58 ಕಥಾಸಂಗ್ರಹ-೪ ನೆಯ ಭಾಗ ಡವೇ ಹೊರಟು ಹೋಗೆನಲು ; ಆಗ ರಾಮನು ತಪಸ್ವಿಯ೦ತ ವನಕ್ಕೆ ಹೋಗುವ ನನಗೆ ರಾಜಭೋಗ್ಯವಾದ ಈ ವಸ್ತುಗಳಿಂದ ಸ್ವಲ್ಪಮಾತ್ರವಾದರೂ ಪ್ರಯೋಜನವಿ ಲ್ಲವು, ಅರಣ್ಯದಲ್ಲಿ ಕಂದಮಲಾದಿಗಳು ಯಥೇಚ್ಛವಾಗಿರುವುವ, ನನಗೆ ನಾರು ಮಡಿಗಳನ್ನು ಮಾತ್ರ ಕೊಡಿಸಬೇಕೆಂದು ಕೇಳಿಕೊಳ್ಳಲು ; ಆಗ ಕೈಕೇಯಿಯು ಅತಿ ಸಂತೋಷದಿಂದ ಎದ್ದು ಒಳಕ್ಕೆ ಹೋಗಿ ಎರಡು ನಾರ್ಮಡಿಗಳನ್ನು ತಂದು ರಾಮನ ಕೈಗೆ ಕೊಟ್ಟಳು. ಆಗ ಲಕ್ಷ್ಮಣನು ಅವುಗಳನ್ನು ತೆಗೆದು ಕೊಂಡು ತಾನುಟ್ಟಿದ್ದ ಪೀತಾಂಬರವನ್ನು ತೆಗೆದಿಟ್ಟು ಆ ಮಡಿಗಳನ್ನು ಧರಿಸಿಕೊಂಡನು. ಆ ಮೇಲೆ ಕೈ ಕೇ ಯಿಯು ಮತ್ತೆರಡು ನಾರ್ಮಡಿಗಳನ್ನು ತಂದು ಕೊಡಲು ; ಸೀತೆಯು ಅವುಗಳನ್ನು ರಾಮನ ಕೈಗಳಿಂದ ತೆಗೆದು ಕೊಂಡು ಉಟ್ಟು ಕೊಳ್ಳುವುದಕ್ಕೆ ಬಾರದೆ ಕೈಯಲ್ಲೇ ಹಿಡಿದು ಕೊಂಡು ಕಣ್ಣೀರನ್ನು ಸುರಿಸುತ್ತ ರಾಮನ ಮುಖವನ್ನು ನೋಡಿ ಮುನಿಪ ತ್ನಿಯರು ನಾರು ಸೀರೆಯನ್ನು ಉಡುವುದು ಹೇಗೆ ? ಎಂದು ಕೇಳಲು ; ರಾಮನು ಬಂದು ಆಕೆಯು ಮೊದಲುಟ್ಟಿದ್ದ ಪೀತಾಂಬರದ ಮೇಲೆಯೇ ಆ ನಾರುಮಡಿಗಳನ್ನು ಸುತ್ತಿ ಕಟ್ಟಿದನು, ಆ ಕೂಡಲೆ ಕೈಕೇಯಿಯು ಬಹು ಸಂತೋಷದಿಂದ ಪುನಃ ಎರಡು ನಾರ್ಮಡಿಗಳನ್ನು ತಂದು ರಾಮನ ಹಸ್ತಗಳಿಗೆ ಕೊಟ್ಟು ದರಿಂದ ರಾಮನು ಅವುಗ ಗನ್ನು ಉಟ್ಟು ಕೊಂಡನು. ಅಲ್ಲಿ ಕೂಡಿದ್ದ ಸಮಸ್ತ ಪ್ರಜಾಸಮೂಹವೂ ಅದನ್ನೆಲ್ಲಾ ನೋಡಿ ಹೋ! ಎಂದು ಕೂಗಿ ದುಃಖಿಸುತ್ತಿರಲು ; ಆಗ ವಶಿಷ್ಠ ಮಹಾಮುನಿಯು ಕೈಕೇಯಿಯ ಮೇಲೆ ಕೋಪಿಸಿಕೊಂಡು--ನೀನು ರಾಮನೊಬ್ಬನು ಮಾತ್ರ ವನವಾ ಸಕ್ಕೆ ಹೋಗಬೇಕೆಂದು ಕೇಳಿಕೊಂಡೆಯಷ್ಟೆ ? ಸೀತೆಯು ಪತಿಭಕ್ತಿಯಿಂದ ಆತನ ಸಂಗಡವೇ ಹೋಗುವವಳಾಗಿದ್ದಾಳೆ, ಆಕೆಯು ನಾರುಮಡಿಗಳನ್ನು ಉಡುವುದಕ್ಕೆ ಏನೂ ಕಾರಣವಿಲ್ಲ ವೆಂದು ಹೇಳಿ ಆಕೆಗೆ ಹದಿನಾಲ್ಕು ವರ್ಷಗಳ ವರೆಗೂ ಸಾಕಾಗು ವಷ್ಟು ವಸ್ತ್ರಾಭರಣಗಳನ್ನು ಕೊಡಿಸಿದನು.
- ಆ ಬಳಿಕ ದಶರಥನು ಸುಮಂತ್ರನನ್ನು ನೋಡಿ-ಎಲೈ ಸಾರಥಿಯೇ, ನನ್ನ ರಥದಲ್ಲಿ ರಾಮನನ್ನು ಕುಳ್ಳಿರಿಸಿ ವನಕ್ಕೆ ಕರೆದು ಕೊಂಡು ಹೋಗಿ ಅಲ್ಲಿ ಬಿಟ್ಟು ಆತನು ಕಳುಹಿಸಿದರೆ ಹಿಂದಿರುಗಿ ಬರುವವನಾಗೆಂದು ಅಪ್ಪಣೆಯನ್ನೀಯಲು ; ಕೂಡಲೆ ಸುಮಂತ್ರನು ನಾಲ್ಕು ಉತ್ತಮಾಶ್ವಗಳಿಂದ ಕೂಡಿ ಶೋಭಾಯಮಾನವಾಗಿರುವ ದಿವ್ಯ ರಥವನ್ನು ತೆಗೆದು ಕೊಂಡು ಬಂದನು. ಆಗ ಸೀತೆಯು ಮೊದಲು ರಥವನ್ನು ಹತ್ತಿದಳು. ಆ ಮೇಲೆ ಲಕ್ಷಣನೂ ಆ ಹಿಂದೆ ರಾಮನೂ ರಥಾರೋಹಣವನ್ನು ಮಾಡಿ ಹೊರಟರು. ಆಗ ದಶರಥನು ಅ೦ತಃಪುರ ಜನಸಮೇತನಾಗಿ ಹಿಂದೆಯೇ ಬಂದನು, ಮತ್ತು ಮಂತ್ರಿಗಳೂ ಸೇನಾಪತಿಗಳೂ ಪರಿವಾರಜನರೂ ಪಟ್ಟಣದ ಜನರೂ ಮುಂತಾದವರೆಲ್ಲಾ ರೋದಿಸುತ್ತ ಹಿಂದೆಯೇ ಬರುತ್ತಿದ್ದರು, ಆಗ ರಾಮನು ಆ ಜನರ ದುಃಖಾತಿಶಯವನ್ನು ನೋಡಿ ಸುಮಂತ್ರನಿಗೆ ಸಂಜ್ಞೆಯನ್ನು ಮಾಡಿ ತ್ವರಿತ ವಾಗಿ ರಥವನ್ನು ನಡೆಸುತ್ತ ಬಂದು ತಮಸಾನದಿಯನ್ನು ದಾಟಿ ಗಂಗಾತೀರದಲ್ಲಿ ವಾಸಮಾಡುತ್ತಿರುವ ಕಿರಾತನಾಯಕನೂ ತನ್ನ ಸ್ನೇಹಿತನೂ ಆದ ಗುಹನೆಂಬವನನ್ನು ಕಂಡು ಆತನು ಮಾಡಿದ ಆತಿಥ್ಯವನ್ನು ಸ್ವೀಕರಿಸಿ ಆತನಿಂದ ಆಲದ ಹಾಲನ್ನು ತರಿಸಿ