ಪುಟ:ಕಥಾ ಸಂಗ್ರಹ - ಭಾಗ ೨.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


66 ಕಥಾಸಂಗ್ರಹ-೪ ನೆಯ ಭಾಗ ಆ ಜಟಾಯುವನ್ನು ಹೊಡೆದು ಮರ್ಛಗೊಳಿಸಿ ಭೂಮಿಗುರುಳಿಸಿ ಮೊದಲು ತುಂಡು ತುಂಡಾಗಿ ಬಿದ್ದಿದ್ದ ರಥವನ್ನೇ ಸರಿಯಾಗಿ ಜೋಡಿಸಿ ತಿರಿಗಿ ಅದರ ಮೇಲೆ ಸೀತೆಯನ್ನು ಕುಳ್ಳಿರಿಸಿಕೊಂಡು ಗಗನಮಾರ್ಗದಲ್ಲಿ ಹೋಗುತ್ತಿರಲು ; ಆಗ ಸೀತೆಯು-ಲೋಕೈಕ ವೀರರಾದ ರಾಮಲಕ್ಷ್ಮಣರೇ ! ಎಂದು ಬಾರಿಬಾರಿಗೂ ಹಂಬಲಿಸುತ್ತ ಎಲ್ಲಾ ದಿಕ್ಕುಗ ಳನ್ನು ನೋಡಿ ಬಾಯ್ದಿಡುತ್ತ ಕಡೆಗೆ ಋಷ್ಯಮೂಕವೆಂಬ ಪರ್ವತಶಿಖರದಲ್ಲಿ ನಳ ನೀಲ ಹನುಮಂತರೇ ಮೊದಲಾದ ಕಪಿನಾಯಕರೊಡನೆ ಕುಳಿತಿದ್ದ ಸುಗ್ರೀವನೆಂಬ ಕಪಿರಾಜ ನನ್ನು ನೋಡಿ, ತಾನು ಉಟ್ಟಿದ್ದ ಸೀರೆಯ ಸೆರಗನ್ನು ಸ್ವಲ್ಪ ಮಾತ್ರ ಹರಿದು ತಾನು ತೊಟ್ಟಿದ್ದ ತೊಡವುಗಳನ್ನು ತೆಗೆದು ಅದರಲ್ಲಿಟ್ಟು ಗಂಟುಕಟ್ಟಿ ರಾಮನು ತನ್ನನ್ನು ಹುಡುಕುತ್ತ ಬಂದರೆ ಇವರು ಆತನಿಗೆ ಇವುಗಳನ್ನು ಕೊಡುವರೆಂಬ ಯೋಚನೆಯಿಂದ ರಾವಣನು ಕಾಣದ ಹಾಗೆ ಅವರ ಬಳಿಗೆಸೆದಳು. ರಾವಣನು-ಯಾವಾಗ ರಾಮನು ಹಿಂದೆ ಬರುವನೋ ಎಂಬ ಭಯದಿಂದ ಕೂಡಿದವನಾಗಿ ಪ್ರತಿಕ್ಷಣದಲ್ಲಿಯ ಹಿಂದಿರುಗಿ ನೋಡುತ್ತ ತೇರನ್ನು ಬೇಗ ಬೇಗ ನಡಿಸುತ್ತ ಕಡಲನ್ನು ದಾಟಿ ಲಂಕಾನಗರವನ್ನು ಸೇರಿ ತನ್ನ ಅಂತಃಪುರನಾರೀಜನವಿಹಾ ರೋಚಿತವಾದ ಅಶೋಕೋದ್ಯಾನದಲ್ಲಿ ಶಿಂಶು ಪವೆಂಬ ವೃಕ್ಷದ ಕೆಳಗೆ ಸೀತೆಯನ್ನಿರಿಸಿ ಅಲ್ಲಿ ತ್ರಿಜಟೆ ಸರಮೆ ಎಂಬವರೇ ಮೊದಲಾದ ರಾಕ ಸಸ್ತ್ರೀಯರನ್ನು ಕಾವಲಿಟ್ಟು ತನ್ನ ಕುಲಗೋತ್ರಗಳನ್ನೆಲ್ಲಾ ನಿರ್ಮಲಮಾಡುವುದರಲ್ಲಿ ಮೃತ್ಯು ಪ್ರಾಯಳಾಗಿರುವವ ಳನ್ನು ತಂದು ತನ್ನ ಮನೆಯಲ್ಲಿ ಇಟ್ಟು ಕೊಂಡೆನೆಂದು ತಿಳಿಯದೆ ಉLಮೆಯಿಂದ ಕೂಡಿದವನಾಗಿ ತನ್ನ ತಂಗಿಯಾದ ಶೂರ್ಪನಖಿಯನ್ನು ಕರತರಿಸಿ ಆಕೆಗೆ ಸೀತೆಯನ್ನು ತೋರಿಸಿ -ಇದೋ, ನೋಡು, ನಿನ್ನ ಕಿವಿಮಗುಗಳನ್ನು ಕೊಯ್ಯು ಮಾನಭಂಗ ಪಡಿಸಿದ ರಾಮನಿಗೆ ಪ್ರತಿಫಲವಾಗಿ ಆತನ ಹೆಂಡತಿಯಾದ ಈ ಸೀತೆಯನ್ನು ತಂದು ಸೆರೆಯಲ್ಲಿಟ್ಟಿದ್ದೇನೆಂದು ಹೇಳಿ ಅಂತಃಪುರಕ್ಕೆ ಹೋಗಿ--ನಾನು ಕೃತಕೃತ್ಯನಾದೆನೆಂದು ತಿಳಿದು ಸಂತೋಷಸಮುದ್ರದಲ್ಲಿ ಮುಳುಗೇಳುತ್ತಿದ್ದನು. ಇತ್ತಲಾ ರಾಮನು ಮಾಯಾಮೃಗರೂಪಿಯಾದ ಮಾರೀಚನೆಂಬ ದುಷ್ಟ ರಾಕ್ಷಸನು ಮೋಸದಿಂದ ತನ್ನ ಧ್ವನಿಯಂತೆ ಹಾ ಸೀತೆ ! ಹಾ ಲಕ್ಷ್ಮಣಾ ! ಎಂದು ಕೂಗಿದ ಧ್ವನಿಯನ್ನು ಕೇಳಿದುದರಿಂದ ಸೀತೆಯು ಗಾಬರಿಯಾಗಿ ನನ್ನನ್ನು ನೋಡುವು ದಕ್ಕೋಸ್ಕರ ಲಕ್ಷ್ಮಣನನ್ನು ಎಲ್ಲಿ ಕಳುಹಿಸಿಬಿಡುವಳೋ ! ಆ ವೇಳೆಯಲ್ಲಿ ರಾಕ್ಷಸರು ಬಂದು ಸೀತೆಯನ್ನು ಏನು ಮಾಡುವರೋ ! ಎಂದು ಯೋಚಿಸಿ ಕಳವಳಗೊಂಡು ತನ್ನ ಆಶ್ರಮವನ್ನು ಕುರಿತು ಬೇಗ ಬೇಗ ಬರುತ್ತ ದಾರಿಯಲ್ಲಿ ಬರುತ್ತಿರುವ ಲಕ್ಷ್ಮಣನನ್ನು ಕಂಡು-ಆಹಾ ! ನಾನು ಮೊದಲು ಯೋಚಿಸಿದಂತೆಯೇ ಆಯಿತು. ಸೀತೆಯು ಏನಾಗಿರುವಳೋ ! ಎಂದು ಬಹು ಚಿಂತಾಕ್ರಾಂತನಾಗಿ ಲಕ್ಷ್ಮಣನೊಡನೆ ಕೂಡಿ ತನ್ನ ಪರ್ಣಶಾಲೆಗೆ ಬಂದು ನೋಡಿ ತನ್ನ ಜೀವರತ್ನ ವನ್ನು ಕಾಣದೆ ಕಾಡಾನೆಯಿಂದ ಮುರಿದಿಡಲ್ಪಟ್ಟ ಸಾಲವೃಕ್ಷದ ಕೊಂಬಿನಂತೆ ಭೂಮಿಯಲ್ಲಿ ಬಿದ್ದು ಮೂರ್ಛಿತನಾಗಿ ಲಕ್ಷ್ಮಣನು ಮಾಡಿದ ಶೈತ್ಯೋಪಚಾರದಿಂದ ಎಚ್ಚೆತ್ತು--ಹಾ ! ಪ್ರಿಯೇ ! ಜಾನಕೀ!