶಾನನನು ಮಾಡಿದ ದುಸ್ಸೇಷ್ಟೆ ಯನ್ನು ಹೇಳಲು ; ಆಗ ನಳಕೂಬರನು ಬಹು ಕುಪಿತನಾಗಿ ದುಷ್ಟನಾದ ರಾವಣನು ಇಂದು ಮೊದಲು ಪರಸ್ತ್ರೀಯರನ್ನು ಬಲಾತ್ಕಾರದಿಂದ ಹಿಡಿದರೆ ಅವನ ಹತ್ತು ತಲೆಗಳೂ ಒಡೆದು ಸಾಯಲೆಂದು ಉಗ್ರ ಶಾಪವನ್ನಿತ್ತನು. ಆ ಬಳಿಕ ರಾವಣನು ತನಗೆ ನಳಕೂಬರನಿಂದ ಬಂದ ಶಾಪದ ವೃತ್ತಾಂತ ವನ್ನು ಆಕಾಶವಾಣಿಯಿಂದ ಕೇಳಿದವನಾದಾಗ ಅದನ್ನು ಗಣನೆಗೆ ತಾರದೆ ಸೂರ್ಯೋದಯ ಕಾಲದಲ್ಲಿದ್ದು ಸೇನೆಯೊಡನೆ ಕೂಡಿ ಹೊರಟು ಅಮರಾವತೀಪಟ್ಟ ಣದ ಬಳಿಗೆ ಬಂದನು. ಆಗ ದೇವತೆಗಳು--ಓಹೋ ! ಈಗ ಸೇನೆಯೊಡನೆ ಬಂದ ವನು ಪರಭೀಕರನಾದ ರಾವಣನು. ಈ ಸಮಯದಲ್ಲಿ ಸಂಭವಿಸಿದ ಮಹಾವಿಪತ್ತಿ ನಿಂದ ತಪ್ಪಿಸಿ ನಮ್ಮನ್ನು ಕಾಪಾಡುವವರಾರೋ ಕಾಣೆವಲ್ಲಾ ! ಎಂದು ಭಯಾನಿಷ್ಟ ರಾಗಿ ಓಡುತ್ತ ದೇವೇಂದ್ರನ ಬಳಿಗೆ ಬಂದು--ಎಲೈ ಒಡೆಯನೇ, ಈಗ ಬಲು ಕೇಡಾಳಿಯಾದ ರಾವಣನಿಂದ ನಮ್ಮ ಲೋಕಕ್ಕೆ ಬಹು ಭಯವುಂಟಾಗಿರುವುದು. ಈ ಮಹಾಭಯವನ್ನು ಪರಿಹರಿಸುವ ಕಾರ್ಯವು ಹರಿಹರ ಹಿರಣ್ಯಗರ್ಭರಿಂದಲ್ಲದೆ ಮಿಕ್ಕವರಿಂದ ತೀರದೆಂದು ಹೇಳಿದರು. ಆಗ ಸಭೆಯಲ್ಲಿದ್ದ ಏಕಾದಶರುದ್ರರು ದ್ವಾದ ಶಾದಿತ್ಯರು ಅಷ್ಟವಸುಗಳು ಸಪ್ತ ಮರುತ್ತುಗಳು ಸಿದ್ದ ರು ಸಾಧ್ಯರು ವಿದ್ಯಾಧರರು ಅಪ್ಪರಸ್ಸುಗಳು ಗುಹ್ಯಕರು ಇವರೇ ಮೊದಲಾದ ನಾನಾ ದೇವತೆಗಳೂ, ಕೂಡಿ
ಪುಟ:ಕಥಾ ಸಂಗ್ರಹ - ಭಾಗ ೨.djvu/೩೩
ಗೋಚರ