ಪುಟ:ಕಥಾ ಸಂಗ್ರಹ - ಭಾಗ ೨.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


24 ಕಥಾಸಂಗ್ರಹ-೪ ನೆಯ ಭಾಗ ಶೌರ್ಯಾತಿಶಯದಿಂದ ತಮ್ಮ ತಮ್ಮ ಪರಾಕ್ರಮಾಧಿಕ್ಕೊಕ್ಕಿಗಳನ್ನು ಹೇಳಿಕೊಳ್ಳುತ್ತ ನಾವೆಲ್ಲ ರೂ ಇರುವಾಗ ಈ ಖಳನಾದ ದಶಕಂಧರನಿಗೆ ಹೆದರಿಕೊಳ್ಳುವುದೇಕೆ ? ನಾವು ಹೋಗಿ ಅವನ ಬಲವನ್ನೆಲ್ಲಾ ಮುರಿದೊಟ್ಟಿ ಅವನನ್ನು ಲಂಕೆಗೆ ಓಡಿಸುವೆವೆಂದು ವಿವಿಧಾಯುಧಗಳನ್ನು ಧರಿಸಿ ಗರ್ಜಿಸುತ್ತ ಹೊರಡಲು ; ಆಗ ಇಂದ್ರನು ಹೋ ಹೋ ! ತಾಳಿರಿ ತಾಳಿರಿ ! ಈ ರಾವಣನೊಡನೆ ಯುದ್ಧ ಮಾಡುವುದು ನಮ್ಮಿಂದ ಸಾಧ್ಯವಲ್ಲವು ಎಂದು ಸರಿಯಾದ ಕಾರಣಗಳಿಂದ ಅವರೆಲ್ಲರನ್ನೂ ಸಮಾಧಾನಪಡಿಸಿ ನಿಲ್ಲಿಸಿ ಆ ರಾತ್ರಿಯಲ್ಲಿಯೇ ಗುಪ್ತವಾಗಿ ಹೊರಟು ಶೇಷಶಯನನಾದ ವಿಷ್ಣುವಿನ ಬಳಿಗೆ ಹೋಗಿ ಆತನ ಪಾದಗಳಿಗೆ ನಮಸ್ಕರಿಸಿ ಕೈಮುಗಿದು ನಿಂತು ಕೊಂಡುದೇವಾ, ನನ್ನ ಬಿನ್ನಪವನ್ನು 'ಲಾಲಿಸು. ರಾವಣನೆಂಬ ದುಷ್ಟರಾಕ್ಷಸನು ಬ್ರಹ್ಮನ ವರದಿಂದ ಗರ್ವಿತನಾಗಿ ನಮ್ಮ ದೇವಲೋಕವನ್ನು ಹಾಳುಮಾಡಬೇಕೆಂದು ಯುದ್ಧ ಕೈ ಒಂದಿದ್ದಾನೆ, ನಮ್ಮ ಪರಾಕ್ರಮಕ್ಕಿಂತಲೂ ಅವನ ಪರಾಕ್ರಮವು ನೂರ್ಮಡಿಪಿಗೆ ಲಾಗಿರುವುದು, ಅದು ಕಾರಣ ಅವನು ನಮಗೆ ಅಜೇಯನಾಗಿರುವನು. ಭಕ್ತ ಪಂಜ ರನಾದ ನೀನೇ ಬಂದು ಚಕ್ರಾಯುಧದಿಂದ ಅವನ ತಲೆಯನ್ನು ಕತ್ತರಿಸಿ ನಿನ್ನ ಭಕ್ತ ರಾದ ನಮ್ಮನ್ನು ಕಾಪಾಡಬೇಕೆಂದು ದೈನ್ಯದಿಂದ ಬೇಡಿಕೊಂಡನು. ವಿಷ್ಣುವು ಆ ಮಾತುಗಳನ್ನು ಕೇಳಿ ಈ ಸಮಯದಲ್ಲಿ ರಾವಣನೊಡನೆ ಯುದ್ಧ ಮಾಡುವುದಕ್ಕೆ ನಾನೂ ಬರಕೂಡದು, ಬ್ರಹ್ಮನ ವರವನ್ನು ಮನ್ನಿಸಿ ಮುಂದೆ ಭೂಲೋಕದಲ್ಲಿ ಮನು ಜನಾಗಿ ಅವತರಿಸಿ ವಾನರ ಸೇನಾಸಮನ್ನಿತನಾಗಿ ಬಂದು ಆ ರಾವಣನನ್ನು ಕೊಲ್ಲು ವೆನು, ಅಲ್ಲಿನ ವರೆಗೂ ನೀವು ಆತನ ಉಪದ್ರವವನ್ನು ಸಹಿಸಿಕೊಂಡಿರಬೇಕೆಂದು ಹೇಳಿ ಕಳುಹಿಸಿದನು, ಆ ಮೇಲೆ ದೇವೇಂದ್ರನು ಅಲ್ಲಿಂದ ಹೊರಟುಬಂದು ಅಮರಾವತಿ ಯನ್ನು ಸೇರಿದನು. - ಆ ಮಾರನೆಯ ದಿವಸ ಸೂರ್ಯೋದಯವಾಗುವುದಕ್ಕಿಂತಲೂ ಮೊದಲೇ ಭೇರ್ಯಾದಿ ವಿವಿಧವಾದ್ಯಗಳ ಮಹಾರವದೊಡನೆ ಕೂಡಿದ ನಿಶಾಚರಬಲಜಲಧಿಯು ಸಿಂಹಗರ್ಜನೆಯನ್ನು ಮಾಡುತ್ತ ಅಮರಾವತಿಯನ್ನು ಮುತ್ತಿಕೊಂಡಿತು. ಆಗ ದೇವೇಂದ್ರನು--ಹೋ ಹೋ ! ತಡವೇಕೆ ? ತಡವೇಕೆ ? ಯುದ್ದ ಕ್ಕೆ ನಡೆಯಲಿ. ವೀರರೆಲ್ಲ ರೂ ಮುಂಕೊಳ್ಳಲಿ, ನಮ್ಮ ಬಲಗಳನ್ನು ಬೇಗ ಬರಹೇಳಿರಿ ಎನ್ನು ತ್ಯ ಕೈಬೀಸಲು ; ಕೂಡಲೆ ಬಲು ಗಟ್ಟಿಗರಾದ ನಿರ್ಜರವೀಗರು ಮಹಾಸೈನ್ಯದೊಡನೆ ಹೊರಟುಬಂದು ಸಮುದ್ರವು ಸಮುದ್ರವನ್ನು ತಾಗುವಂತೆ ರಾಕ್ಷಸರ ಬಲವನ್ನು ಪ್ರತಿಭಟಿಸಲು ; ಆಗ ಉಭಯಬಲವೂ ಕೂಡಿ ಒನಿಕೆ ಗದೆ ಗುರಾಣಿ ಕತ್ತಿ ಮುಸುಂಡಿ ಪ್ರಾಸ ಶಕ್ತಿ ಬಾಣ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಕಾದುತ್ತ ಮಾತುಗಳಿಂದ ಮದಲಿಸುತ್ತ ಇದಿರುಬಿದ್ದವರನ್ನು ಕೊಲ್ಲುತ್ತ ಜಗಳಮಾಡುತ್ತಿರಲು ; ಆಗ ರಕ್ತಲೇಪಿತವಾದ ಮೈಗಳೂ ಹೊರಗೆ ಹೊರಟ ಕರುಳ ಭೂ ತುಂಡುತುಂಡಾದ ಕೈಕಾಲ ಭೂ ಒಡೆದ ತಲೆಗಳೂ ಉಳ್ಳವ ರಾಗಿ ದೇವತೆಗಳಲ್ಲಿಯ ರಾಕ್ಷ ಸರಲ್ಲಿಯ ಅನೇಕರು ಮಡಿದರು. ಹೀಗೆಯೇ