ಪುಟ:ಕಥಾ ಸಂಗ್ರಹ - ಭಾಗ ೨.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 ಕಥಾಸಂಗ್ರಹ-೪ ನೆಯ ಭಾಗ ರಿಗೂ ಕೈಮುಗಿದು ನಿಂತು ಕೊಂಡು--ನೀವು ನನ್ನ ಮುಂದೆ ಪೂಜ್ಯನಾದ ನನ್ನ ತಂದೆ ಯನ್ನು ನಿಂದಿಸುವುದರಿಂದ ನನಗೂ ಮಹಾದುಃಖವುಂಟಾಗುವುದು, ಗುರುವೂ ತಂದೆಯ ಒಡೆಯನೂ ಮುದುಕನೂ ಆಗಿರುವ ದಶರಥರಾಜನು ಕೋಪದಿಂದಾ ದರೂ ಸಂತೋಷದಿಂದಲೇ ಆದರೂ ಅಥವಾ ಕಾಮದಿಂದಲೇ ಆದರೂ ಎಂಥ ಕೆಟ್ಟ ಕೆ ಲಸವನ್ನು ಆಜ್ಞಾಪಿಸಿದಾಗ್ಯೂ ನಾವೆಲ್ಲರೂ ಒಳ್ಳೆಯದು ಕೆಟ್ಟು ದೆಂದು ಬದಲಾಡದೆ ಅದನ್ನು ಅವಶ್ಯಕವಾಗಿ ಮಾಡಲೇಬೇಕು. ನಮಗೆ ಇದಕ್ಕಿಂತಲೂ ಹೆಚ್ಚಾದ ಧರ್ಮ ಕಾರ್ಯವು ಬೇರೆ ಯಾವುದೂ ಇಲ್ಲವು. ಅದು ಕಾರಣ ನೀವೆಲ್ಲರೂ ನನ್ನಲ್ಲಿ ದಯೆ ಯಿಟ್ಟು ಆಶೀರ್ವದಿಸಿ ನನ್ನ ಅರಣ್ಯ ಗಮನಕ್ಕೆ ಅನುಮತಿಸುವವರಾಗಬೇಕು. ನಾನು ಬಲುಬೇಗ ಬಂದು ನಿಮ್ಮ ಬಳಿಯನ್ನು ಸೇರುವೆನು, ಹದಿನಾಲ್ಕು ವರುಷಗಳು ಹದಿ ನಾಲ್ಕು ದಿನಗಳಂತೆ ಸುಲಭವಾಗಿ ಕಳೆದುಹೋಗುವುವು. ನೀವೆಲ್ಲರೂ ನನ್ನ ವಿಯೋ ಗಪ್ರಾಪ್ತಿಗಾಗಿ ದುರಂತ ದುಃಖಸಮುದ್ರದಲ್ಲಿ ಬಿದ್ದಿರುವ ದಶರಥರಾಜನ ಕಿವಿಗ ಳಿಗೆ ಕೂರವಾದ ಮಾತುಗಳನ್ನಾಡದೆ ವಿಹಿತವಾದ ಮಾತುಗಳನ್ನೇ ಆಡುತ್ತ ಆತನಿಗೆ ಸಂತೋಷವಾಗುವಂತೆ ಶುಕ್ರೂಷೆಯನ್ನು ಮಾಡಿಕೊಂಡಿರಬೇಕೆಂದು ಬೇಡಿಕೊಳ್ಳು ತೇನೆ. ಪಾಪಿಯಾದ ನನ್ನಲ್ಲಿ ಕೃಸೆಯಿಟ್ಟು ದುಃಖವನ್ನು ಸಹಿಸಿಕೊಳ್ಳಿರೆಂದು ಹೇಳಿ ಕೊಳ್ಳುತ್ತಿರುವ ರಾಮನ ಮೃದುವಚನಗಳನ್ನು ಕೇಳಿ ಎಲ್ಲರಿಗೂ ಮತ್ತೂ ಮಹಾ ದುಃಖವ್ರಂಟಾಗಿ ಕೈಕೇಯಿಯನ್ನು ಬೈಯ್ಯು ಶಪಿಸುತ್ತಿದ್ದರು. ಆಗ ಕೌಸಲೈಯು ತಂದೆಯ ಪ್ರತಿಜ್ಞೆಯನ್ನು ಕಾಪಾಡುವುದರಲ್ಲಿ ಬದ್ದಾದರ ನಾದ ರಾಮನನ್ನು ನೋಡಿ-ಆಯ್ಕೆ, ದುರ್ವಿಧಿಯೇ, ಹುಟ್ಟಿದಂದಿನಿಂದ ದುಃಖ ವನ್ನರಿಯದೆ ಧರ್ಮಾತ್ಮನೂ ಸರ್ವಪ್ರಾಣಿಪ್ರಿಯನೂ ದಶರಥನಿಂದ ನನ್ನಲ್ಲಿ ಜನಿಸಿದ ವನೂ ಆಗಿರುವ ರಾಮನಿಗೆ ಇಂಥ ಕಷ್ಟವನ್ನು ಕೊಡಬಹುದೇ ? ಯಾವ ಸುಕುಮಾರ ಶರೀರಧಾರಿಯಾದ ರಾಮನ ದಾಸಭ್ಯತ್ಯರೂ ಕೂಡ ಮೃಷ್ಟಾನ್ನವನ್ನು ಂಡು ದಣಿದು ಅಮೂಲ್ಯವಾದ ಉಡಿಗೆತೊಡಿಗೆಗಳನ್ನು ಟ್ಟು, ತೊಟ್ಟು ನಿರಂತರವೂ ಸುಖದಲ್ಲಿರುತ್ತಿ ದರೋ ಅಂಥ ಮಹಾತ್ಮನಾದ ರಾಮನಿಗೆ ಒಡೆಯನ್ನು ಧರಿಸಿ ನಾರಸೀರೆಯನ್ನುಟ್ಟು ಜಿಂಕೆಯ ಚರ್ಮವನ್ನು ಹೊದೆದು ಭಯಂಕರವಾದ ಮಹಾರಣ್ಯ ಮಧ್ಯದಲ್ಲಿ ಕಲ್ಕು ಇುಗಳಿಂದ ಕೂಡಿ ದುರ್ಗಮವಾದ ದಾರಿಗಳಲ್ಲಿ ಬರಿಗಾಲುಗಳಿಂದ ನಡೆಯುತ್ತ ತನ್ನ ಕೈಗುದ್ದಲಿಯಿ೦ದಗೆದು ಗಡ್ಡೆ ಗೆಣಸುಗಳನ್ನು ತಂದು ತಿಂದು ಬದುಕುವ ದುರವಸ್ಥೆ ಯನ್ನು ಕೊಡಬಹುದೇ ? ಕಷ್ಟವೆಂಬುದನ್ನು ಸ್ವಪ್ನದಲ್ಲಿಯಾದರೂ ಕಂಡರಿಯದವ ನಾದ ನನ್ನ ಪ್ರಿಯಕುಮಾರನಿಗೆ ಇಂಥ ಭಯಂಕರವಾದ ವಿಪತ್ತನ್ನು ತಂದೊದಗಿಸುವ ನಿನಗೆ ಲೇಶವಾದರೂ ಕರುಣವಿಲ್ಲವಲ್ಲಾ! ಅಯ್ಯೋ ಪಾಪಿಯಾದ ವಿಧಿಯೇ ! ನಿರಪ ರಾಧಿಯಾದ ರಾಮನಿಗೆ ಇಂಥ ದುರವಸ್ಥೆ ಯವುದಕ್ಕೆ ನಿನಗೆ ಮನಸ್ಸು ಹೇಗೆ ಬಂದಿತು ? ಆದರೂ ಚಿಂತೆಯಿಲ್ಲ, ನಿನ್ನನ್ನು ಕುರಿತು ಇದೊಂದು ಮಾತನ್ನು ಬೇಡಿ ಕೊಳ್ಳುವೆನು. ನೀನು ದೀನಳಾದ ನನ್ನಲ್ಲಿ ಕನಿಕರವಿಟ್ಟು, ಈ ರಾಮನು ಹನಕ್ಕೆ ಹೋಗುವುದಕ್ಕಿಂತ ಮೊದಲೇ ನನ್ನನ್ನು ಯಮನ ಪಟ್ಟಣಕ್ಕೆ ಕಳುಹಿಸು ಎನ್ನುತ್ತೆ