ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಥೆ 57 ಕೊಟ್ಟು ಕಳುಹಿಸುವವನಾಗು ಎಂದು ಹೇಳಲು; ಆಗ ದಶರಥನು-ಎಲೈ ಸಾರಥಿಯೇ, ನಾನು ನನ್ನ ಎಲ್ಲಾ ಪತ್ನಿ ಯರೊಡನೆ ಕೂಡಿ ವನಪ್ರಯಾಣಕ್ಕೆ ಸಿದ್ಧನಾಗಿರುವ ರಾಮ ನನ್ನು ನೋಡಲಪೇಕ್ಷಿಸುತ್ತೇನೆ ಎನ್ನಲು; ಆಗ ಸುಮಂತ್ರನು ಶೀಘ್ರವಾಗಿ ಅಂತಃಪುರಕ್ಕೆ ಹೋಗಿ ದಶರಥನ ಅಪೇಕ್ಷೆಯನ್ನು ತಿಳಿಸಲು; ಕೂಡಲೆ ಪಟ್ಟಮಹಿಷಿಯರಾದ ಕೌಸ ಲ್ಯಾಸುಮಿತ್ರೆಯರೂ ಮತ್ತು ದಶರಥನ ಮುನ್ನೂರೈವತ್ತು ಜನ ಪ್ರೇಮಪತ್ನಿ ಯರೂ ಬಂದು ಸೇರಲು; ಆಗ ದಶರಥನು ಸುಮಂತ್ರನನ್ನು ಕಳುಹಿಸಿ ರಾಮನನ್ನು ಒಳಗೆ ಕರಿಸಿಕೊಂಡನು. ರಾಮನು ಬಂದ ಕೂಡಲೆ ಸೀತಾಲಕ್ಷ್ಮಣರೊಡನೆ ಕೂಡಿ ದೂರ ದಲ್ಲಿಯೇ ತಂದೆಗೆ ನಮಸ್ಕರಿಸಿ ಕೈಮುಗಿದು ನಿಂತುಕೊಂಡಿರಲು ; ದಶರಥನು ಪರಮ ಸಾತ್ವಿಕನಾದ ಮಗನನ್ನು ನೋಡಿ-ಹಾ, ರಾಮಾ ! ಎಂದು ನೆಲದ ಮೇಲೆ ಬಿದ್ದು ಮರ್ಲೆಹೊಂದಿದನು. ಕೂಡಲೆ ಕೌಸಲ್ಯ ಯ ಸುಮಿತ್ರೆಯ ಉಳಿದ ಗಾಂಧರ್ವ ವಿವಾಹಿತೆಯರಾದ ಪತ್ನಿ ಯರೂ ರೋದಿಸುತ್ತ ಬಿದ್ದು ಮೈಮರೆತರು. ಆಗ ರಾಮನು ಲಕ್ಷ್ಮಣಸಮೇತನಾಗಿ ಹೋಗಿ ದಶರಥರಾಜನಿಗೆ ಶೈತ್ಯೋಪ ಚಾರಗಳನ್ನು ಮಾಡಿ ಆತನನ್ನು ಎತ್ತಿ ಕೊಂಡು ಮಂಚದ ಮೇಲೆ ಮಲಗಿಸಿ ಕೈಗಳನ್ನು ಮುಗಿದು ನಿಂತುಕೊಂಡು--ಎಲೈ ಮಹಾರಾಜನೇ, ನೀನು ಸರ್ವರಿಗೂ ಒಡೆಯನು. ಆದುದರಿಂದ ಈಗ ನಾನು ನಿನ್ನ ಅಪ್ಪಣೆಯನ್ನು ಕೇಳಿಕೊಳ್ಳುತ್ತೇನೆ, ದಂಡಕಾರಣ್ಯ ವನ್ನು ಕುರಿತು ಹೊರಟಿರುವ ನನ್ನನ್ನು ಕೃಪಾದೃಷ್ಟಿಯಿಂದ ಈಕಿ ಸು, ನಾನು ಎಷ್ಟು ವಿಧವಾಗಿ ತಿಳಿಯಹೇಳಿದಾಗ್ಯೂ ಕೇಳದೆ ಸೀತೆಯ ಲಕ್ಷ್ಮಣನೂ ನನ್ನೊಡನೆಯೇ ಬರುವುದಕ್ಕೆ ಸಿದ್ಧರಾಗಿದ್ದಾರೆ. ಅವರಿಗೂ ಅಪ್ಪಣೆಯನ್ನು ದಯಪಾಲಿಸಬೇಕೆಂದು ಕೇಳಲು; ಆಗ ದಶರಥನು--ಎಲೈ ರಾಮನೇ, ನಾನು ಈ ಕೈಕೇಯಿಯೆಂಬ ಮಹಾ ಮೃತ್ಯುವಿಗೆ ವರದ್ವಯವನ್ನು ಕೊಟ್ಟು ಹುಚ್ಚನಾದೆನು, ಅದು ಕಾರಣ ನೀನೇ ನನ್ನನ್ನು ನಿಗ್ರಹಿಸಿ ಅರಸುತನವನ್ನು ಮಾಡುತ್ತ ಅಯೋಧ್ಯೆಯಲ್ಲಿ ಸುಖದಲ್ಲಿರು ಎಂದು ಹೇಳಿ ಲು ; ಅದಕ್ಕೆ ರಾಮನು--ಎಲೈ ತಂದೆಯೇ, ನೀನೇ ಸಾವಿರಾರು ಸಂವತ್ಸರಗಳ ವರೆ ಗೂ ಭೂಮಿಗೆ ಒಡೆಯನಾಗಿರು. ನಾನು ಅರಣ್ಯದಲ್ಲೇ ವಾಸಿಸುವೆನು, ನಿನ್ನನ್ನು ಅಗತ್ಯವಂತನನ್ನಾಗಿ ಮಾಡಿ, ನಾನು ಈ ರಾಜ್ಯವನ್ನು ಅನುಭವಿಸುವುದು ಲಜ್ಜೆಗೂ ಅಪಮಾನಕ್ಕೂ ಕಾರಣವಾಗಿರುವುದು, ಆದುದರಿಂದ ಹದಿನಾಲ್ಕು ಸಂವತ್ಸರಗಳ ವರೆ ಗೂ ವನವಾಸವನ್ನು ಮಾಡಿ ನಿನ್ನ ಪ್ರತಿಜ್ಞೆಯನ್ನು ನೆರವೇರಿಸಿ ತಿರಿಗಿ ನಿನ್ನ ಪಾದಸನ್ನಿಧಿಗೆ ಬರುವೆನು ಎಂದು ಹೇಳಿ ಒಡಂಬಡಿಸಿ ಆತನಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ ಹೊರಡುವುದಕ್ಕೆ ಉದ್ಯುಕ್ತನಾಗಲು; ಆಗ ದಶರಥರಾ ಜನು ಸುಮಂತ್ರನನ್ನು ನೋಡಿ ನನ್ನ ಸೇನಾಪತಿಗಳೂ ಪರಿವಾರದವರೂ ರಾಮನ ಸಂಗಡವೇ ಹೋಗಲಿ, ಮತ್ತು ಅಡಿಗೆಯವರೂ ದಾಸಭ್ಯತ್ಯರೂ ದಾಸೀಜನಗಳೂ ಗಾಡಿಗಳೂ ರಾಮನೊಡನೆಯೇ ಹೋಗಲಿ, ಭೋಜನಸಾಮ ಗ್ರಿಗಳಲ್ಲೂ ವಸ್ತ್ರಾಭರಣಗಳಲ್ಲೂ ಚತುರ್ದಶ ಸಂವತ್ಸರಗಳ ವರೆಗೂ ಸ್ವಲ್ಪವೂ ನ್ಯೂನತೆಯಿಲ್ಲದಂತೆ ಎಲ್ಲವನ್ನೂ ತೆಗೆಯಿಸಿಕೊಂಡು ನೀನೂ ರಾಮನ ಸಂಗ
ಪುಟ:ಕಥಾ ಸಂಗ್ರಹ - ಭಾಗ ೨.djvu/೬೭
ಗೋಚರ